ದರ್ಶನ್ ತನ್ನ ಮಗನಂತೆ ಎನ್ನುವ ಸುಮಲತಾ ಅಮ್ಮ ನವರು ಕ್ರಾಂತಿ ಸಿನೆಮಾಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡು ಅಭಿಮಾನಿಗಳಿಂದಲೇ ಪ್ರಚಾರವನ್ನು ಪಡೆದುಕೊಳ್ಳುತ್ತಿರುವ ಏಕೈಕ ಕನ್ನಡ ಚಿತ್ರ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ನಟನೆಯ ಕ್ರಾಂತಿ ಸಿನಿಮಾ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಒಂದು ಸಿನಿಮಾ ಈ ರೀತಿ ಸಹಜವಾಗಿ ಅಭಿಮಾನಿಗಳಿಂದಲೇ ಪ್ರಮೋಷನ್ ಪಡೆದುಕೊಳ್ಳುತ್ತಿದೆ ಎಂದರೆ ಚಿತ್ರದ ಮೇಲೆ ಹಾಗೂ ಚಿತ್ರತಂಡದ ಮೇಲೆ ಅಭಿಮಾನಿಗಳು ಯಾವ ಮಟ್ಟದಲ್ಲಿ ನಂಬಿಕೆಯನ್ನು ಹೊಂದಿದ್ದಾರೆ ಎಂಬುದನ್ನು ನೀವೇ ಅಂದಾಜು ಮಾಡಿಕೊಳ್ಳಬಹುದು.

ಯಜಮಾನ ಚಿತ್ರದ ನಂತರ ಅದೇ ತಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆಗೆ ಕ್ರಾಂತಿ ಸಿನಿಮಾವನ್ನು ಮಾಡುತ್ತಿದೆ. ಚಿತ್ರದ ನಿರ್ಮಾಪಕರಾಗಿ ಶೈಲಜಾ ನಾಗ್ ನಿರ್ದೇಶಕರಾಗಿ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಗೂ ಸಿನಿಮಾದಲ್ಲಿ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೂಡ ಕುರುಕ್ಷೇತ್ರ ಸಿನಿಮಾದ ನಂತರ ಡಿ ಬಾಸ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ.

darshan kranthi sumalatha | ದರ್ಶನ್ ತನ್ನ ಮಗನಂತೆ ಎನ್ನುವ ಸುಮಲತಾ ಅಮ್ಮ ನವರು ಕ್ರಾಂತಿ ಸಿನೆಮಾಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ದರ್ಶನ್ ತನ್ನ ಮಗನಂತೆ ಎನ್ನುವ ಸುಮಲತಾ ಅಮ್ಮ ನವರು ಕ್ರಾಂತಿ ಸಿನೆಮಾಗೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? 2

ಯಜಮಾನ ಚಿತ್ರದ ಮೂಲಕ ಡಿ ಬಾಸ್ ಅಭಿಮಾನಿಗಳಿಗೆ ಸಂಪೂರ್ಣ ತೃಪ್ತಿಯನ್ನು ನೀಡಿದ್ದ ಇದೇ ಚಿತ್ರತಂಡ ಮತ್ತೊಮ್ಮೆ ಕ್ರಾಂತಿ ಸಿನಿಮಾದ ಮೂಲಕ ಡಿ ಬಾಸ್ ಅಭಿಮಾನಿಗಳಿಗೆ ರುಚಿಗೆ ತಕ್ಕಂತೆ ಸಿನಿಮಾವನ್ನು ನೀಡುವ ಹವಣಿಕೆಯಲ್ಲಿದೆ. ಮಾಧ್ಯಮಗಳಲ್ಲಿ ಸಿನಿಮಾವನ್ನು ಪ್ರಚಾರ ಮಾಡದಿದ್ದರೂ ಕೂಡ ಅಭಿಮಾನಿಗಳಾದ ನಾವೇ ನಮ್ಮ ಆರಾಧ್ಯ ದೈವನ ಸಿನಿಮಾವನ್ನು ಪ್ರತಿಯೊಂದು ಮೂಲೆ ಮೂಲೆಯಲ್ಲೂ ಕೂಡ ಪ್ರಚಾರ ಮಾಡುತ್ತೇವೆ ಎಂಬುದಾಗಿ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಡಿ ಬಾಸ್ ಅಭಿಮಾನಿಗಳು ಕ್ರಾಂತಿ ಸಿನೆಮಾದ ಪ್ರಚಾರವನ್ನು ಮಾಡುತ್ತಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಇವರೆಲ್ಲರ ಜೊತೆಗೆ ಡಿ ಬಾಸ್ ರವರ ಮದರ್ ಇಂಡಿಯಾ ಆಗಿರುವ ರಾಜಕಾರಣಿ ಹಾಗೂ ನಟ ಅಂಬರೀಶ್ ರವರ ಧರ್ಮಪತ್ನಿ ಆಗಿರುವ ಸುಮಲತಾ ಅಂಬರೀಶ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕ್ರಾಂತಿ ಸಿನಿಮಾದ ಮುಹೂರ್ತ ಪೂಜೆ ಸಂದರ್ಭದಲ್ಲಿ ನಮಗೆ ಫೋಟೋಗಳ ಮೂಲಕ ತಿಳಿದು ಬಂದಿತ್ತು. ಇದರ ಕುರಿತಂತೆ ಚಿತ್ರತಂಡ ಹೆಚ್ಚಿನ ಸುಳಿವನ್ನು ಬಿಟ್ಟು ಕೊಟ್ಟಿಲ್ಲ. ರಾಜಕಾರಣದಲ್ಲಿ ನಿರತರಾಗಿದ್ದರು ಕೂಡ ಸುಮಲತಾ ಅಂಬರೀಶ್ ರವರು ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

ಇನ್ನು ಅದರಲ್ಲೂ ಅವರ ದೊಡ್ಡ ಮಗ ಎಂದೇ ಕರೆಯಲ್ಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾ ಎಂದರೆ ಕೇಳಬೇಕು ಖಂಡಿತವಾಗಿ ಪ್ರೀತಿಯಿಂದಲೇ ಭಾಗವಹಿಸಿರುತ್ತಾರೆ. ಈಗಾಗಲೇ ಸಿನಿಮಾ ಪಂಡಿತರು ಊಹೆ ಮಾಡಿರುವ ಪ್ರಕಾರ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿಯಾಗಿ ಸುಮಲತಾ ಅಂಬರೀಶ್ ರವರು ಕಾಣಿಸಿಕೊಂಡಿರಬಹುದು ಎಂಬುದಾಗಿ ಲೆಕ್ಕಾಚಾರ ಹಾಕಿದ್ದಾರೆ. ಯಾವುದೇ ಪಾತ್ರವನ್ನೇ ಮಾಡಿರಲಿ ಡಿ ಬಾಸ್ ಹಾಗೂ ಸುಮಲತಾ ಅಂಬರೀಶ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಕನಸು ಕ್ರಾಂತಿ ಸಿನಿಮಾದ ಮೂಲಕ ಈಡೇರುತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಡಿ ಬಾಸ್ ಅವರಿಗೋಸ್ಕರ ಸಂಭಾವನೆ ವಿಚಾರದಲ್ಲಿ ಕೂಡ ಸುಮಲತಾ ಅಂಬರೀಶ್ ರವರು ಸಡಿಲತೆಯನ್ನು ತೋರಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟಿ ಆಗಿದ್ದ ಸುಮಲತಾ ಅಂಬರೀಶ್ ರವರು ಇಂದು ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯ ಪಾತ್ರದಲ್ಲಿ ಕೂಡ ಯಾರಿಗೇನು ಕಮ್ಮಿ ಇಲ್ಲದಂತೆ ನಟಿಸುತ್ತಾರೆ. ಸಾಮಾನ್ಯವಾಗಿ ಸುಮಲತಾ ಅಂಬರೀಶ್ ರವರು ಒಂದು ಸಿನಿಮಾಗೆ ಏನಿಲ್ಲವೆಂದರೂ 80 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ.

ಆದರೆ ಕ್ರಾಂತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಸಿನಿಮಾ ಎನ್ನುವ ವಿಶೇಷ ಕಾರಣಕ್ಕಾಗಿ ಕ್ರಾಂತಿ ಸಿನಿಮಾಗೆ ಕೇವಲ 60 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಇದು ನಿಜಕ್ಕೂ ಕೂಡ ದರ್ಶನ್ ಹಾಗೂ ಸುಮಲತಾ ಅಂಬರೀಶ್ ರವರ ನಡುವೆ ಇರುವ ವಾತ್ಸಲ್ಯ ಹಾಗೂ ಮಮತೆಯ ಪ್ರತೀಕ ಎಂದರು ಕೂಡ ತಪ್ಪಾಗಲಾರದು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ಪಂಚಭಾಷೆ ಸಿನಿಮಾವಾಗಿ ಸದ್ದು ಮಾಡಲು ಹೊರಟಿರುವ ಸಿನಿಮಾ ಎಂಬುದಾಗಿ ಕ್ರಾಂತಿ ಸಿನಿಮಾವನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬಹುದಾಗಿದೆ.

ಶಿಕ್ಷಣದ ಕುರಿತಂತೆ ಅರ್ಥಪೂರ್ಣ ಅರ್ಥವನ್ನು ಹೊಂದಿರುವ ಈ ಸಿನಿಮಾ ಖಂಡಿತವಾಗಿ ಮುಂದಿನ ದಿನಗಳಲ್ಲಿ ಪರಭಾಷ ಸಿನಿಮಾ ಪ್ರೇಮಿಗಳಿಗೂ ಕೂಡ ಇಷ್ಟ ಆಗೋದ್ರಲ್ಲಿ ಅತಿಶಯೋಕ್ತಿ ಇಲ್ಲ. ಕ್ರಾಂತಿ ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಇದ್ದು ಪ್ರತಿಯೊಬ್ಬರೂ ಕೂಡ ಈ ಸಿನಿಮಾ ದೊಡ್ಡಮಟ್ಟದ ಯಶಸ್ಸನ್ನು ಮುಂದಿನ ದಿನಗಳಲ್ಲಿ ಬಿಡುಗಡೆಯ ಸಂದರ್ಭದಲ್ಲಿ ಕಾಣಲಿ ಎಂಬುದಾಗಿ ಆಶಿಸುತ್ತಿದ್ದಾರೆ.

Comments are closed.