ಇದರಿಂದ ನಾವಿಬ್ಬರು ಹಾಳಾಗಿ ಹೋಗ್ತೇವೆ ಎಂದು ಸುದೀಪ್ ಹೇಳಿದ್ದು ಯಾಕೆ ಗೊತ್ತೇ?? ದರ್ಶನ್ ಮಾಡಿದ್ದಾದರೂ ಏನು ಗೊತ್ತೇ??

ಕನ್ನಡ ಚಿತ್ರರಂಗದಲ್ಲಿ ಸ್ನೇಹಿತರು ಎಂದಾಗ ಎಲ್ಲರಿಗೂ ನೆನಪಾಗುವುದು ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರು. ಅವರ ನಂತರ ಒಂದು ಕಾಲದಲ್ಲಿ ಕುಚುಕು ಗೆಳೆಯರಂತೆ ಇದ್ದವರು ದರ್ಶನ್ ಹಾಗೂ ಸುದೀಪ್. ಇವರ ಸ್ನೇಹ ಅಭಿಮಾನಿಗಳಿಗೆ ಹಬ್ಬದಂತೆ ಇರುತ್ತಿತ್ತು. ಇವರು ಎಷ್ಟೋ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಿದ್ದರು. ಬಿಡುವಿನ ಸಮಯದಲ್ಲಿ ಸ್ನೇಹಿತರ ಜೊತೆ ಟ್ರಿಪ್ ಹಾಕುತ್ತಿದ್ದರು, ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು. ಆದರೆ ಇವರ ಸ್ನೇಹದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ದರ್ಶನ್ ಅವರು ಈ ಸ್ನೇಹಕ್ಕೆ ಫುಲ್ ಸ್ಟಾಪ್ ಇಡುವಂತಾಯಿತು. ಅದೊಂದು ಟ್ವೀಟ್ ಇಷ್ಟು ವರ್ಷಗಳ ಸ್ನೇಹವನ್ನು ಮಣ್ಣು ಮಾಡಿತ್ತು. ಸದ್ಯ ದೂರವಾಗಿರುವ ಈ ಸ್ನೇಹಿತರ ಹಳೆಯ ವಿಡಿಯೋ ಒಂದು ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಸುದೀಪ್ ಇಷ್ಟು ಜನ ಹಾಳಾಗಿದ್ದೇವೆ, ಈಗ ನಾವು ಹಾಳಾಗ್ತೀವಿ ಎಂದು ದರ್ಶನ್ ಗೆ ಹೇಳಿದ್ದಾರೆ. ಏನಿದು ವಿಡಿಯೋ? ಸುದೀಪ್, ದರ್ಶನ್ ಹಿಂಗ್ಯಾಕೆ ಹೇಳಿದ್ರು ಇಲ್ಲಿದೆ ವಿವರ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳು. ಇಬ್ಬರಿಗೂ ದೊಡ್ಡ ಅಭಿಮಾನಿ ವರ್ಗವಿದೆ. ಇವರಿಬ್ಬರು ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದವರು. ಮುಂದೊಂದು ದಿನ ಅವರ ಸ್ನೇಹ ಮುರಿದುಬಿತ್ತು. ಇಂದಿಗೂ ಇವರಿಬ್ಬರೂ ಒಂದಾಗಲಿ ಎಂಬುದು ಅಭಿಮಾನಿಗಳ ಆಸೆ. 2017 ಮಾರ್ಚ್ 17ರಂದು ದರ್ಶನ್ ಒಂದು ಟ್ವೀಟ್ ಮಾಡಿದ್ದರು. ನಾನು ಮತ್ತು ಸುದೀಪ್ ಇನ್ನು ಮುಂದೆ ಸ್ನೇಹಿತರಾಗಿ ಇರುವುದಿಲ್ಲ. ನಾವು ಕೇವಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರು. ಯಾವ ಊಹಾಪೋಹಗಳು ಬೇಡ. ಇದು ಮುಗಿದ ಅಧ್ಯಾಯ. ಎಂದು ಟ್ವೀಟ್ ನಲ್ಲಿ ಹೇಳಿ ದೊಡ್ಡ ಶಾಕ್ ನೀಡಿದರು. ಇವರಿಬ್ಬರು ಮತ್ತೆ ಒಂದಾಗಲಿ ಎಂಬುದು ಅಭಿಮಾನಿಗಳ ಆಸೆ. ಇವರಿಬ್ಬರೂ ಒಟ್ಟಿಗೆ ಸೇರಿ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡುತ್ತಿದ್ದ ಸಮಯದಲ್ಲಿ ಮಾಡಿದ ವಿಡಿಯೋ ಒಂದು ಇದೀಗ ಸಖತ್ ವೈರಲಾಗುತ್ತಿದೆ.

darshan sudeep | ಇದರಿಂದ ನಾವಿಬ್ಬರು ಹಾಳಾಗಿ ಹೋಗ್ತೇವೆ ಎಂದು ಸುದೀಪ್ ಹೇಳಿದ್ದು ಯಾಕೆ ಗೊತ್ತೇ?? ದರ್ಶನ್ ಮಾಡಿದ್ದಾದರೂ ಏನು ಗೊತ್ತೇ??
ಇದರಿಂದ ನಾವಿಬ್ಬರು ಹಾಳಾಗಿ ಹೋಗ್ತೇವೆ ಎಂದು ಸುದೀಪ್ ಹೇಳಿದ್ದು ಯಾಕೆ ಗೊತ್ತೇ?? ದರ್ಶನ್ ಮಾಡಿದ್ದಾದರೂ ಏನು ಗೊತ್ತೇ?? 2

ಇವರಿಬ್ಬರೂ ದೂರಾಗಲು ಕಾರಣವೇನು ಎಂಬುದು ಇಂದಿಗೂ ಸರಿಯಾಗಿ ತಿಳಿದಿಲ್ಲ. ಸುದೀಪ್ ಮಾತ್ರ ಇದಾದ ಮೇಲೂ ಕೆಲವು ಸಂದರ್ಶನಗಳಲ್ಲಿ ದರ್ಶನ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ, ಸ್ನೇಹದ ಹಸ್ತ ಚಾಚಿದರು. ಆದರೆ ದರ್ಶನ್ ಮನಸ್ಸು ಮಾಡಲಿಲ್ಲ. ಇಂದಿಗೂ ಅಭಿಮಾನಿಗಳು ಈ ಗೆಳೆಯರು ಒಂದಾಗಲಿ ಎಂದು ಹಾರೈಸುತ್ತಿದ್ದಾರೆ. ಅದು ಯಾವಾಗ ಈಡೇರುವುದು ತಿಳಿದಿಲ್ಲ. ಇದೀಗ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಸುದೀಪ್, ದರ್ಶನ್ ಇಬ್ಬರು ಬೈಕ್ ನಲ್ಲಿ ಜಾಲಿ ರೈಡ್ ಹೋಗಿರುವುದು ಅಲ್ಲಿ ಎಂಜಾಯ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಟ ಆರ್ಮುಗ ರವಿಶಂಕರ್, ಚಿರಂಜೀವಿ ಸರ್ಜಾ ಕೂಡ ಇದ್ದಾರೆ. ರವಿಶಂಕರ್ ಹಾಡು ಹಾಡಿ ರಂಜಿಸಿದ್ದಾರೆ. ಹಾಳಾಗಿರುವವರನ್ನು ಹಾಳು ಮಾಡೋಕೆ ಹಾಳಾಗಿರುವವರಿಂದ ಮಾತ್ರವೇ ಸಾಧ್ಯ ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ದರ್ಶನ್ ಚಿತ್ರರಂಗದಲ್ಲಿ ನಾವು ಇಲ್ಲಿಯವರೆಗೂ ಬಂದಿದ್ದೀವಿ ಎಂದಾಗ ಸುದೀಪ್ ಹೇಗಿದ್ರೂ ಇಷ್ಟು ಜನ ಹಾಳಾಗಿದ್ದೇವೆ, ಈಗ ನಾವಿಬ್ಬರು ಸೇರಿ ಹಾಳಾಗ್ತೇವೆ ಎಂದು ಹೇಳಿದ್ದಾರೆ. ಈ ಹಳೆ ವಿಡಿಯೋವನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.

Comments are closed.