ಕಳಪೆ ಫಾರ್ಮ್ ನಿಂದ ಹೊರಬರಲು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡ ವಿರಾಟ್ ಕೊಹ್ಲಿ. ಮಾಡಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ತಾವೆಲ್ಲರೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಜಿಂಬಾಬ್ವೆ ಸರಣಿಯ ನಂತರ ಆಗಸ್ಟ್ 27ರಂದು ಅರಬ್ಬರ ನಾಡಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಮೆಂಟ್ ಗೆ ತನ್ನ ತಂಡವನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿಕೊಂಡಿದೆ. ಅದರಲ್ಲೂ ಹಲವಾರು ಸಮಯಗಳಿಂದ ಕಳೆಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರು ಕೂಡ ಈ ತಂಡದಲ್ಲಿ ಆಯ್ಕೆಯಾಗಿದ್ದಾರೆ.

2019ರ ನಂತರ ವಿರಾಟ್ ಕೊಹ್ಲಿ ರವರು ಹೇಳಿಕೊಳ್ಳುವಂತಹ ಯಾವುದೇ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ನೀಡಿಲ್ಲ. ಮೂರು ವರ್ಷಗಳಿಂದ ಐಪಿಎಲ್ ಹಾಗೂ ರಾಷ್ಟ್ರೀಯ ತಂಡದಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿರುವ ವಿರಾಟ್ ಕೊಹ್ಲಿ ಅವರು ಈಗ ಮತ್ತೆ ತಮ್ಮ ಲಯಕ್ಕೆ ಮರಳಿ ಬರಲು ಒಬ್ಬ ಕೋಚ್ ರವರ ಮೊರೆ ಹೋಗಿದ್ದಾರೆ. ಇವರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದು ದಿನೇಶ್ ಕಾರ್ತಿಕ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಂದ ನಂತರವೇ ಬ್ಯಾಟಿಂಗ್ ನಲ್ಲಿ ಸುಧಾರಣೆಯನ್ನು ತಂದಿದ್ದರು. ಹೌದು ನಾವು ಮಾತನಾಡುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ಅವರ ಕುರಿತಂತೆ. ಏಷ್ಯಾ ಕಪ್ ನಲ್ಲಿ ಆಯ್ಕೆಯಾಗಿರುವ ವಿರಾಟ್ ಕೊಹ್ಲಿ ರವರು ಇದರಲ್ಲಾದರೂ ಉತ್ತಮ ಪ್ರದರ್ಶನವನ್ನು ನೀಡಲೇ ಬೇಕಾಗಿರುವ ಒತ್ತಡದಲ್ಲಿದ್ದಾರೆ ಹೀಗಾಗಿ ಸಂಜಯ್ ಬಂಗಾರ್ ಅವರ ಬಳಿ, ಬ್ಯಾಟಿಂಗ್ ನಲ್ಲಿ ತಾನು ಯಾವ್ಯಾವ ತಪ್ಪುಗಳನ್ನು ಮಾಡುತ್ತಿದ್ದೇನೆ ಎಂಬುದಾಗಿ ತಿಳಿದು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ.

virat 3 | ಕಳಪೆ ಫಾರ್ಮ್ ನಿಂದ ಹೊರಬರಲು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡ ವಿರಾಟ್ ಕೊಹ್ಲಿ. ಮಾಡಿದ್ದೇನು ಗೊತ್ತೇ?
ಕಳಪೆ ಫಾರ್ಮ್ ನಿಂದ ಹೊರಬರಲು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡ ವಿರಾಟ್ ಕೊಹ್ಲಿ. ಮಾಡಿದ್ದೇನು ಗೊತ್ತೇ? 2

ಇನ್ನೇನು ಏಷ್ಯಾ ಕಪ್ ಪ್ರಾರಂಭ ಆಗಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಅದಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಅವರು ತಮ್ಮ ತಪ್ಪುಗಳನ್ನು ತಿಳಿದು ಈ ಟೂರ್ನಮೆಂಟ್ ನಲ್ಲಿ ತಂಡದ ಪರವಾಗಿ ಅಬ್ಬರಿಸಬೇಕಾಗಿದೆ. ಅದಕ್ಕಾಗಿ ಕಠಿಣ ಪರಿಶ್ರಮವನ್ನು ಕೂಡ ಪಡುತ್ತಿರುವುದು ಈಗಾಗಲೇ ಹಲವಾರು ಅವರ ಪ್ರಾಕ್ಟೀಸ್ ವಿಡಿಯೋಗಳ ಮೂಲಕ ತಿಳಿದು ಬಂದಿದೆ. ತಮ್ಮ ತಪ್ಪುಗಳನ್ನು ತಿಳಿದು ಮತ್ತೊಮ್ಮೆ ಲಯಕ್ಕೆ ಬಂದರೆ ಮಾತ್ರ ಅವರಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಟಿಕೆಟ್ ಸಿಗಲಿದೆ. ಇಲ್ಲದಿದ್ದರೆ ಅವರ ಸ್ಥಾನದ ಕುರಿತಂತೆ ಕೇಳಿ ಬರುತ್ತಿರುವ ಗಾಳಿ ಸುದ್ದಿಗಳು ನಿಜವಾದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Comments are closed.