ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತೊಂದು ಸೋಲಿನ ಬಳಿಕ ಆರ್ಸಿಬಿ ಕ್ಯಾಪ್ಟನ್ ಡುಪ್ಲೆಸಿಸ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಮೊದ-ಮೊದಲಿಗೆ ಐಪಿಎಲ್ ಪ್ರಾರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ಪಂದ್ಯಗಳನ್ನು ಗೆದ್ದುಕೊಂಡು ಬಂದಿತ್ತು. ಇದನ್ನು ನೋಡಿದಂತಹ ಕ್ರಿಕೆಟ್ ಅಭಿಮಾನಿಗಳು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಈ ಬಾರಿಯ ಕಪ್ ಗೆಲ್ಲೋದು ನಾವೆ ಎಂಬುದಾಗಿ ಅಭಿಮಾನ ಗರ್ವದಿಂದ ಬೀಗಿದ್ದರು. ಆದರೆ ಈಗ ತಂಡ ಸತತವಾಗಿ ಮೂರು ಸೋಲುಗಳನ್ನು ಹೊಂದಿದ್ದು ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅಂತಹ ಪರಿಸ್ಥಿತಿಯಲ್ಲಿ ಸಿಲುಕಿದೆ. ಡುಪ್ಲೆಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಪಕ್ಷ ಈ ಬಾರಿಯಾದರೂ ಗಮನಾರ್ಹ ಪ್ರದರ್ಶನ ನೀಡಬಹುದು ಎಂದು ಅಂದಾಜಿಸಲಾಗಿತ್ತು.

ಆದರೆ ನಿನ್ನೆ ಗುಜರಾತ್ ಐಟಂಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ 3 ಬಾಲ್ ಗಳು ಇರುವಂತೆ ಗುಜರಾತ್ ತಂಡದ ಎದುರು ಸೋತು ಶರಣಾಯಿತು. ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋತ ನಂತರ ಮತ್ತೊಮ್ಮೆ ಮೂರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿರುವುದು ನಿಜಕ್ಕೂ ಕೂಡ ಟೀ ಮ್ಯಾನೇಜ್ಮೆಂಟ್ ಹಾಗೂ ತಂಡದ ಅಭಿಮಾನಿಗಳಿಗೆ ಅಸಮಧಾನವನ್ನು ಉಂಟುಮಾಡಿಸಿದೆ ಎಂದರೆ ತಪ್ಪಾಗಲಾರದು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಪಾಟಿದಾರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಕೂಡ ಅರ್ಧಶತಕದ ಸುರಿಮಳೆಯನ್ನೇ ಸುರಿಸಿದರು. ಡುಪ್ಲೆಸಿಸ್ ರವರ ವೈಫಲ್ಯ ಕೂಡ ಮುಂದುವರಿಯಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ್ದ 171 ರನ್ನುಗಳ ಗುರಿಯನ್ನು ಗುಜರಾತ್ ಟೈಟನ್ಸ್ 3 ಎಸೆತಗಳು ಉಳಿದಿರುವಂತೆಯೇ ಗೆದ್ದು ಬೀಗಿತು. ಈ ಮೂಲಕ ಆಡಿರುವ 9 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆದ್ದು ಟೇಬಲ್ ಟಾಪರ್ ಆಗಿ ಮಿಂಚುತ್ತಿದೆ.

gujarat titans vs rcb 1 | ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತೊಂದು ಸೋಲಿನ ಬಳಿಕ ಆರ್ಸಿಬಿ ಕ್ಯಾಪ್ಟನ್ ಡುಪ್ಲೆಸಿಸ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??
ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತೊಂದು ಸೋಲಿನ ಬಳಿಕ ಆರ್ಸಿಬಿ ಕ್ಯಾಪ್ಟನ್ ಡುಪ್ಲೆಸಿಸ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?? 2

ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಡುಪ್ಲೆಸಿಸ್ ರವರು ನಿಜವಾಗಿ ಹೇಳಬೇಕೆಂದರೆ ನಾವು ಐದರಿಂದ ಹತ್ತು ರನ್ನುಗಳನ್ನು ಕಡಿಮೆಯಾಗಿ ಹೊಡೆದಿದ್ದೇವೆ ಎನ್ನುವಂತೆ ಭಾಸವಾಗುತ್ತಿದೆ. ನಮ್ಮ ಪ್ರಕಾರ 175 ರಿಂದ 180 ರನ್ನುಗಳ ಟಾರ್ಗೆಟ್ ಅನ್ನು ನೀಡಬೇಕಾಗಿತ್ತು. ಆರಂಭಿಕ ಆಟದ ನಾಗಿದ್ದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಗುಜರಾತ್ ತಂಡದ ಬೌಲರ್ಗಳು ನಮ್ಮ ಆಟಗಾರರನ್ನು ನಿಯಂತ್ರಿಸಲು ಯಶಸ್ವಿಯಾದರು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಬಿಲ್ಡಿಂಗ್ ನಲ್ಲಿ ಕೂಡ ಕೆಲವೊಂದು ಬೌಂಡರಿಗಳನ್ನು ಸೇವೆ ಮಾಡಬಹುದಾಗಿತ್ತು ಆದರೆ ನಾವು ಬಿಟ್ಟುಕೊಟ್ಟೆವು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಸರಿಯಾದ ಸಮಯದಲ್ಲಿ ಕಂಬ್ಯಾಕ್ ಮಾಡಿದ್ದಾರೆ ಮುಂದಿನ ಪಂದ್ಯಗಳಲ್ಲಿ ಕೂಡ ಅವರಿಂದ ಇದೇ ಮಟ್ಟದ ಪ್ರದರ್ಶನವನ್ನು ನಿರೀಕ್ಷೆ ಮಾಡಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ.

Comments are closed.