News from ಕನ್ನಡಿಗರು

ರಾಹುಲ್ ದ್ರಾವಿಡ್ ರವರ ಮತ್ತೊಂದು ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕೊಹ್ಲಿ; ಮಾಡಿದ ಮಹಾನ್ ಸಾಧನೆ ಏನು ಗೊತ್ತೇ??

13

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಮೋಘ ಅರ್ಧಶತಕದ ಕಾರಣದಿಂದಾಗಿ ಹೈದರಾಬಾದ್ ನಲ್ಲಿ ನಡೆದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ರೋಚಕವಾಗಿ ಗೆಲುವನ್ನು ಸಾಧಿಸಿದೆ.

ಅದರಲ್ಲೂ ವಿಶೇಷವಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಸಂತೋಷ ಪಡಬೇಕಾದ ಇನ್ನೊಂದು ವಿಚಾರ ಏನೆಂದರೆ ಏಷ್ಯಾ ಕಪ್ ನಿಂದ ಪ್ರಾರಂಭಿಸಿ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ಸರಣಿಯವರೆಗೂ ಕೂಡ ಸತತವಾಗಿ ಸಮತೋಲಿತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇನ್ನು ಹೈದರಾಬಾದ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ವಿರಾಟ್ ಕೊಹ್ಲಿ ಅವರು ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರರ ಸಾಲಿನಲ್ಲಿ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ ರವರನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿ ಮೇಲಕ್ಕೆರಿದ್ದಾರೆ.

ಮೊದಲನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಅವರು ಒಟ್ಟಾರೆ 664 ಪಂದ್ಯಗಳಿಂದ ಬರೋಬ್ಬರಿ 34357 ರನ್ನುಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಸದ್ಯಕ್ಕೆ ವಿರಾಟ್ ಕೊಹ್ಲಿ ಅವರು ಕೇವಲ 471 ಪಂದ್ಯಗಳಿಂದ 24078 ರನ್ನುಗಳನ್ನು ಬಾರಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ರವರು 504 ಪಂದ್ಯಗಳಿಂದ 24064 ರನ್ನುಗಳನ್ನು ಗಳಿಸಿದ್ದಾರೆ. ಇದೇ ರೀತಿ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಮತ್ತಷ್ಟು ದಾಖಲೆಗಳನ್ನು ಮುರಿಯಲಿ ಎಂದು ಹಾರೈಸೋಣ.

Leave A Reply

Your email address will not be published.