ಒಂದಲ್ಲ ಎರಡಲ್ಲ 5 ಬಾರಿ ಕರೆದರೂ ಬಿಗ್ ಬಾಸ್ ಹೋಗದಿರುವ ನೇಹಾ ಗೌಡ, ಈ ಬಾರಿ ಮಾತ್ರ ಹೋದದ್ದು ಯಾಕೆ ಗೊತ್ತೇ?? ಇದರ ಹಿಂದಿರುವ ಕಾರಣ ಏನು ಗೊತ್ತೇ??

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳ ವರ್ಷಗಳ ಕಾಲ ಪ್ರಸಾರಗೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ. ಈ ಧಾರಾವಾಹಿ ಮುಗಿದು ಹಲವಾರು ತಿಂಗಳುಗಳೇ ಕಳೆದಿದ್ದರೂ ಇಂದಿಗೂ ಸಹ ಜನ ಈ ಧಾರವಾಹಿಯನ್ನು ನೆನಪಿಸಿಕೊಳ್ಳುತ್ತಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕಲಾವಿದರು ಸಹ ವೀಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅದರಲ್ಲೂ ಕಥಾನಾಯಕಿ ಶ್ರುತಿ ಗೊಂಬೆ ಪಾತ್ರ ನಿರ್ವಹಿಸಿದ ನಟಿ ನೇಹಾ ಗೌಡ ಅವರ ಜನಪ್ರಿಯತೆ ಇಂದಿಗೂ ಸಹ ಹಾಗೆಯೇ ಇದೆ. ಇವತ್ತಿಗೂ ಅವರ ಅಭಿಮಾನಿಗಳು ಅವರನ್ನು ಗೊಂಬೆ ಎಂದೇ ಕರೆಯುತ್ತಾರೆ.

ನೇಹಾ ಅವರು ನಟಿಸಿದ್ದು ಒಂದೇ ಧಾರವಾಹಿಯಲ್ಲೇ ಆಗಿದ್ದರು, ಈಗಲೂ ಗೊಂಬೆ ಎಂದೇ ಫೇಮಸ್. ತಮಿಳಿನಲ್ಲಿ ಸಹ ಒಂದು ಧಾರವಾಹಿಯಲ್ಲಿ ನಟಿಸಿದ್ದ ನೇಹಾ ಅವರು, ಕನ್ನಡದಲ್ಲಿ ಮೂರು ಗಂಟು ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ರಾಜ ರಾಣಿ ಶೋಗೆ ಸ್ಪರ್ಧಿಯಾಗಿ ಬಂದು ವಿನ್ನರ್ ಆಗಿದ್ದರು. ಒಂದು ಗ್ಯಾಪ್ ನ ಬಳಿಕ ಈಗ ನೇಹಾ ಗೌಡ ಅವರು ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ, ಬಿಗ್ ಮನೆಗೆ ಸ್ಪರ್ಧಿಯಾಗಿ ಬಂದಿರುವ ನೇಹಾ ಅವರು ಸರಳ ಸ್ವಭಾವ ಮತ್ತು ನೇರನಡೆ ಇಂದ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ನೇಹಾ ಅವರು ಬಿಗ್ ಬಾಸ್ ಕೊಡುವ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಜೊತೆಗೆ ಮನೆಯ ಸ್ಪರ್ಧಿಗಳ ಜೊತೆಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ಎಲ್ಲರ ಜೊತೆಗೂ ಬೆರೆಯುತ್ತಾ ಸ್ನೇಹ ಬೆಳೆಸಿಕೊಳ್ಳುತ್ತಿದ್ದಾರೆ. ನೇಹಾ ಅವರಿಗೆ ಈಗಾಗಲೇ ಹಲವು ಬಾರಿ ಬಿಗ್ ಬಾಸ್ ಇಂದ ಕರೆಬಂದಿತ್ತು, ಆದರೆ ಅವರು ಬಿಗ್ ಬಾಸ್ ಗೆ ಬಂದಿರಲಿಲ್ಲ, ಆದರೆ ಈ ಸಾರಿ ಬಂದಿದ್ದಕ್ಕೆ ಕಾರಣ ಏನು ಎಂದು ನೇಹಾ ಅವರ ಪತಿ ಚಂದನ್ ತಿಳಿಸಿದ್ದಾರೆ. ಇಷ್ಟು ಸಾರಿ ಬಿಗ್ ಬಾಸ್ ಇಂದ ಕರೆ ಬಂದಾಗ, ನೇಹಾ ಅವರಿಗೆ ಸಮಯ ಇರುತ್ತಿರಲಿಲ್ಲ, ಡ್ಯಾನ್ಸ್ ಶೋ ಅಥವಾ ಬೇರೆ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗಿರುತ್ತಿದ್ದರು, ಹಾಗಾಗಿ ಬಿಗ್ ಬಾಸ್ ಗೆ ಹೋಗಲು ಆಗಿರಲಿಲ್ಲ. ಆದರೆ ಈಗ ಫ್ರೀ ಇದ್ದ ಕಾರಣ, ಬಿಗ್ ಬಾಸ್ ಇಂದ ಕರೆಬಂದ ಕೂಡಲೇ ಒಪ್ಪಿಕೊಂಡು, ಬಿಗ್ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ ನೇಹಾ ಅವರ ಪತಿ ಚಂದನ್.

Comments are closed.