ನಾಮಿನೇಷನ್ ವಿಚಾರದಲ್ಲಿ ಎಲ್ಲರ ಲೆಕ್ಕಾಚಾರಗಳು ಉಲ್ಟಾ: ಮನೆಯಲ್ಲೂ ಶುರುವಾಯ್ತು ಡವ ಡವ. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ಸೆಪ್ಟೆಂಬರ್ 24 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗಿದ್ದು, ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಓಟಿಟಿನಲ್ಲಿ ಆಯ್ಕೆಯಾದವರು ಹಾಗೂ ನವೀನರು ಮತ್ತು ಪ್ರವೀಣರನ್ನು ಬಿಗ್ ಬಾಸ್ ಮನೆಯ ಒಳಗೆ ಕಳುಹಿಸಲಾಗಿತ್ತು. ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ಸ್ಪರ್ಧಿಗಳ ನಡುವೆ ಆರೋಪ ಪ್ರತ್ಯಾರೋಪಗಳು ಈಗಾಗಲೇ ಪ್ರಾರಂಭವಾಗಿದೆ.

ಈಗಾಗಲೇ ಬಿಗ್ ಬಾಸ್ ಮನೆಗೆ 18 ಜನರು ಸ್ಪರ್ಧಿಗಳಾಗಿ ಈ ಬಾರಿ ಹೋಗಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವಾರ ನಾಮಿನೇಷನ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆಯಿಂದಾಗಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಲೇ ಹೋಗುತ್ತದೆ. ಇನ್ನು ವಿಶೇಷ ಎನ್ನುವಂತೆ ಈ ಬಾರಿಯ ಬಿಗ್ ಬಾಸ್ ನ ಮೊದಲ ವಾರದಲ್ಲಿಯೇ ಬರೋಬ್ಬರಿ 12 ಸ್ಪರ್ಧಿಗಳು ನಾಮಿನೇಷನ್ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಇವರು ಮನೆಯಿಂದ ಹೊರಹೋಗುವ ಭೀತಿಯನ್ನು ಈಗ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯಿಂದ ಮೊದಲ ವಾರದಲ್ಲೇ ಹೊರಹೋಗುವ ಭೀತಿಯನ್ನು ನಾಮಿನೇಷನ್ ಮೂಲಕ ಎದುರಿಸುತ್ತಿರುವ ಸ್ಪರ್ಧಿಗಳು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

bbk9 nominTION | ನಾಮಿನೇಷನ್ ವಿಚಾರದಲ್ಲಿ ಎಲ್ಲರ ಲೆಕ್ಕಾಚಾರಗಳು ಉಲ್ಟಾ: ಮನೆಯಲ್ಲೂ ಶುರುವಾಯ್ತು ಡವ ಡವ. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಗೊತ್ತೇ??
ನಾಮಿನೇಷನ್ ವಿಚಾರದಲ್ಲಿ ಎಲ್ಲರ ಲೆಕ್ಕಾಚಾರಗಳು ಉಲ್ಟಾ: ಮನೆಯಲ್ಲೂ ಶುರುವಾಯ್ತು ಡವ ಡವ. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಗೊತ್ತೇ?? 2

ಮೊದಲ ವಾರದಲ್ಲಿ ನಾಮಿನೇಷನ್ ಆಗಿರುವ ಸ್ಪರ್ಧಿಗಳು ದರ್ಶ್, ದಿವ್ಯ ಉರುಡುಗ, ಆರ್ಯವರ್ಧನ್, ಪ್ರಶಾಂತ್ ಸಂಬರ್ಗಿ, ಐಶ್ವರ್ಯ ಪಿಸೆ, ನವಾಜ್, ಅರುಣ್ ಸಾಗರ್, ವಿನೋದ್, ರೂಪೇಶ್ ರಾಜಣ್ಣ, ಸಾನಿಯಾ ಅಯ್ಯರ್, ಮಯೂರಿ ಹಾಗೂ ಕಾವೇರಿ ಅವರು ನಾಮಿನೇಟ್ ಆಗಿದ್ದಾರೆ. ಇಂತಹ ದೊಡ್ಡ ವೇದಿಕೆಯಲ್ಲಿ ಅವಕಾಶ ಪಡೆದಿದ್ದರೂ ಕೂಡ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗದೆ ಮೊದಲ ವಾರದಲ್ಲಿ ಯಾರು ಎಲಿಮಿನೇಷನ್ ಆಗಿ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ಮೊದಲ ವಾರದಲ್ಲೇ ಮನೆಯಿಂದ ಹೊರ ಬೀಳುವ ಸ್ಪರ್ಧಿ ಯಾರು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.