ಕಾಂತಾರ ಸಿನಿಮಾ ನೋಡಿದ ಧನುಷ್ ಏನಂದ್ರು ಗೊತ್ತೇ?? ಸಿನಿಮಾ ನೋಡುವ ವರೆಗೂ ನೋಡಿ, ರಿಷಬ್ ಬಗ್ಗೆ ಹೀಗ್ಯಾಕೆ ಹೇಳಿದ್ರು??

ಕಾಂತಾರ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಕರಾವಳಿಯ ಭೂತಾರಾಧನೆ, ಕೋಲಗಳ ಕುರಿತು ತಿಳಿದಿದ್ದವರಿಗೂ ತಿಳಿಯದವರಿಗೂ ವಿಶೇಷ ಅನುಭವವನ್ನು ಕಟ್ಟಿಕೊಡುವ ಸಿನಿಮಾ ‘ಕಾಂತಾರ’. ಸಿನಿಮಾದ ಮೊದಲ ಭಾಗದಲ್ಲಿ ಮುಂದೇನು ಅನ್ನುವ ಕುತೂಹಲವನ್ನು ತರಿಸುತ್ತದೆ. ಅದರೆ ಎರಡನೆ ಭಾಗ ಪ್ರೇಕ್ಷಕನಿಗೆ ಯೋಚಿಸಲು ಅವಕಾಶವೆ ಇರುವುದಿಲ್ಲ. ನಡೆಯುತ್ತಿರುವ ಸನ್ನಿವೇಶದಲ್ಲಿ ತಲ್ಲೀನನಾಗಿ ಬಿಡುತ್ತಾನೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಹೊಗಳುತ್ತಿದ್ದಾರೆ. ಇದೀಗ ತಮಿಳು ನಟ ಧನುಷ್ ಚಿತ್ರ ವೀಕ್ಷಿಸಿ ಆಶ್ಚರ್ಯವಾಗುವಂತೆ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಅಲ್ಲಿ ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಕಿಚ್ಚ ಸುದೀಪ್, ಪ್ರಭಾಸ್ ಸೇರಿದಂತೆ ದೊಡ್ಡ ದೊಡ್ಡ ನಟರು ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಇತ್ತೀಚೆಗೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರು. ಅಲ್ಲದೆ ನಟ ಪ್ರಭಾಸ್ ಎರಡು ಬಾರಿ ಚಿತ್ರ ನೋಡಿ ಹೊಗಳಿದ್ದರು. ಇದೀಗ ತಮಿಳು ನಟ ಧನುಷ್ ಚಿತ್ರ ವೀಕ್ಷಿಸಿ ಆಶ್ಚರ್ಯವಾಗುವಂತೆ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಇಂತಹ ಚಿತ್ರಗಳಿಗೂ ಜನರಿದ್ದಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿ ಚಿತ್ರ ನೋಡಿದ ನಂತರವೂ ವೀಕ್ಷಕರ ತಲೆಯಲ್ಲಿ ಗಿರ್ ಎನ್ನುವಂತೆ ಕುಳಿತುಬಿಡುತ್ತದೆ. ಅಷ್ಟರಮಟ್ಟಿಗೆ ದೈವವನ್ನು ಆವಾಹಿಸಿಕೊಂಡವರಂತೆ ರಿಷಭ್ ಅಭಿನಯಿಸಿದ್ದಾರೆ. ಇಂತಹ ಅದ್ಭುತ ಚಿತ್ರಕ್ಕೆ ಧನುಷ್ ಫಿದಾ ಆಗಿ ಟ್ವೀಟ್ ಮಾಡಿದ್ದಾರೆ.

dhanush abt kantara | ಕಾಂತಾರ ಸಿನಿಮಾ ನೋಡಿದ ಧನುಷ್ ಏನಂದ್ರು ಗೊತ್ತೇ?? ಸಿನಿಮಾ ನೋಡುವ ವರೆಗೂ ನೋಡಿ, ರಿಷಬ್ ಬಗ್ಗೆ ಹೀಗ್ಯಾಕೆ ಹೇಳಿದ್ರು??
ಕಾಂತಾರ ಸಿನಿಮಾ ನೋಡಿದ ಧನುಷ್ ಏನಂದ್ರು ಗೊತ್ತೇ?? ಸಿನಿಮಾ ನೋಡುವ ವರೆಗೂ ನೋಡಿ, ರಿಷಬ್ ಬಗ್ಗೆ ಹೀಗ್ಯಾಕೆ ಹೇಳಿದ್ರು?? 2

ಕಾಂತಾರ ಸಿನಿಮಾ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕನಸಿನ ಸಿನಿಮಾನೇ ಆಗಿದೆ. ಇಂತಹ ಈ ಚಿತ್ರ ರಿಷಬ್ ಚಿತ್ರ ಜೀವನದಲ್ಲಿ ವಿಶೇಷ ಮೈಲುಗಲ್ಲಾಗಿಯೇ ನಿಲ್ಲುತ್ತಿದೆ. ಇಲ್ಲಿವರೆಗೂ ಇದ್ದ ಸಿನಿಮಾಗಳ ಲೆಕ್ಕ ಬೇರೆ ಇತ್ತು. ಆದರೆ ಕಾಂತಾರ ಅದನ್ನೆಲ್ಲ ಮೀರಿಸುತ್ತಿದೆ. ಕಾಂತಾರ ಸಿನಿಮಾದ ಕಥೆ ಎಲ್ಲೆಡ ಹೋಗಬೇಕು. ಇದು ಎಲ್ಲರಿಗೂ ರೀಚ್ ಆಗಬೇಕು ಅನ್ನೋ ಕನಸು ರಿಷಬ್ ಶೆಟ್ಟಿಯವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಾಗಬೇಕು ಅಂತಲೂ ರಿಷಬ್ ಶೆಟ್ಟಿ ಕನಸು ಕಂಡಿದ್ದರು. ಅದರಂತೆ ಚಿತ್ರ ಬೇರೆ ಬೇರೆ ಭಾಷೆಗಳಲ್ಲಿ ತೆರೆ ಕಂಡಿದೆ. ಇದೀಗ ಚಿತ್ರವನ್ನು ನೋಡಿ ಧನುಷ್ ಟ್ವೀಟ್ ಮಾಡಿ ” ಕಾಂತಾರ, ಅದ್ಭುತ ಚಿತ್ರ. ರಿಷಭ್ ಅವರೇ, ನೀವು ನಿಮ್ಮ ಮೇಲೆ ನೀವೇ ಹೆಮ್ಮೆ ಪಡಬೇಕು. ಹೊಂಬಾಳೆ ಫಿಲ್ಮ್ಸ್ ಅವರಿಗೆ ಅಭಿನಂದನೆಗಳು. ಹೀಗೆ ಎಲ್ಲ ಬೌಂಡರೀಸ್ ಮೀರಿ ಚಿತ್ರ ತಯಾರಿಸಿ. ಎಲ್ಲ ಕಲಾವಿದರು, ತಂತ್ರಜ್ಞರಿಗೆ ಅಭಿನಂದನೆಗಳು. ದೇವರು ಒಳ್ಳೆಯದ್ದು ಮಾಡಲಿ” ಎಂದಿದ್ದಾರೆ.

Comments are closed.