ಎಲ್ಲರೂ ಅಪ್ಪು ಅನ್ನು ಹೊಗಳಿದರು, ಆದರೆ ತಮಿಳು ನಟ ಸೂರ್ಯ, ಹೇಳಿದ ಅದೊಂದು ಮಾತು ನಿಜಕ್ಕೂ ಮನಸ್ಸಿಗೆ ಹೆಚ್ಚು ಭಾಸವಾಯಿತು. ವೇದಿಕೆ ಮೇಲೆ ಹೇಳಿದ್ದೇನು ಗೊತ್ತೇ??

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮಕ್ಕೆ ಸ್ಟಾರ್ ನಟರೆಲ್ಲರು ಹಾಜರಿದ್ದರು ಸ್ಯಾಂಡಲ್ ವುಡ್ ನಟರ ಜೊತೆಗೆ ಟಾಲಿವುಡ್ ನಟರು ಸಹ ಹಾಜರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ತಮಿಳು ನಟ ಸೂರ್ಯ ರವರು ಅಪ್ಪು ಹಾಗೂ ತಮ್ಮ ಗೆಳೆತನದ ಬಗ್ಗೆ ವೇದಿಕೆಯಲ್ಲಿ ತಮ್ಮ ನೆನಪನ್ನು ಮೆಲುಕು ಹಾಕಿದರು. ಹಾಗಾದರೆ ತಮಿಳು ನಟ ಸೂರ್ಯ ರವರು ತಮ್ಮ ಹಾಗೂ ಅಪ್ಪು ರವರ ಒಡನಾಟದ ಬಗ್ಗೆ ವೇದಿಕೆಯಲ್ಲಿ ಮೆಲುಕು ಹಾಕಿದರು.

ಅಪ್ಪು ನಾನು ಚಿಕ್ಕ ವಯಸ್ಸಿನಿಂದಲೂ ಗೆಳೆಯರು. ಅದೂ ಯಾವ ರೀತಿಯೆಂದರೆ ನಾವಿಬ್ಬರೂ ತಾಯಿಯ ಗರ್ಭದಲ್ಲಿರುವಾಗಲೇ ನಾವು ಗೆಳೆಯರು ಅಪ್ಪು ನನ್ನ ಮೊದಲನೆ ಭೇಟಿ ಮೈಸೂರಿನ ಹೋಟೆಲ್ ನಲ್ಲಿ . ಅಪ್ಪು ನನಗೆ ಬರೀ ಗೆಳೆಯನಲ್ಲ ಅಪ್ಪು ನನ್ನ ತಮ್ಮ ನನ್ನ ಸಹೋದರ ಅಪ್ಪು ರವರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ ಅವರು ಇಲ್ಲೇ ನಮ್ಮ ಜೊತೆಯಲ್ಲೇ ಇದ್ದು ಎಲ್ಲವನ್ನೂ ನೋಡುತ್ತಿದ್ದಾರೆ. ನಾನು ಅಪ್ಪು ರವರಂತೆ ಅಭಿಮಾನಿ ಬಳಗ ಹೊಂದಿರುವವರನ್ನು ನೋಡಿಲ್ಲ ಒಬ್ಬ ಮನುಷ್ಯನಿಗಾಗಿ ಇಡೀ ರಾಜ್ಯದ ಜನ ಅವರನ್ನು ಪ್ರೀತಿಸುವ ಪರಿಯನ್ನು ನಾನು ನನ್ನ ಜೀವನದಲ್ಲಿ ಎಲ್ಲಿಯೂ ನೋಡಿಲ್ಲ. ಮುಂದೆ ನೋಡಲು ಸಾಧ್ಯ ವಾಗುವುದಿಲ್ಲವೆನೋ. ಕರ್ನಾಟಕ ರಾಜ್ಯ ಎಷ್ಟು ಅದ್ಭುತವೂ ಅಲ್ಲಿಯ ಜನರೂ ಕೂಡ ಅಷ್ಟೆ ಅದ್ಭುತವಾದ ಜನ. ನಿಮ್ಮಂತ ಅಭಿಮಾನಿ ಜನರನ್ನು ಪಡೆದ ಅಪ್ಪೂರವರು ನಿಜಕ್ಕೂ ಅದೃಷ್ಟವಂತರು. ಹಾಗೆಯೇ ಅಪ್ಪು ಅಂತಹ ಸರಳ ಸಹೃದಯಿ ಪ್ರೇಮಿಯನ್ನು ಪಡೆದ ನೀವು ಅದೃಷ್ಟವಂತರು. ಇದಕ್ಕೆಲ್ಲಾ ಕಾರಣ ಅಪ್ಪು ರವರು ತಮ್ಮನ್ನು ತಾವು ನಟರೆಂದು ಬೀಗದೆ ಅಪ್ಪೂರವರು ಅತ್ಯಂತ ಸರಳವಾದ ಸ್ನೇಹಮಯವಾದ ಅಭಿಮಾನಿಗಳಿಗೆ ನೀಡುತ್ತಾ ತೃಪ್ತಿಕದಾಯಕ ಭಾವದಲ್ಲಿರುತ್ತಿದ್ದರು. ಅಪ್ಪೂರವರ ಆ ನಗು ಮುಖ ಕಲ್ಲನ್ನು ಕರಗಿಸುವ ಶಕ್ತಿಯಂತೆ ಇತ್ತು.

surya abt appu | ಎಲ್ಲರೂ ಅಪ್ಪು ಅನ್ನು ಹೊಗಳಿದರು, ಆದರೆ ತಮಿಳು ನಟ ಸೂರ್ಯ, ಹೇಳಿದ ಅದೊಂದು ಮಾತು ನಿಜಕ್ಕೂ ಮನಸ್ಸಿಗೆ ಹೆಚ್ಚು ಭಾಸವಾಯಿತು. ವೇದಿಕೆ ಮೇಲೆ ಹೇಳಿದ್ದೇನು ಗೊತ್ತೇ??
ಎಲ್ಲರೂ ಅಪ್ಪು ಅನ್ನು ಹೊಗಳಿದರು, ಆದರೆ ತಮಿಳು ನಟ ಸೂರ್ಯ, ಹೇಳಿದ ಅದೊಂದು ಮಾತು ನಿಜಕ್ಕೂ ಮನಸ್ಸಿಗೆ ಹೆಚ್ಚು ಭಾಸವಾಯಿತು. ವೇದಿಕೆ ಮೇಲೆ ಹೇಳಿದ್ದೇನು ಗೊತ್ತೇ?? 2

ನಾನು ಅಪ್ಪು ಸಮಾಧಿಗೆ ಭೇಟಿ ನೀಡಿದಾಗ ನನಗೆ ಒಬ್ಬ ಮನುಷ್ಯ ಯಾವ ರೀತಿ ಬದುಕಬೇಕು ಎಂದರೆ ಅಪ್ಪುರವರ ಹಾಗೆ ಬದುಕಬೇಕು ಅನಿಸಿತು. ನನಗೆ ಈಗಲೂ ಒಂದು ವಿಚಾರ ಆಶ್ಚರ್ಯ ವಾಗುತ್ತದೆ ಅದೇನೆಂದರೆ ಅಪ್ಪು ಸಮಾಧಿಗೆ ಪ್ರತಿ ವಾರ 50 ಸಾವಿರ ಜನ ಭೇಟಿ ನೀಡುತ್ತಾರೆ ಎಂಬುದು ಕೇಳಿ ನನಗೆ ಪರಮಾಶ್ಚರ್ಯವಾಯಿತು ಎಂದು ಕರ್ನಾಟಕ ರಾಜ್ಯದ ಜನರು ಅಪ್ಪು ರವರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನದ ಬಗ್ಗೆ ಹೊಗಳಿದರು. ನಾಡಿನ ಜನಗಳ ಪ್ರೀತಿ, ಅಭಿಮಾನವನ್ನು ಹೊಗಳಿದರು. ಅವರೊಂದಿಗೆ ಸಾಕಷ್ಟು ಅದ್ಭುತವಾದ ನೆನಪುಗಳು ನನಗೆ ಇವೆ. ಆದರೆ ಒಂದು ವರ್ಷ ಎಷ್ಟು ಬೇಗ ಉರುಳಿಬಿಟ್ಟಿತು ಎಂದರೆ ಅಪ್ಪುರವರು ಇಲ್ಲವೆಂದು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಕಷ್ಟದ ಸಮಯದಲ್ಲು ಅಶ್ವಿನಿ ಪುನೀತ್ ರಾಜಕುಮಾರ್ ರವರು ಕುಗ್ಗದೆ ಧೈರ್ಯವಾಗಿ ಹೆಜ್ಜೆ ಇಟ್ಟಿದ್ದಾರೆ. ಅಪ್ಪು ರವರು ಅವರ ಕುಟುಂಬದ ಈ ದೈರ್ಯವನ್ನು ನೋಡಿ ಖಂಡಿತ ಹೆಮ್ಮೆ ಪಡುತ್ತಿರುತ್ತಾರೆ. ಯಾವಾಗಲೂ ಹೀಗೆಯೇ ಧೈರ್ಯವಾಗಿ ಮುಂದೆ ಸಾಗಬೇಕು ಎಂದರು. ಅಪ್ಪು ಎಂದಿಗೂ ಮರೆಯಲಾಗದ ವ್ಯಕ್ತಿ ಎಂದು ಕಣ್ಣೀರಿಟ್ಟರು. ಅಪ್ಪುವಿನ ಇದೇ ಸಮಾಜಮುಖಿ ಗುಣದಿಂದಾಗಿ ಇಷ್ಟೋಂದು ಜನ ನಾವು ಅವರಿಗಾಗಿ ಸೇರಿದ್ದೇವೆ’’ ಎಂದರು.

ಅಪ್ಪೂರವರು ಎಲ್ಲಿಯೂ ಹೋಗಿಲ್ಲ ಅವರು ಒಂದಲ್ಲ ಒಂದು ರೀತಿಯಲ್ಲಿ ಒಳ್ಳೆಯ ಕೆಲಸ ಮಾಡುವಲ್ಲಿ ನಮ್ಮ ಜೊತೆ ಇರುತ್ತಾರೆ. ಈಗ ಗಂಧದ ಗುಡಿ ಸಿನಿಮಾದ ಮೂಲಕ ಅಪ್ಪು ರವರು ನಮ್ಮ ಜೊತೆ ಇದ್ದಾರೆ. ಸಿನಿಮಾದ ಮೂಲಕ ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು, ಹೇಗೆ ಕಾಪಾಡಬೇಕು ಎಂದು ಹೇಳಿದ್ದಾರೆ. ಯಾವುದೇ ಹೆಸರು ಪದವಿ ರೇಟಿಂಗ್ ಅನ್ನು ಬಯಸದೆ ಹೃದಯದಿಂದ ಸ್ವಚ್ಛವಾಗಿರುವ ವ್ಯಕ್ತಿಗಷ್ಟೆ ಈ ರೀತಿಯ ಸಾಹಸ ಮಾಡಲು ಸಾಧ್ಯ. ಅಪ್ಪುವಿನ ಇದೇ ಸಮಾಜಮುಖಿ ಗುಣದಿಂದಾಗಿ ಇಷ್ಟೋಂದು ಜನ ನಾವು ಅವರಿಗಾಗಿ ಸೇರಿದ್ದೇವೆ’’.ಅವರು ಯಾವಾಗಲೂ ನಮ್ಮ ಪ್ರೀತಿಯ ರಾಜಕುಮಾರ ಅವರು ಎಂದಿಗೂ ಅಜರಾಮರ ಎಂದು ಹೊಗಳಿದರು.

Comments are closed.