ಸಿನಿಮಾದಲ್ಲಿ ಒಟ್ಟಿಗೆ ನಟನೆ ಮಾಡಿದ ಮೇಲೆ, ಮೀನಾ-ಸುದೀಪ್ ರವರ ವಿಚಾರ ವಿವಾದವಾಗಿದ್ದು ಯಾಕೆ ಗೊತ್ತೇ?? ಇವರ ನಡುವೆ ತೆರೆ ಹಿಂದೆ ಏನಾಯಿತು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಪರಭಾಷೆಯಿಂದ ಹಲವಾರು ನಟಿಯರು ಬಂದು ನಟಿಸಿ ಹೋಗಿದ್ದಾರೆ. ಇಂದಿನ ವಿಚಾರದಲ್ಲಿ ಕೂಡ ನಾವು ಅದೇ ರೀತಿಯ ನಟಿಯೊಬ್ಬರ ಕುರಿತು ಹೇಳಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ನಟಿ ಮೀನಾ ರವರ ಕುರಿತಂತೆ. ಪರಭಾಷಿಗರಾಗಿದ್ದರು ಕೂಡ ಅವರು ನಮ್ಮ ಕನ್ನಡದ ನಟಿಯಂತೆಯೇ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದವರು. ಇಂದಿಗೂ ಕೂಡ ಕನ್ನಡ ಪ್ರೇಕ್ಷಕರ ಮನದಾಳದಲ್ಲಿ ಹಚ್ಚಹಸಿರಾಗಿ ಉಳಿದುಕೊಂಡಿರುವ ಅದ್ಭುತ ಕಲಾವಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

meena actres | ಸಿನಿಮಾದಲ್ಲಿ ಒಟ್ಟಿಗೆ ನಟನೆ ಮಾಡಿದ ಮೇಲೆ, ಮೀನಾ-ಸುದೀಪ್ ರವರ ವಿಚಾರ ವಿವಾದವಾಗಿದ್ದು ಯಾಕೆ ಗೊತ್ತೇ?? ಇವರ ನಡುವೆ ತೆರೆ ಹಿಂದೆ ಏನಾಯಿತು ಗೊತ್ತೆ??
ಸಿನಿಮಾದಲ್ಲಿ ಒಟ್ಟಿಗೆ ನಟನೆ ಮಾಡಿದ ಮೇಲೆ, ಮೀನಾ-ಸುದೀಪ್ ರವರ ವಿಚಾರ ವಿವಾದವಾಗಿದ್ದು ಯಾಕೆ ಗೊತ್ತೇ?? ಇವರ ನಡುವೆ ತೆರೆ ಹಿಂದೆ ಏನಾಯಿತು ಗೊತ್ತೆ?? 3

ಚಿಕ್ಕವಯಸ್ಸಿನಿಂದಲೂ ಕೂಡ ಮೀನಾ ರವರು ನಟನೆ ಹಾಗೂ ನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು. ಇವರ ಭರತನಾಟ್ಯಂ ನೋಡಿ ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ಬಾಲನಟಿಯಾಗಿ ಅವಕಾಶ ನೀಡಲಾಗಿತ್ತು. ಹೌದು ನಟಿ ಮೀನಾ ರವರು ಮೊದಲಿಗೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದು ತಮಿಳು ಚಿತ್ರದಲ್ಲಿ. ನೆಂಜಂಗಲ್ ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ ನಂತರ ಸಾಲುಸಾಲಾಗಿ ಮೀನಾ ರವರಿಗೆ ಬಾಲನಟಿಯಾಗಿ ಚಿತ್ರಗಳ ಅವಕಾಶ ಸಿಗುತ್ತದೆ. ಇದಾದನಂತರ ತೆಲುಗು ಚಿತ್ರದ ಮೂಲಕ ನಾಯಕ ನಟಿಯಾಗಿ ಕೂಡ ಪಾದರ್ಪಣೆ ಮಾಡುತ್ತಾರೆ.

ನಾಯಕ ನಟಿಯಾಗಿ ಮೀನಾ ರವರು ಇದುವರೆಗೂ ಬರೋಬ್ಬರಿ ಆರು ಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಕಾಲದ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದವರು. ಇವರಿಗೆ ಅಷ್ಟೊಂದು ಅವಕಾಶ ಸಿಗಲು ಕಾರಣವೆಂದರೆ ಅವರಿಗೆ 6 ಭಾಷೆಗಳನ್ನು ಕೂಡ ನಿರರ್ಗಳವಾಗಿ ಮಾತನಾಡಲು ಆಗುತ್ತಿತ್ತು. ಮೀನಾ ರವರ ಕುರಿತಂತೆ ಕನ್ನಡಿಗರು ನೆನಪಿಸಿಕೊಳ್ಳುವುದು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪುಟ್ನಂಜ ಚಿತ್ರದ ಮೂಲಕ.

ಪುಟ್ನಂಜ ಚಿತ್ರದ ಯಶಸ್ಸು ಮೀನಾ ರವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ತಂದುಕೊಟ್ಟಿದೆ. ಕೇವಲ ಇಷ್ಟು ಚಿತ್ರಗಳಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯ ಚಿತ್ರಗಳಲ್ಲಿ ನಟಿಸುತ್ತಾರೆ. ಅವರಿಗೆ ಕನ್ನಡದಲ್ಲಿ ಖ್ಯಾತಿಯನ್ನು ತಂದುಕೊಟ್ಟಂತಹ ಮತ್ತೊಂದು ಚಿತ್ರವೆಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರೊಂದಿಗೆ ನಟಿಸಿರುವ ಸ್ವಾತಿಮುತ್ತು ಚಿತ್ರ. ಇನ್ನೊಂದು ಮೈಲಿಗಲ್ಲು ಚಿತ್ರವೆಂದರೆ ಅದು ಮೈ ಆಟೋಗ್ರಾಫ್ ಚಿತ್ರ.

ಇನ್ನು ಈಗ ನಟಿ ಮೀನಾ ರವರು ಎಲ್ಲಿ ಹೋಗಿದ್ದಾರೆ ಎಂಬುದಾಗಿ ನೋಡುವುದಾದರೆ ಈಗಲೂ ಕೂಡ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಮೀನಾ ರವರ ಸಾಂಸಾರಿಕ ಜೀವನದ ಕುರಿತಂತೆ ಹೇಳುವುದಾದರೆ ಆಗಿನ ಕಾಲದಲ್ಲಿ ಅವರು ಯಾರ್ಯಾರನ್ನೋ ಮದುವೆಯಾಗಿದ್ದಾರೆ ಎಂಬುದಾಗೆಲ್ಲಾ ಸುದ್ದಿ ಹರಡಿತ್ತು. ಆದರೆ ಅವರು ಮದುವೆಯಾಗಿದ್ದು ಬೆಂಗಳೂರು ಮೂಲದ ವಿದ್ಯಾಸಾಗರ ಎನ್ನುವವರನ್ನು. ಇವರಿಗೆ ನೈನಿಕ ಎನುವ ಮಗಳು ಕೂಡ ಇದ್ದು ಅವಳು ಈಗಾಗಲೇ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾಳೆ. ತಲಪತಿ ವಿಜಯ್ ನಟನೆಯ ತೆರಿ ಚಿತ್ರದಲ್ಲಿ ಕೂಡ ಇವಳನ್ನು ನೀವು ನೋಡಿರಬಹುದು.

meena actress sudeep 1 | ಸಿನಿಮಾದಲ್ಲಿ ಒಟ್ಟಿಗೆ ನಟನೆ ಮಾಡಿದ ಮೇಲೆ, ಮೀನಾ-ಸುದೀಪ್ ರವರ ವಿಚಾರ ವಿವಾದವಾಗಿದ್ದು ಯಾಕೆ ಗೊತ್ತೇ?? ಇವರ ನಡುವೆ ತೆರೆ ಹಿಂದೆ ಏನಾಯಿತು ಗೊತ್ತೆ??
ಸಿನಿಮಾದಲ್ಲಿ ಒಟ್ಟಿಗೆ ನಟನೆ ಮಾಡಿದ ಮೇಲೆ, ಮೀನಾ-ಸುದೀಪ್ ರವರ ವಿಚಾರ ವಿವಾದವಾಗಿದ್ದು ಯಾಕೆ ಗೊತ್ತೇ?? ಇವರ ನಡುವೆ ತೆರೆ ಹಿಂದೆ ಏನಾಯಿತು ಗೊತ್ತೆ?? 4

ಒಂದು ಕಾಲದಲ್ಲಿ ಇವರ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದೇನೆಂದರೆ ನಟಿ ಮೀನಾ ರವರು ಕಿಚ್ಚ ಸುದೀಪ್ ಅವರನ್ನು ಮದುವೆಯಾಗಿದ್ದಾರೆ ಎಂಬುದಾಗಿ ದೊಡ್ಡಮಟ್ಟದಲ್ಲಿ ಗಾಸಿಪ್ ಹರಡಿತ್ತು. ಇದು ಇಬ್ಬರನ್ನು ಕೂಡ ಆ ಸಂದರ್ಭದಲ್ಲಿ ಡಿಸ್ಟರ್ಬ್ ಮಾಡಿತ್ತು. ಹೀಗೆ ಸುದ್ದಿಯಾಗಲು ಕೂಡ ಕಾರಣವಿತ್ತು ಅದೇನೆಂದರೆ ಇಬ್ಬರು ಕೂಡ ಬ್ಯಾಕ್ ಟು ಬ್ಯಾಕ್ ಸ್ವಾತಿಮುತ್ತು ಹಾಗೂ ಮೈ ಆಟೋಗ್ರಾಫ್ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಕೆಮಿಸ್ಟ್ರಿ ಕೂಡ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು.

ಈ ಕುರಿತಂತೆ ಸ್ವತಃ ಮೀನಾ ರವರೇ ವಶೀಕರಣ ನೀಡುತ್ತಾ ನಾನು ಸುದೀಪ್ ಇಬ್ಬರೂ ಕೂಡ ದಿ ಬೆಸ್ಟ್ ಫ್ರೆಂಡ್ಸ್. ಈ ಕಾರಣದಿಂದಾಗಿಯೇ ಇಬ್ಬರು ಎರಡು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದೇವೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಯಾರೂ ಕೂಡ ತಪ್ಪಾಗಿ ಅರ್ಥ ಮಾಡಿಕೊಳ್ಳ ಬಾರದು ಎಂಬುದಾಗಿ ಹೇಳುತ್ತಾರೆ. ಈ ಕಾಂಟ್ರವರ್ಸಿ ನಡೆದಿದ್ದು 2007 ರಲ್ಲಿ. ಇಂದಿನ ಹಲವರಿಗೆ ಈ ವಿಚಾರದ ಕುರಿತು ತಿಳಿದಿರುವುದು ಕೂಡ ಕಷ್ಟವಾಗಿದೆ.

Comments are closed.