ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ರವರ ಪ್ರೀತಿ ಮುರಿದು ಬಿದ್ದದ್ದು ಕೇವಲ ಒಂದು ಬಿಲ್ ನಿಂದ, ಅಂತದ್ದು ಏನಿತ್ತು ಗೊತ್ತೇ ಬಿಲ್ ನಲ್ಲಿ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದ ಸೆಲೆಬ್ರಿಟಿಗಳು ಒಂದಲ್ಲ ಒಂದು ಕಾರಣದಿಂದ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಅದು ಈಗ ನಡೆಯುತ್ತಿರುವುದೋ ಅಥವಾ ಹಳೆಯದೋ ಎನ್ನುವುದು ಮುಖ್ಯವಲ್ಲ ಒಟ್ಟಾರೆ ಸುದ್ದಿಯಲ್ಲಿರುತ್ತಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿಯಾಗಿರುವ ದೀಪಿಕಾ ಪಡುಕೋಣೆ ಹಾಗೂ ವಿಜಯಮಲ್ಯ ರವರ ಪುತ್ರ ಸಿದ್ಧಾರ್ಥ ಮಲ್ಯ ಅವರ ಪ್ರೇಮ ಸಂಬಂಧದ ಕುರಿತಂತೆ.

ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಸಿದ್ಧಾರ್ಥ್ ಮಲ್ಯ ಹಾಗೂ ದೀಪಿಕಾ ಪಡುಕೋಣೆ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದರು. ಬೇಟಿಂಗ್ ಹಾಗೂ ಪ್ರೀತಿ ಸಂಬಂಧಗಳ ವಿಚಾರವಾಗಿ ಸುದ್ದಿಯಾಗಿದ್ದ ಇವರು ಸಡನ್ನಾಗಿ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿ ಮಾಡಿತ್ತು. ಆದರೆ ಅಂದಿನ ಕಾಲಕ್ಕೆ ಇದಕ್ಕೆ ಕಾರಣ ಏನೆಂಬುದು ಅಷ್ಟಾಗಿ ತಿಳಿದು ಬಂದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಸರಿಯಾದ ಕಾರಣ ತಿಳಿದು ಬಂದಿದ್ದು ಎಲ್ಲರೂ ಕೂಡ ಈ ಕುರಿತಂತೆ ಚರ್ಚಿಸುತ್ತಿದ್ದಾರೆ.

deepika siddarth malya 1 | ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ರವರ ಪ್ರೀತಿ ಮುರಿದು ಬಿದ್ದದ್ದು ಕೇವಲ ಒಂದು ಬಿಲ್ ನಿಂದ, ಅಂತದ್ದು ಏನಿತ್ತು ಗೊತ್ತೇ ಬಿಲ್ ನಲ್ಲಿ??
ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ರವರ ಪ್ರೀತಿ ಮುರಿದು ಬಿದ್ದದ್ದು ಕೇವಲ ಒಂದು ಬಿಲ್ ನಿಂದ, ಅಂತದ್ದು ಏನಿತ್ತು ಗೊತ್ತೇ ಬಿಲ್ ನಲ್ಲಿ?? 3

ಇವರಿಬ್ಬರ ಸ್ನೇಹ ಸಂಬಂಧದ ಪರಿಚಯ ಆರಂಭವಾಗಿದ್ದು ಐಪಿಎಲ್ ಪಂದ್ಯಾಟಗಳಲ್ಲಿ. ನಿಮಗೆ ತಿಳಿದಿರಬಹುದು ಒಂದು ಕಾಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಸಪೋರ್ಟ್ ಮಾಡುವುದಕ್ಕೆ ದೀಪಿಕಾ ಪಡುಕೋಣೆ ಅವರು ಆಗಾಗ ಬರುತ್ತಿದ್ದರು. ಇದೇ ಸಂದರ್ಭದಲ್ಲಿ ಸಿದ್ಧಾರ್ಥ್ ಮಲ್ಯ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ಕೂಡ ಕಿಸ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿದ್ದವು. ಈ ಫೋಟೋ ಹೊರಗೆ ಬಂದಿದ್ದೇ ತಡ ಇವರಿಬ್ಬರ ನಡುವೆ ಪ್ರೀತಿ ಇದೆ ಮದುವೆ ಸದ್ಯದಲ್ಲಿ ಆಗುತ್ತಾರೆ ಎನ್ನುವುದಾಗಿ ಗಾಳಿಸುದ್ದಿಗಳು ಹರಿದಾಡಲು ಆರಂಭಿಸುತ್ತವೆ.

ಇವರಿಬ್ಬರು ಎಲ್ಲಾ ಕಾರ್ಯಕ್ರಮಗಳಲ್ಲಿ ಕೂಡ ಜೊತೆಯಾಗಿ ಹೋಗುತ್ತಿದ್ದರು. ಈ ಕುರಿತಂತೆ ನಟಿ ದೀಪಿಕಾ ಪಡುಕೋಣೆ ಅವರು ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ. ಆದರೆ ವಿಜಯ್ ಮಲ್ಯ ರವರ ಪುತ್ರ ಸಿದ್ಧಾರ್ಥ ಮಲ್ಯ ತಮ್ಮಿಬ್ಬರ ಸಂಬಂಧ ಕುರಿತಂತೆ ಮಾಧ್ಯಮದ ಬಳಿ ಹೇಳಿಕೊಂಡಿದ್ದರು. ಇಷ್ಟೊಂದು ಚೆನ್ನಾಗಿದ್ದಾರೆ ಪ್ರೇಮ ಪಕ್ಷಿಗಳು ಸಡನ್ನಾಗಿ ಈ ಸಂಬಂಧವನ್ನು ಕಳೆದುಕೊಂಡಿದ್ದು ಯಾರೆಂಬುದನ್ನು ಎಲ್ಲರೂ ಕೂಡ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಯೋಚಿಸಿದ್ದರು ಕೂಡ ತಿಳಿಯುವುದು ಸಾಧ್ಯವಾಗಿರಲಿಲ್ಲ. ಆದರೆ ಈ ಕುರಿತಂತೆ ಈಗ ನಿಜವಾದ ಸತ್ಯ ಹೊರಬಂದಿದೆ.

ಹೌದು ಇದು ಪ್ರತಿಷ್ಠಿತ ಮ್ಯಾಗಜಿನ್ ಒಂದು ವರದಿ ಮಾಡಿರುವ ಲೇಖನಿಯಿಂದ ತಿಳಿದುಬಂದಿದೆ. ಇವರಿಬ್ಬರ ಬೇರೆ ಆಗುವಿಕೆಗೆ ಕಾರಣವಾಗಿದ್ದು ಅಂತಸ್ತು ಹಾಗೂ ಆಸ್ತಿಯ ತಾರತಮ್ಯತೆ ಎಂಬುದಾಗಿ ತಿಳಿದುಬಂದಿದೆ. ಹೌದು ದೀಪಿಕಾ ಪಡುಕೋಣೆ ಅವರು ಹೇಳುವಂತೆ ಹೋಟೆಲ್ವೊಂದರಲ್ಲಿ ಊಟಕ್ಕೆ ಹೋಗಿದ್ದಾಗ ನನ್ನ ಬಳಿಗೆ ಹೋಟೆಲ್ನ ಬಿಲ್ ಕಟ್ಟಲು ಹೇಳಿದ್ದ ಆಗ ನನಗೆ ತುಂಬಾನೇ ನಾಚಿಕೆ ಆಯಿತು ಇದಕ್ಕಾಗಿ ನನಗೆ ಬ್ರೇಕ’ಪ್ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಯಾವುದೇ ದಾರಿ ಕಾಣಲಿಲ್ಲ ಎಂದು ಹೇಳಿದ್ದಾರಂತೆ.

deepika siddarth malya | ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ರವರ ಪ್ರೀತಿ ಮುರಿದು ಬಿದ್ದದ್ದು ಕೇವಲ ಒಂದು ಬಿಲ್ ನಿಂದ, ಅಂತದ್ದು ಏನಿತ್ತು ಗೊತ್ತೇ ಬಿಲ್ ನಲ್ಲಿ??
ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ರವರ ಪ್ರೀತಿ ಮುರಿದು ಬಿದ್ದದ್ದು ಕೇವಲ ಒಂದು ಬಿಲ್ ನಿಂದ, ಅಂತದ್ದು ಏನಿತ್ತು ಗೊತ್ತೇ ಬಿಲ್ ನಲ್ಲಿ?? 4

ಇದಕ್ಕೆ ಸಿದ್ಧಾರ್ಥ ಮಲ್ಯ ರವರ ಪ್ರತಿಕ್ರಿಯೆ ಕೂಡ ತುಂಬಾನೇ ಕಾಮಿಡಿ ಆಗಿತ್ತು. ಅದೇನೆಂದರೆ ಸರ್ಕಾರ ನನ್ನ ತಂದೆಯನ್ನು ಮುಕ್ತಗೊಳಿಸಿದ ನಂತರ ದೀಪಿಕಾ ಕಟ್ಟಿರುವ ರೆಸ್ಟೋರೆಂಟ್ ಬಿಲ್ಲಿನ ಹಣವನ್ನು ಕಟ್ಟುತ್ತೇನೆ ಎಂಬುದಾಗಿ ಹೇಳಿದರಂತೆ. ಈ ವಾದ- ವಾಗ್ವಾದಗಳು ಏನೇ ಇರಲಿ ಕೇವಲ ಒಂದು ಹೋಟೆಲ್ ಬಿಲ್ ಗಾಗಿ ಇಬ್ಬರು ಬ್ರೇಕಪ್ ಮಾಡಿಕೊಂಡಿರುವುದು ನಿಜಕ್ಕೂ ಕೂಡ ಹಾಸ್ಯಾಸ್ಪದ ಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.