ಯೋಗರಾಜ್ ಭಟ್ ರವರಿಗೆ ಸರಿಯಾಗಿ ವಾರ್ನಿಂಗ್ ಕೊಟ್ಟ ಯುವಕ: ಏನಾಗಿದೆ ಗೊತ್ತೆ??

ನಮಸ್ಕಾರ ಸ್ನೇಹಿತರೆ ಇದೆ ಆಗಸ್ಟ್ 12ರಂದು ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ದಿಗಂತ್ ಮಂಚಾಲೆ ಹಾಗೂ ಪವನ್ ಕುಮಾರ್ ನಟನೆಯ ಬಹುನಿರೀಕ್ಷಿತ ಗಾಳಿಪಟ2 ದೇಶ ವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಗಾಳಿಪಟ ಯಾವ ಮಟ್ಟಿಗೆ ಬಿಡುಗಡೆಯಾಗಿ ಅಂದಿನ ಕಾಲದಲ್ಲಿ ದಾಖಲೆ ನಿರ್ಮಿಸಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.

ಈಗ ಗಾಳಿಪಟ 2 ಬಿಡುಗಡೆಯಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಮತ್ತೊಮ್ಮೆ ಕನ್ನಡ ಪ್ರೇಕ್ಷಕರು ಸೇರಿದಂತೆ ಸಿನಿಮಾ ಪ್ರಿಯರಿಗೆ ಇಷ್ಟವಾಗಿದೆ ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು ಪ್ರತಿಯೊಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ರುಚಿಸಿದೆ. ಈಗಾಗಲೇ ಸಿನಿಮಾ ಬಿಡುಗಡೆಯಾಗಿ ಮೊದಲ ವಾರಾಂತ್ಯವನ್ನು ಕಂಡಿದ್ದರು ಕೂಡ ಸಿನಿಮಾದ ಹೌಸಫುಲ್ ಬೋರ್ಡ್ ಗಳು ಇನ್ನೂ ಕೂಡ ಕಡಿಮೆ ಆಗಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಕೂಡ ದಾಖಲೆಯ ಮಟ್ಟದಲ್ಲಿ ಕಲೆಕ್ಷನ್ ಕಾಣುತ್ತಿದೆ. ಇದರ ನಡುವಲ್ಲಿಯೇ ಸಿನಿಮಾವನ್ನು ನೋಡಿರುವ ಒಬ್ಬ ಪ್ರೇಕ್ಷಕ ಯೋಗರಾಜ್ ಭಟ್ ರವರಿಗೆ ವಾರ್ನಿಂಗ್ ನೀಡಿದ್ದಾನೆ. ಅರೆ, ಇದೇನಪ್ಪಾ ಸಿನಿಮಾ ನೋಡಿ ವಾರ್ನಿಂಗ್ ನೀಡುವಷ್ಟು ಏನಾಗಿದೆ ಎಂಬುದಾಗಿ ನೀವು ಕೇಳಬಹುದಾಗಿದೆ ಇಲ್ಲಿ ಕೂಡ ಒಂದು ಇಂಟರೆಸ್ಟಿಂಗ್ ವಿಚಾರ ಅಡಗಿದೆ.

yoga | ಯೋಗರಾಜ್ ಭಟ್ ರವರಿಗೆ ಸರಿಯಾಗಿ ವಾರ್ನಿಂಗ್ ಕೊಟ್ಟ ಯುವಕ: ಏನಾಗಿದೆ ಗೊತ್ತೆ??
ಯೋಗರಾಜ್ ಭಟ್ ರವರಿಗೆ ಸರಿಯಾಗಿ ವಾರ್ನಿಂಗ್ ಕೊಟ್ಟ ಯುವಕ: ಏನಾಗಿದೆ ಗೊತ್ತೆ?? 2

ಹೌದು ಫ್ರೆಂಡ್ಸ್ ಸಿನಿಮಾ ನೋಡಿರುವ ಹುಡುಗ ಯೋಗರಾಜ್ ಭಟ್ ರವರಿಗೆ ಗಾಳಿಪಟ 2 ಸಿನಿಮಾ ಕೊಟ್ಟಿದ್ದೀರಾ ಈಗ ಗಾಳಿಪಟ 3 ಮಾಡ್ಲೇಬೇಕು ಎನ್ನುವುದಾಗಿ ವಾರ್ನಿಂಗ್ ನೀಡ್ತಾ ಇದೀನಿ ಎಂಬುದಾಗಿ ಚಿತ್ರದ ಕುರಿತಂತೆ ತನ್ನ ಮೆಚ್ಚುಗೆಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾನೆ. ಅಂದರೆ ಈ ಫ್ರಾಂಚೈಸಿಯ ಸಿನಿಮಾ ಅಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದೆ ಎಂದು ಹೇಳಬಹುದಾಗಿದೆ. ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಕಾಂಬಿನೇಷನ್ ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ವರ್ಕೌಟ್ ಆಗಿದೆ ಎಂಬುದಾಗಿ ಪ್ರೇಕ್ಷಕರ ಅಭಿಪ್ರಾಯಗಳಿಂದಲೇ ತಿಳಿದುಕೊಳ್ಳಬಹುದಾಗಿದೆ.

Comments are closed.