ಪಾಂಡ್ಯ ನಡುವಳಿಕೆ ಮೇಲೆ ಬೇಸರ ವ್ಯಕ್ತ ಪಡಿಸಿದ ಗುಜರಾತ್ ತಂಡದ ಕೋಚ್ ಆಶೀಶ್ ನೆಹ್ರಾ. ಪಾಂಡ್ಯ ಮಾಡಿದ್ದು ಅತಿಯಾಯ್ತು ಎಂದ ನೆಟ್ಟಿಗರು. ಯಾಕೆ ಗೊತ್ತೇ?

ಹಾರ್ದಿಕ್ ಪಾಂಡ್ಯ ಅವರಿ ಈ ಬಾರಿ ಐಪಿಎಲ್ ನಲ್ಲಿ ಗುಜರಾತ್ ತಾಜಡದ5 ಕ್ಯಾಪ್ಟನ್ ಆಗಿ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಅದ್ಭುತವಾದ ನಾಯಕತ್ವ ಮತ್ತು ಆಟದ ಪ್ರದರ್ಶನದಿಂದ ಗುಜರಾತ್ ತಂಡ ಕಪ್ ಗೆದ್ದಿತು. ಅದೇ ಕಾರಣದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೊಮ್ಮೆ ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಿಕೊಳ್ಳಲಾಯಿತು. ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ಆಲ್ ರೌಂಡರ್ ಹಾಗೂ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಆದರೆ ಮೊನ್ನೆ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಮಾಡಿದ ಒಂದು ಕೆಲಸದಿಂದ ಕೋಚ್ ಆಗಿರುವ ಆಶಿಶ್ ನೆಹ್ರಾ ಅವರ ಕೋಪಕ್ಕೆ ಗುರಿಯಾಗಿದ್ದಾರೆ.

ಪಂದ್ಯದಲ್ಲಿ ಇಶಾನ್ ಕಿಶಾನ್ ಅವರ ಸ್ಥಾನ ಬಹಳ ಮಹತ್ವದ್ದಾಗಿತ್ತು, 48 ಬಾಲ್ ಗಳಲ್ಲಿ 76 ರನ್ ಗಳನ್ನು ಗಳಿಸಿದರು ಇಶಾನ್ ಕಿಶನ್. ಇವರ ಬಳಿಕ ಹಾರ್ದಿಕ್ ಪಾಂಡ್ಯ ಅವರು ಮತ್ತು ಕ್ಯಾಪ್ಟನ್ ರಿಷಬ್ ಪಂತ್ ಅಖಾಡಕ್ಕೆ ಇಳಿದರು, ಪಂತ್ ಅವರು ಔಟ್ ಆದ ಬಳಿಕ, ದಿನೇಶ್ ಕಾರ್ತಿಕ್ ಕ್ರೀಸ್ ಗೆ ಬಂದರು. ಹಾರ್ದಿಕ್ ಪಾಂಡ್ಯ ಅವರ ಉತ್ತಮವಾದ ಬ್ಯಾಟಿಂಗ್ ಸಾಮರ್ಥ್ಯದಿಂದಲೇ ಟೀಮ್ ಇಂಡಿಯಾ 20 ಓವರ್ ಗಳಲ್ಲಜ್ 211 ರನ್ ಗಳನ್ನು ಕಲೆಹಾಕಲು ಸಾಧ್ಯವಾಯಿತು. ಆದರೆ ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಸ್ಟ್ರೈಕ್ ಕೊಡದೆ ಇದ್ದದ್ದು ಸರಿಯಲ್ಲ ಎನ್ನುವ ಅಭಿಪ್ರಾಯ ಈಗ ಕೇಳಿ ಬರುತ್ತಿದೆ. ಹಾರ್ದಿಕ್ ಪಾಂಡ್ಯ ಸಿಂಗಲ್ ರನ್ ತೆಗೆದುಕೊಂಡು ದಿನೇಶ್ ಕಾರ್ತಿಕ್ ಅವರಿಗೆ ಸ್ಟ್ರೈಕ್ ಕೊಡಬಹುದಿತ್ತು. ಆದರೆ ಹಾರ್ದಿಕ್ ಪಾಂಡ್ಯ ಸ್ಟ್ರೈಕ್ ಕೊಡಲಿಲ್ಲ, ಇದರಿಂದಾಗಿ ಸ್ವತಃ ಆಶಿಷ್ ನೆಹ್ರಾ ಅವರೇ ಕೋಪಗೊಂಡಿದ್ದಾರೆ.

Pandya nehra | ಪಾಂಡ್ಯ ನಡುವಳಿಕೆ ಮೇಲೆ ಬೇಸರ ವ್ಯಕ್ತ ಪಡಿಸಿದ ಗುಜರಾತ್ ತಂಡದ ಕೋಚ್ ಆಶೀಶ್ ನೆಹ್ರಾ. ಪಾಂಡ್ಯ ಮಾಡಿದ್ದು ಅತಿಯಾಯ್ತು ಎಂದ ನೆಟ್ಟಿಗರು. ಯಾಕೆ ಗೊತ್ತೇ?
ಪಾಂಡ್ಯ ನಡುವಳಿಕೆ ಮೇಲೆ ಬೇಸರ ವ್ಯಕ್ತ ಪಡಿಸಿದ ಗುಜರಾತ್ ತಂಡದ ಕೋಚ್ ಆಶೀಶ್ ನೆಹ್ರಾ. ಪಾಂಡ್ಯ ಮಾಡಿದ್ದು ಅತಿಯಾಯ್ತು ಎಂದ ನೆಟ್ಟಿಗರು. ಯಾಕೆ ಗೊತ್ತೇ? 2

“ಕೊನೆಯ ಓವರ್ ನಲ್ಲಿ ಪಾಂಡ್ಯ ಸಿಂಗಲ್ ತೆಗೆದುಕೊಳ್ಳಬಹುದಿತ್ತು, ಮತ್ತೊಂದು ಕೊನೆಯಲ್ಲಿ ಇದ್ದದ್ದು ದಿನೇಶ್ ಕಾರ್ತಿಕ್, ನಾನಲ್ಲ..” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನೆಹ್ರಾ. ಜೊತೆಗೆ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಸಹ ಹೊಗಳಿದ್ದಾರೆ, ಹಾರ್ದಿಕ್ ಪಾಂಡ್ಯ ಎಲ್ಲಾ ರೀತಿಯಲ್ಲೂ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಾರೆ, ಅದನ್ನು ನಾವು ಟಿ20, ಒಡಿಐ ಎಲ್ಲಾ ಪಂದ್ಯಗಳಲ್ಲೂ ನೋಡಿದ್ದೇವೆ. ಅಂತಹ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವುದರಿಂದ ಅವರು 3 ಅಥವಾ 4 ಯಾವುದೇ ಪೊಸಿಷನ್ ನಲ್ಲಿ ಬ್ಯಾಟ್ ಮಾಡಬಹುದು. ಗುಜರಾತ್ ತಂಡದ ಕ್ಯಾಪ್ಟನ್ ಆಗಿ ಬೌಲಿಂಗ್ ಸಹ ಮಾಡಿದರು, ಅದಕ್ಕೂ ಮೊದಲು ಅವರು ಹೆಚ್ಚಾಗಿ ಬೌಲಿಂಗ್ ಮಾಡುತ್ತಿರಲಿಲ್ಲ. ಮೊದಲಿನ ಹಾಗೆ ಅವರು ಮರಳಿ ಬಂದಿದ್ದಾರೆ.” ಎಂದು ಹೇಳಿದ್ದಾರೆ ನೆಹ್ರಾ.

Comments are closed.