ಅಪ್ಪು ಕಾರ್ಯಕ್ರಮಕ್ಕೆ ಹಿರಿಯ ಮಗಳು ಧೃತಿ ಯಾಕೆ ಬರಲಿಲ್ಲ ಗೊತ್ತಾ ? ಕಣ್ಣೀರಿಡುತ್ತಾ ತಂಗಿ ವಂದಿತಾ ಹೇಳಿದ್ದೇನು??

ನಿನ್ನೆ ನಡೆದ ಪುನೀತ ಪರ್ವ ಕಾರ್ಯಕ್ರಮ ಒಂದು ಆಚರಣೆಯ ಹಾಗೆ ಇರುವುದರ ಜೊತೆಗೆ, ಭಾವನಾತ್ಮಕವಾಗಿಯೂ ಇತ್ತು. ಅಪ್ಪು ಅವರಿಗಾಗಿ ಇಡೀ ಸ್ಯಾಂಡಲ್ ವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ಗಣ್ಯರ ಸಮಾಗಮ ನಡೆದಿತ್ತು. ತೆಲುಗಿನಿಂದ ನಟ ರಾಣಾ ದಗ್ಗುಬಾಟಿ ಮತ್ತು ನಟ ಅಖಿಲ್ ಅಕ್ಕಿನೇನಿ, ತಮಿಳಿನಿಂದ ಖ್ಯಾತ ನಟ ಸೂರ್ಯ ಅವರು ಆಗಮಿಸಿದ್ದರು. ಇನ್ನು ಬರಲು ಸಾಧ್ಯವಾಗದ ಕಾರಣ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಮತ್ತು ನಟ ಕಮಲ್ ಹಾಸನ್ ಅವರು ವಿಡಿಯೋ ಬೈಟ್ ಕಳಿಸಿಕೊಟ್ಟಿದ್ದರು..

ಹೀಗೆ ಅಪ್ಪು ಅವರಿಗಾಗಿ ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದರು. ಚಂದನವನದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು, ನಟ ಯಶ್ ಅವರು ಸೇರಿದಂತೆ, ಇಡೀ ಚಂದವನವನೆ ಅಪ್ಪು ಅವರಿಗಾಗಿ, ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ ನೆರೆದಿತ್ತು. ಶಿವಣ್ಣ ಅವರು ಅಪ್ಪು ಅವರ ಹಾಡುಗಳಿಗೆ ಭರ್ಜರಿಯಾಗಿ ಪರ್ಫಾರ್ಮ್ ಮಾಡಿದರು, ರಮ್ಯಾ ಅವರು ಸಹ ನೃತ್ಯ ಮಾಡಿದರು. ಇನ್ನು ಅರ್ಮಾನ್ ಮಲಿಕ್ ಅವರು ಕೂಡ ಅಪ್ಪು ಅವರಿಗಾಗಿ ವಿಶೇಷವಾದ ಹಾಡನ್ನು ಹಾಡಿದರು. ಇಡೀ ದೊಡ್ಮನೆ ಕುಟುಂಬ ಅಪ್ಪು ಅವರಿಗಾಗಿ ವಿಜಯ್ ಪ್ರಕಾಶ್ ಅವರೊಡನೆ ಸೇರಿ ಬೊಂಬೆ ಹೇಳುತೈತೆ ಹಾಡನ್ನು ವೇದಿಕೆಯ ಮೇಲೆ ಹಾಡಿದರು.

dhruti puneetha parva | ಅಪ್ಪು ಕಾರ್ಯಕ್ರಮಕ್ಕೆ ಹಿರಿಯ ಮಗಳು ಧೃತಿ ಯಾಕೆ ಬರಲಿಲ್ಲ ಗೊತ್ತಾ ? ಕಣ್ಣೀರಿಡುತ್ತಾ ತಂಗಿ ವಂದಿತಾ ಹೇಳಿದ್ದೇನು??
ಅಪ್ಪು ಕಾರ್ಯಕ್ರಮಕ್ಕೆ ಹಿರಿಯ ಮಗಳು ಧೃತಿ ಯಾಕೆ ಬರಲಿಲ್ಲ ಗೊತ್ತಾ ? ಕಣ್ಣೀರಿಡುತ್ತಾ ತಂಗಿ ವಂದಿತಾ ಹೇಳಿದ್ದೇನು?? 2

ವಿಶೇಷಗಳಿಂದ ಕೂಡಿದ್ದ ಈ ಕಾರ್ಯಕ್ರಮಗಳಲ್ಲಿ ಅಪ್ಪು ಅವರ ಬಗ್ಗೆ ಯಶ್ ಅವರು ಹೇಳಿದ ಮಾತುಗಳು, ನಟ ಸೂರ್ಯ ಅವರು ಹೇಳಿದ ಮಾತುಗಳು ಎಲ್ಲರ ಮನಗೆದ್ದವು. ಗಂಧದಗುಡಿಯನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕೂಡ ಕಾಯುತ್ತಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮಕ್ಕೆ ಇಡೀ ದೊಡ್ಮನೆ ಕುಟುಂಬ ಬಂದಿತ್ತು, ಆದರೆ ಅಪ್ಪು ಅವರ ದೊಡ್ಡ ಮಗಳು ಧೃತಿ ಅವರು ಬಂದಿರಲಿಲ್ಲ, ಅದಕ್ಕೆ ಕಾರಣವನ್ನು ಅಪ್ಪು ಅವರ ಚಿಕ್ಕ ಮಗಳು ವಂದಿತಾ ತಿಳಿಸಿದ್ದಾರೆ, ಧೃತಿ ಅವರು ಅಮೇರಿಕಾದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಪರೀಕ್ಷೆ ಇದ್ದ ಕಾರಣ ಧೃತಿ ಅವರು ನಿನ್ನೆಯ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

Comments are closed.