ಮನೆಯನ್ನು ಮಾರಿ ನೋವಿನಲ್ಲಿ ಇರುವ ರವಿಚಂದ್ರನ್ ರವರಿಗೆ ಇದ್ದಕ್ಕಿದ್ದ ಹಾಗೆ ಕರೆ ಮಾಡಿ, ಅಶ್ವಿನ್ ಪುನೀತ್ ಮೇಡಂ ಹೇಳಿದ್ದೇನು ಗೊತ್ತೇ??

ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಇಂದು ಬಹಳ ಕಷ್ಟದಲ್ಲಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ರವಿಚಂದ್ರನ್ ಅವರು ಜೀಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ತಮ್ಮ ಕಷ್ಟಗಳ ಬಗ್ಗೆ ಹೇಳಿಕೊಂಡಾಗ ಎಲ್ಲರೂ ಕಣ್ಣೀರು ಹಾಕಿದ್ದಾರೆ. ರವಿಚಂದ್ರನ್ ಅವರ ಈ ಮಾತುಗಳನ್ನು ಅಪ್ಪು ಸರ್ ಕೇಳಿದ್ದರೆ, ಬಹುಶಃ ಈ ಸಮಯದ ವರೆಗೆ ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಧೈರ್ಯ ಹೇಳಿ, ರವಿಚಂದ್ರನ್ ಅವರಿಗೆ ಅಗತ್ಯವಿದ್ದ ಸಹಾಯ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಯಾರಿಗೆ ಏನೇ ಕಷ್ಟಬಂದರು, ಮೊದಲಿಗೆ ಅವರಿಗೆ ಸಹಾಯ ಮಾಡುತ್ತಿದ್ದದ್ದು ಅಪ್ಪು ಅವರು.

ಡಾ.ರಾಜ್ ಕುಮಾರ್ ಅವರ ಕುಟುಂಬ ಮತ್ತು ರವಿಚಂದ್ರನ್ ಅವರ ಕುಟುಂಬ ಬಹಳ ಆತ್ಮೀಯರು ಎನ್ನುವುದು ಗೊತ್ತಿರುವ ವಿಚಾರ. ರವಿಚಂದ್ರನ್ ಅವರ ತಂದೆ ಶುರು ಮಾಡಿದ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಡಾ.ರಾಜ್ ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪ್ಪು ಅವರ ಪ್ರತಿ ಸಿನಿಮಾಗು ರವಿಚಂದ್ರನ್ ಅವರು ಮುಹೂರ್ತಕ್ಕೆ ಬಂದು ಕ್ಲಾಪ್ ಮಾಡುತ್ತಿದ್ದರು. ಅಪ್ಪು ಅವರಿಗೆ ರವಿಚಂದ್ರನ್ ಅವರ ಮೇಲೆ ಬಹಳ ಪ್ರೀತಿ ಗೌರವ, ರವಿಚಂದ್ರನ್ ಅವರಿಗು ಅದೇ ರೀತಿ ಅಪ್ಪು ಎಂದರೆ ಪ್ರೀತಿ, ಆ ರೀತಿ ಇದ್ದ ಆ ಆತ್ಮೀಯತೆಯನ್ನು ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರವಿಚಂದ್ರನ್ ಅವರ ಕಷ್ಟಗಳ ಬಗ್ಗೆ ಅಶ್ವಿನಿ ಅವರಿಗೆ ಮತ್ತು ದೊಡ್ಮನೆಗೂ ಗೊತ್ತಾಗಿದ್ದು, ಅಶ್ವಿನಿ ಅವರು ರವಿಚಂದ್ರನ್ ಅವರಿಗೆ ಕರೆಮಾಡಿ ಮಾತನಾಡಿಸಿದ್ದಾರೆ.

ashwini ravi | ಮನೆಯನ್ನು ಮಾರಿ ನೋವಿನಲ್ಲಿ ಇರುವ ರವಿಚಂದ್ರನ್ ರವರಿಗೆ ಇದ್ದಕ್ಕಿದ್ದ ಹಾಗೆ ಕರೆ ಮಾಡಿ, ಅಶ್ವಿನ್ ಪುನೀತ್ ಮೇಡಂ ಹೇಳಿದ್ದೇನು ಗೊತ್ತೇ??
ಮನೆಯನ್ನು ಮಾರಿ ನೋವಿನಲ್ಲಿ ಇರುವ ರವಿಚಂದ್ರನ್ ರವರಿಗೆ ಇದ್ದಕ್ಕಿದ್ದ ಹಾಗೆ ಕರೆ ಮಾಡಿ, ಅಶ್ವಿನ್ ಪುನೀತ್ ಮೇಡಂ ಹೇಳಿದ್ದೇನು ಗೊತ್ತೇ?? 2

ರವಿಚಂದ್ರನ್ ಅವರ ಯೋಗಕ್ಷೇಮ ವಿಚಾರಿಸಿ, ಅವರು ಒಬ್ಬಂಟಿಯಲ್ಲ ಈ ಸಮಯದಲ್ಲಿ ದೊಡ್ಮನೆ ಕುಟುಂಬ ಮತ್ತು ದೊಡ್ಮನೆ ಅವರ ಜೊತೆಗಿದೆ, ಏನೇ ಇದ್ದರೂ ರವಿಚಂದ್ರನ್ ಅವರ ಜೊತೆಗೆ ಎಲ್ಲರೂ ನಿಲ್ಲುವುದಾಗಿ ಅಶ್ವಿನಿ ಅವರು ಭರವಸೆ ನೀಡಿದ್ದಾರೆ. ಹಾಗೆಯೇ ನಿನ್ನೆ ನಡೆದ ಪುನೀತ ಪರ್ವ ಕಾರ್ಯಕ್ರಮಕ್ಕೆ ರವಿಚಂದ್ರನ್ ಅವರನ್ನು ಆಮಂತ್ರಿಸಿದರು, ಅಪ್ಪು ಅವರನ್ನು ಪ್ರೀತಿಸುವ ಕ್ರೇಜಿಸ್ಟಾರ್, ನಿನ್ನೆಯ ಕಾರ್ಯಕ್ರಮಕ್ಕೆ ಬಂದು, ರಾಜ್ ಕುಮಾರ್ ಅವರು ಅಪ್ಪಿಕೊಂಡಿದ್ದರಿಂದ ನಾನೊಬ್ಬ ನಟನಾದೆ, ನನ್ನ ತಂದೆ ಅಪ್ಪಿಕೊಂಡಿದ್ದ ನಿರ್ದೇಶಕನಾದೆ, ಅಪ್ಪು ಅಪ್ಪಿಕೊಂಡಿದ್ದರಿಂದ ಅದೃಷ್ಟವಂತನಾದೆ ಎಂದು ಅಪ್ಪು ಅವರ ನೆನಪು ಮಾಡಿಕೊಂಡಿದ್ದಾರೆ ಕ್ರೇಜಿಸ್ಟಾರ್.

Comments are closed.