ನುಗ್ಗೆಕಾಯಿ ಬಲಿತು ಹೋಗಿದೆ ಎಂದು ಅಪ್ಪಿ ತಪ್ಪಿ ಕೂಡ ಎಸೆಯಬೇಡಿ. ಆ ಬೀಜಗಳ ಉಪಯೋಗ ತಿಳಿದರೆ ಬೇಕು ಎಂದೇ ಬಳಿಯುವಂತೆ ಮಾಡುತ್ತೀರಾ.

ನಮಸ್ಕಾರ ಸ್ನೇಹಿತರೇ ನುಗ್ಗೆಕಾಯಿ ಸಾಕಷ್ಟು ಜೀವಸತ್ವಗಳನ್ನು ಹೊಂದಿದೆ ಎಂಬುದು ನಿಮಗಲ್ಲರಿಗೂ ತಿಳಿದಿರುವ ವಿಚಾರ. ನುಗ್ಗೆಕಾಯಿ ಬಲಿತಿದೆ ಎಂಬ ಕಾರಣಕ್ಕಾಗಿ ಅದನ್ನು ಬಿಸಾಡಬೇಡಿ ಅದರ ಬೀಜದಲ್ಲಿ ಕೂಡ ಸಾಕಷ್ಟು ಪ್ರಯೋಜನಗಳನ್ನು ನಿಮ್ಮ ದೇಹ ಪಡೆದುಕೊಳ್ಳಬಹುದಾಗಿದೆ. ಅವುಗಳಿಂದ ನಾವು ಪಡೆಯಬಹುದಾದ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನುಗ್ಗೆಕಾಯಿ ಎಲೆಗಳನ್ನು ಮಲಗುವ ಮುನ್ನ 15 ನಿಮಿಷಗಳ ಕಾಲ ಕುದಿಸಿ ಮಲಗುವ ಮೊದಲು ಅದನ್ನು ಕುಡಿದರೆ ನಿಮ್ಮ ನಿದ್ರೆ ಸರಾಗವಾಗಿ ನಡೆಯುತ್ತದೆ. ನುಗ್ಗೆಕಾಯಿ ಬೀಜಗಳು ಹೆಚ್ಚಿನ ಫೈಬರ್ ಗುಣಾಂಶಗಳನ್ನು ಹೊಂದಿರುವ ಕಾರಣದಿಂದಾಗಿ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ. ನುಗ್ಗೆಕಾಯಿ ಸೇವನೆ ನಿಮ್ಮ ದೇಹದಲ್ಲಿ ಮಧುಮೇಹ ಹಾಗೂ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣ ಮಾಡುವುದಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ಕಡಿಮೆ ಕಬ್ಬಿನಾಂಶವನ್ನು ಹೊಂದಿರುವ ವ್ಯಕ್ತಿಗಳು ಇದನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚು ಮಾಡಿಕೊಳ್ಳಬಹುದು ಹಾಗೂ ದೇಹದಲ್ಲಿ ಆಮ್ಲಜನಕದ ಸರಾಗ ಸಾಗಾಣಿಕೆ ಕೂಡ ನಡೆಯುತ್ತದೆ. ನುಗ್ಗೆಕಾಯಿ ಬೀಜಗಳಲ್ಲಿ ಕ್ಯಾಲ್ಸಿಯಂ ಪೋಷಕಾಂಶ ಇರುವ ಹಿನ್ನೆಲೆಯಲ್ಲಿ ನಿಮ್ಮ ಕೀಲು ಹಾಗೂ ಮೂಳೆಯ ಸಮಸ್ಯೆಗಳಿಗೆ ಸಂಪೂರ್ಣ ಉತ್ತಮ ಪರಿಹಾರವನ್ನು ಕಾಣಬಹುದಾಗಿದೆ.

nuggekayi beeja | ನುಗ್ಗೆಕಾಯಿ ಬಲಿತು ಹೋಗಿದೆ ಎಂದು ಅಪ್ಪಿ ತಪ್ಪಿ ಕೂಡ ಎಸೆಯಬೇಡಿ. ಆ ಬೀಜಗಳ ಉಪಯೋಗ ತಿಳಿದರೆ ಬೇಕು ಎಂದೇ ಬಳಿಯುವಂತೆ ಮಾಡುತ್ತೀರಾ.
ನುಗ್ಗೆಕಾಯಿ ಬಲಿತು ಹೋಗಿದೆ ಎಂದು ಅಪ್ಪಿ ತಪ್ಪಿ ಕೂಡ ಎಸೆಯಬೇಡಿ. ಆ ಬೀಜಗಳ ಉಪಯೋಗ ತಿಳಿದರೆ ಬೇಕು ಎಂದೇ ಬಳಿಯುವಂತೆ ಮಾಡುತ್ತೀರಾ. 2

ನುಗ್ಗೆಕಾಯಿ ಬೀಜದ ಸೇವನೆ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿಯಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ನುಗ್ಗೆಕಾಯಿ ಬೀಜಗಳು ಕ್ಯಾ’ನ್ಸರ್ ವಿರೋಧಿ ಆಗಿ ಕೂಡ ವೈಜ್ಞಾನಿಕವಾಗಿ ಸಾಬೀತಾಗಿರುವ ಆಹಾರ ವಸ್ತುವಾಗಿದೆ. ನುಗ್ಗೆಕಾಯಿ ಬೀಜದಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೃದಯ ಸಂಬಂಧಿ ಹಾಗೂ ಹೃದಯದ ಅಂಗಾಂಗಗಳ ಸುರಕ್ಷತೆಯಲ್ಲಿ ಪ್ರಮುಖ ಪಾಲುದಾರಿಕೆಯನ್ನು ಹೊಂದಿದೆ. ನುಗ್ಗೆಕಾಯಿ ಬೀಜಗಳು ಅದರಲ್ಲೂ ವಿಶೇಷವಾಗಿ ಅದರ ಎಣ್ಣೆ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ರಾಮಬಾಣವಾಗಿದೆ ಎನ್ನುವುದು ಕೂಡ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರ. ಒಟ್ಟಾರೆಯಾಗಿ ನುಗ್ಗೆಕಾಯಿಯ ಬೀಜವು ನಿಮ್ಮ ಆರೋಗ್ಯದ ಉನ್ನತಿಗಾಗಿ ಇಷ್ಟೊಂದು ವಿಧದಲ್ಲಿ ಸಹಾಯಕಾರಿ ಆಗಲಿದೆ.

Comments are closed.