ಪಬ್ ಮೇಲೆ ಪೊಲೀದರ ದಾಳಿಯಿಂದ ವರ ಪಡೆದುಕೊಂಡ ಯುವತಿ, ಆಗಿತ್ತು ಕೆಟ್ಟ ಪ್ರಚಾರ, ಆದರೆ ಒಲಿದು ಬಂತು ಅದೃಷ್ಟ. ಏನಾಗಿದೆ ಗೊತ್ತೇ?

ಪ್ರಚಾರ ಎನ್ನುವುದು ಎಲ್ಲರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದು ಪಾಸಿಟಿವ್ ಪ್ರಚಾರವಾದರು ಸರಿ, ನೆಗಟಿವ್ ಪ್ರಚಾರವಾದರು ಸರಿ ಜನರಿಗೆ ಜನಪ್ರಿಯತೆ ತಂದುಕೊಡುತ್ತದೆ. ಅದರಲ್ಲೂ ಚಿತ್ರರಂಗಕ್ಕೆ ಸಂಬಂಧಿಸಿರುವವಾದರೆ, ವಿವಾದಗಳು ಹೆಚ್ಚಿನ ಪ್ರಚಾರವನ್ನೇ ತಂದು ಕೊಡುತ್ತದೆ. ನೆಗಟಿವ್ ವಿಚಾರಕ್ಕೆ ಆದರೂ ಪ್ರಚಾರ ಸಿಕ್ಕಿದರೆ, ಅವರ ಜನಪ್ರಿಯತೆ ಹೆಚ್ಚಾಗುತ್ತದೆ. ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಒಂದು ವಿವಾದ ಸಹ ಇದೇ ರೀತಿ, ಒಬ್ಬ ಯೂಟ್ಯೂಬರ್ ಗೆ ಒಳ್ಳೆಯದೇ ಆಗಿದೆ.

ಇತ್ತೀಚೆಗೆ ಹೈದರಾಬಾದ್ ನಲ್ಲಿ ಪಡ್ಡಿಂಗ್ ಮತ್ತು ವಿಂಕ್ ಪಬ್ ಮೇಲೆ ಪೊಲೀಸರು ದಾಳಿ ಮಾಡಿದ್ದರು, ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಈ ದಾಳಿ ನಡೆದು, ಖ್ಯಾತ ನಟ ಚಿರಂಜೀವಿ ಅವರ ಕುಟುಂಬದ ನಿಹಾರಿಕ ಕೊನಿಡೇಲಾ, ಹಾಗೂ ಇನ್ನಿತರ ಸೆಲೆಬ್ರಿಟಿಗಳು ಪೊಲೀಸ್ ಸ್ಟೇಶನ್ ನಲ್ಲಿರುವ ಹಾಗಿತ್ತು. ಅದೇ ದಿನ ಯೂಟ್ಯೂಬರ್ ಆಗಿದ್ದ ಖುಷಿತ ಕಲುಪು ಸಹ ಅಂದು ಪಬ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ಘಟನೆ ಬಳಿಕ, ಯಾವ ಸೆಲೆಬ್ರಿಟಿ ಸಹ ಅಂದು ಪೊಲೀಸ್ ಸ್ಟೇಶನ್ ಗೆ ಹೋಗಿದ್ದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ, ಆದರೆ ಖುಷಿತ ಈ ವಿಚಾರದ ಬಗ್ಗೆ ಮುಕ್ತವಾಗಿ, ಮಾಧ್ಯಮದ ಮುಂದೆ ಮಾತನಾಡಿದ್ದರು. ತಾವು ಅಂದು ಪಬ್ ಗೆ ಡ್ರಗ್ಸ್ ಗಾಗಿ ಹೋಗಿರಲಿಲ್ಲ. ಚೀಸ್ ಮಿರ್ಚಿ ತಿನ್ನಲು ಹೋಗಿದ್ದೆ ಎಂದು ಹೇಳಿದ್ದರು..

Kushita | ಪಬ್ ಮೇಲೆ ಪೊಲೀದರ ದಾಳಿಯಿಂದ ವರ ಪಡೆದುಕೊಂಡ ಯುವತಿ, ಆಗಿತ್ತು ಕೆಟ್ಟ ಪ್ರಚಾರ, ಆದರೆ ಒಲಿದು ಬಂತು ಅದೃಷ್ಟ. ಏನಾಗಿದೆ ಗೊತ್ತೇ?
ಪಬ್ ಮೇಲೆ ಪೊಲೀದರ ದಾಳಿಯಿಂದ ವರ ಪಡೆದುಕೊಂಡ ಯುವತಿ, ಆಗಿತ್ತು ಕೆಟ್ಟ ಪ್ರಚಾರ, ಆದರೆ ಒಲಿದು ಬಂತು ಅದೃಷ್ಟ. ಏನಾಗಿದೆ ಗೊತ್ತೇ? 2

ನೆಗಟಿವ್ ಆಗಿ ಪ್ರಚಾರ ಆಗುತ್ತಿದ್ದರು ಸಹ, ಧೈರ್ಯವಾಗಿ ಈ ವಿಚಾರದ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದರು. ಈ ವಿಚಾರದಲ್ಲಿ ಧೈರ್ಯದಿಂದ ಮಾತನಾಡಿದ್ದು, ಖುಷಿತ ಅವರಿಗೆ ಒಳ್ಳೆಯ ರೀತಿಯಲ್ಲಿ ಹೆಸರು ತಂದುಕೊಟ್ಟಿತು. ಈ ಹೇಳಿಕೆಗಳನ್ನು ನೀಡಿದ ಬಳಿಕ, ಖುಷಿಕ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಸಹ ಹೆಚ್ಚಾದರು, ಜೊತೆಗೆ, ಇವರ ರೀಲ್ಸ್ ಗಳಿಗೂ ಸಹ ಹೆಚ್ಚಿಗೆ ವ್ಯೂ ಬರಲು ಶುರುವಾಯಿತು. ಇದರಿಂದಾಗಿ ಖುಷಿತ ಕಲುಪು ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಹ ಬರಲು ಶುರುವಾಗಿವೆ. ವಿವಾದದಿಂದಾಗಿ ಖುಷಿತ ಅವರಿಗೆ ಒಳ್ಳೆಯದೇ ಆಗಿ, ಜನಪ್ರಿಯತೆ ಜೊತೆಗೆ ಒಳ್ಳೆಯ ಅವಕಾಶಗಳು ಸಹ ಸಿಗುತ್ತಿವೆ.

Comments are closed.