ಓದಿದ್ದು ಇಂಜಿನಿಯರಿಂಗ್, ಮಾಡೋ ಕೆಲಸ ಆಕ್ಟಿಂಗ್; ನಿಜ ಜೀವನದಲ್ಲಿ ಇಂಜಿನಿಯರ್ ಆಗಿರುವ ಕನ್ನಡದ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟಿಸುತ್ತಿರುವ ಹಲವು ನಟಿಯರು ಕೇವಲ ಕಲಾವಿದರು ಮಾತ್ರವಲ್ಲ ಇಂಜನೀಯರ್ಸ್ ಕೂಡ ಹೌದು. ಸ್ನೇಹಿತರೆ ಬಹಳಷ್ಟು ಕಿರುತೆರೆ ನಟಿಯರು ತಾವು ನಟನೆಗೆ ಬರುವುದಕ್ಕಿಂತ ಮೊದಲು ಬೇರೆ ಬೇರೆ ಪದವಿ ಪಡೆದುಕೊಂಡಿರುವವರೆ. ನಟನೆಯನ್ನು ಮಾಡುತ್ತ ಜೊತೆಜೊತೆಯಲ್ಲಿಯೇ ಪದವಿ ಅಭ್ಯಾಸವನ್ನೂ ಕೂಡ ಮಾಡುತ್ತಿದ್ದಾರೆ. ಅಂತಹ ಕೆಲವು ನಟಿಯರ ಬಗ್ಗೆ ಇಲ್ಲಿದೆ ಮಾಹಿತಿ.

ಸ್ನೇಹಿತರೆ, ನಟಿ ನಭಾ ನಟೇಶ್ ಅವರ ನಟನೆಯನ್ನು ನೋಡಿರಬಹುದು. ವಜ್ರಕಾಯ ಚಿತ್ರದ ಮೂಲಕ ಕನ್ನಡ ನಟನೆಗೆ ಪಾದಾರ್ಪಣೆ ಮಾಡಿದರು. ಇವರು ತೆಲಗು ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ನಭಾ ನಟೇಶ್ ಅವರು ಉಡುಪಿಯಲ್ಲಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಲ್ಲಿ ಇನ್ಫಾರ್ಮೆಷನ್ ಸೈನ್ಸ್ & ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಹಾಗೆಯೇ ನಟಿ ಕಾವ್ಯಾ ಶೆಟ್ಟಿ ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಪದವಿಯನ್ನು ಮಾಡಿದ್ದಾರೆ ಇವರು ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹಾಗೆಯೇ ಕಿರುತೆರೆಯಲ್ಲಿ ಫೇಮಸ್ ಆಗಿರುವ ಶ್ವೇತಾ ಆರ್ ಪ್ರಸಾದ್ ಅವರು ಬೆಂಗಳೂರಿನ ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಆರ್ಕಿಟೆಕ್ಟ್ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ. ಕಿನ್ನರಿ ಧಾರಾವಾಹಿಯಲ್ಲಿ ಮಣಿ ಪಾತ್ರವನ್ನು ನಿಭಾಯಿಸಿದ್ದ ಹಾಗೂ ಬಿಗ್ ಬಾಸ್ ಖ್ಯಾತಿಯ ಭೂಮಿಕಾ ಶೆಟ್ಟಿ ಅವರು ಬೆಂಗಳೂರಿನಲ್ಲಿರುವ ಎ.ಎಂ.ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಪದವಿ ಪಡೆದಿದ್ದಾರೆ. ಹಾಗೆಯೇ ನಿಮ್ಮೆಲ್ಲರ ಮೆಚ್ಚಿನ ಮೈತಿಲಿ ಪಾತ್ರಧಾರಿ ಸುಪ್ರಿತಾ ಸತ್ಯನಾರಾಯಣ್ ಅವರು ಕೂಡ ಪದವಿಯನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ. ಇವರು ಮೈಸೂರು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು.

ಗಟ್ಟಿಮೇಳ, ಜೀ ಕನ್ನಡದಲ್ಲಿ ತುಂಬಾನೇ ಫೇಮಸ್ ಆಗಿರುವ ಧಾರಾವಾಹಿ. ಈ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ನಿಭಾಯಿಸುತ್ತಿರುವ ಶರಣ್ಯ ಶೆಟ್ಟಿ ಈಗ ಎಂಜಿನಿಯರಿಂಗ್ ಪದವಿಯನ್ನು ಓದುತ್ತಿದ್ದಾರೆ. ಇನ್ನು ಉದಯ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಮನಸಾರೆ. ಇದರಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚಿಂಚೋಳಿ ಅವರು ಎಂ.ಟೆಕ್ ಅಧ್ಯಯನ ಮಾಡಿದ್ದಾರೆ.

Comments are closed.