ಬೆಂಗಳೂರಿಗೆ ಬಂದ ದೀಪಿಕ್ ಪಡುಕೋಣೆ, ಹೊಸ ಮನೆ ಖರೀದಿ ಮಾಡಿದ್ದು ಎಷ್ಟು ಕೋಟಿಗೆ ಗೊತ್ತಾ?? ತಿಳಿದರೆ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ, ಹಿಂದಿ ಸಿನಿಮಾ ತಾರೆಯರು ಹೆಚ್ಚಾಗಿ ಮುಂಬೈ ಹಾಗೂ ದೆಹಲಿಯಲ್ಲಿ ಮನೆ ಖರೀದಿಸೋದು ವಾಡಿಕೆ. ಸಾಕಷ್ಟು ಹಣವನ್ನು ವ್ಯಯಿಸಿ ತಮಗೆ ಬೇಕಾದ ಹಾಗೆ ಐಷಾರಾಮಿ ಮನೆಯನ್ನು ಕಟ್ಟಿಸುತ್ತಾರೆ. ಕೆಲವೊಮ್ಮೆ ಈ ಮನೆಗಳನ್ನು ನೋಡುವುದೇ ಸಂಭ್ರಮ. ಅಷ್ಟು ಅದ್ಭುತವಾಗಿರುತ್ತೆ ಆ ಮನೆಗಳು ಅಥವಾ ಬಂಗಲೆಗಳು ಎನ್ನಬಹುದು.

ಇನ್ನು, ಇನ್ನೂ ಹೆಚ್ಚು ಹೂಡಿಕೆ ಮಾಡಲು ಸಾಮರ್ಥ್ಯ ಇರುವವರು ಶ್ರೀಲಂಕಾದಂಥ ದೇಶದಲ್ಲಿ ದ್ವೀಪವನ್ನೇ ಖರೀದಿಸಬಹುದು. ಜಾಕ್ಲಿನ್ ಒಂದು ದ್ವೀಪದ ಓನರ್ ಎನ್ನುವುದನ್ನು ನಿಮಗೆ ನೆನಪು ಮಾಡಬೇಕಿಲ್ಲ ಅಲ್ಲವೇ? ಹಾಗೆಯೇ ಬಾಲಿವುಡ್ ನ ಬಿಗ್ ಬಿ, ಅಕ್ಷಯ್ ಕುಮಾರ್, ಶಾರೂಖ್ ಹೀಗೆ ಪತಿಯೊಬ್ಬರೂ ಕೂಡ ಬೇರೆ ಬೇರೆ ಪ್ರದೇಶಗಳಲ್ಲಿ ಹೂಡಿಕೆ ಮಾಡುತ್ತಾರೆ, ಮನೆಗಳನ್ನು ಖರೀದಿಸುತ್ತಾರೆ. ಇನ್ನು ಈ ಪಟ್ಟಿಗೆ ಇತ್ತೀಚಿಗೆ ಡಿಂಪಲ್ ಸುಂದರಿ ದೀಪಿಕಾ ಪಡುಕೋಣೆ ಕೂಡ ಸೇರಿಕೊಂಡಿದ್ದಾರೆ. ಹಾಗಾದರೆ ದೀಪಿಕಾ ಹೂಡಿಕೆ ಮಾಡಿದ್ದು ಎಲ್ಲಿ? ತಿಳಿಯೋಣ ಬನ್ನಿ

ಬಾಲಿವುಡ್ ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ. ಇತ್ತೀಚಿಗೆ ಕರೋನಾ ಕಾರಣದಿಂದಾಗಿ ಯಾವ ಚಿತ್ರಗಳೂ ಬಿಡುಗಡೆಯಾಗದೇ ಇರುವ ಕಾರಣಕ್ಕೆ ದೀಪಿಕಾ ಅವರ ಸಿನಿಮಾಗಳು ಅಷ್ಟಾಗಿ ಕಾಣುತ್ತಿಲ್ಲ. ಆದರೆ ದೀಪಿಕಾ ಎಂಥ ಪಾತ್ರವನ್ನಾದರೂ ನಿಭಾಯಿಸುವಂಥ ಉತ್ತಮ ನಟಿಯಾಗಿದ್ದು, ಅವರಿಗಾಗಿಯೇ ಸಾಕಷ್ಟು ನಿರ್ದೇಶಕರು ಕಥೆಯನ್ನು ಸಿದ್ಧಪಡಿಸುತ್ತಾರಂತೆ. ಇದೀಗ ನಟಿ ದೀಪಿಕಾ ಪಡುಕೋಣೆ ಮತ್ತು ಅವರ ತಂದೆ, ಪ್ರಕಾಶ್‌ ಪಡುಕೋಣೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದಲ್ಲಿ ಐಷಾರಾಮಿ ಫ್ಲಾಟ್‌ ಒಂದನ್ನು ಖರೀದಿಸಿದ್ದಾರೆ. ಇದು ದುಬಾರಿ ಫ್ಲಾಟ್ ಎಂದು ಹೇಳಲಾಗುತ್ತಿದೆ.

ಎಂಬೆಸ್ಸಿ ಗ್ರೂಪ್ ಈ ಅಪಾರ್ಟ್‌ಮೆಂಟ್‌ ಅನ್ನು 600 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಫ್ಲಾಟ್ ಗಳು 3451 ಚದರ ಅಡಿ ವಿಸ್ತೀರ್ಣ ಹಾಗೂ 2 ಕಾರ್‌ಗಳ ಪಾರ್ಕಿಂಗ್‌ ಸೌಲಭ್ಯ ಹೊಂದಿದೆ. ಇನ್ನು ಈ ಫ್ಲಾಟ್ ನ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ. ದೀಪಿಕಾ ಪಡುಕೋಣೆ ಕೂಡ ಈ ನಿರ್ಮಾಣ ಸಂಸ್ಥೆಯ ಆರಂಭಿಕ ಹೂಡಿಕೆದಾರರೂ ಹೌದು. ಹಾಗಾಗಿ ಇನ್ನು ದೀಪಿಕಾ ಆಗಾಗ ಬೆಂಗಳೂರಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ ಎನ್ನಬಹುದು.

Comments are closed.