News from ಕನ್ನಡಿಗರು

ಈ ಪುಟ್ಟ ಬಾಲಕ ಇಂದು ಜಗತ್ತೇ ತಿರುಗಿ ನೋಡುವ ಹಾಗೆ ಮಾಡಿರುವ ಸ್ಟಾರ್ ನಟ. ಯಾರು ಗೊತ್ತೇ?? ಗುರುತಿಸಲು ಸಾಧ್ಯವೇ??

31

ನಮಸ್ಕಾರ ಸ್ನೇಹಿತರೇ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೆದುಳಿಗೆ ಚುರುಕು ನೀಡುವಂತಹ ಕೆಲವೊಂದು ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈಗ ಅದೇ ರೀತಿಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಹೌದು ನಾವು ಮಾತನಾಡುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ಯುವ ನಟ ನಿರ್ದೇಶಕನ ಕುರಿತಂತೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅವರದ್ದೇ ಹವಾ. ಅತಿ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಿ ಅದರಿಂದ ಹಲವಾರು ಪಟ್ಟು ಹೆಚ್ಚಿನ ಲಾಭವನ್ನು ಪಡೆಯುವ ವಿದ್ಯೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ತಮ್ಮ ಬಾಲ್ಯದ ದಿನಗಳ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಿದರೆ ರಕ್ಷಿ ಶೆಟ್ಟಿ ಅವರ ಬಾಲ್ಯದ ದಿನಗಳ ಫೋಟೋಗಳು ಸಿಗುವುದು ಅತ್ಯಂತ ಕಡಿಮೆ ಸಾಧ್ಯತೆ ಇರುತ್ತದೆ.

ಸಡನ್ ಆಗಿ ಈ ಫೋಟೋವನ್ನು ಗಮನಿಸಿದರೆ ರಕ್ಷಿತ್ ಶೆಟ್ಟಿ ಅವರ ಬಾಲ್ಯದ ಫೋಟೋ ಎಂಬುದಾಗಿ ಗುರುತಿಸಲು ಖಂಡಿತವಾಗಿ ಕೊಂಚಮಟ್ಟಿಗೆ ಯೋಚನೆ ಮಾಡಬೇಕಾಗುತ್ತದೆ. ಸದ್ಯಕ್ಕೆ ಈ ವರ್ಷ ಚಾರ್ಲಿ ಸಿನಿಮಾದ ಮೂಲಕ ಯಶಸ್ಸಿನ ಹಾದಿಯನ್ನು ಹಿಡಿದಿರುವ ರಕ್ಷಿತ್ ಶೆಟ್ಟಿ ಮುಂದಿನ ದಿನಗಳಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಮತ್ತೊಂದು ದೊಡ್ಡ ಗೆಲುವು ಸಾಧಿಸುವ ಭರವಸೆಯನ್ನು ಮೂಡಿಸಿದ್ದಾರೆ.

Leave A Reply

Your email address will not be published.