ಎಲ್ಲಾ ದಾಖಲೆಗಳನ್ನು ಚಿಂದಿ ಮಾಡುತ್ತದೆ ಎಂದುಕೊಂಡಿದ್ದ ಗಂಧದ ಗುಡಿ ಮೊದಲ ದಿನದ ಕಲೆಕ್ಷನ್ ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಗೊತ್ತೇ??

ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ನೆನ್ನೆ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ ಗಂಧದಗುಡಿ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಪರದೆಯ ಮೇಲೆ ತೋರಿಸುವಲ್ಲಿ ಯಶಸ್ವಿಯಾಗಿದೆ. ಪುನೀತ್ ಅವರ ಕನಸಿನ ಕೂಸಾದ ಈ ಚಿತ್ರ ಕರ್ನಾಟಕದ ಪ್ರಾಕೃತಿಕ ವೈಭವವನ್ನು ಸೆರೆ ಹಿಡಿಯುವಲ್ಲಿ ಗೆದ್ದಿದೆ ಎಂದು ಹೇಳಬಹುದು. ಚಿತ್ರ ನೋಡಿದ ಪ್ರತಿ ಪ್ರೇಕ್ಷಕನು ಈ ಚಿತ್ರದ ಶ್ರೀಮಂತಿಕೆಗೆ ಮಾರುಹೋಗಿದ್ದಾನೆ. ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಅಭಿಮಾನಿಗಳೆಲ್ಲರೂ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದು ಒಂದು ಬಗೆಯ ಡಾಕ್ಯುಮೆಂಟರಿ ಚಿತ್ರವಾಗಿದ್ದು ಪುನೀತ್ ಅವರು ಕರ್ನಾಟಕದ ವಿವಿಧ ಕಾಡು, ಬೆಟ್ಟ, ತೊರೆ ಜಲಪಾತ, ಕಾಡು ಹೀಗೆ ಸಾಕಷ್ಟು ಸ್ಥಳಗಳನ್ನು ಸುತ್ತಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. Gandhada Gudi: Punith rajkumar

ಸ್ವತ ಅಪ್ಪು ಅಪ್ಪು ವಾಗಿ ಕಾಣಿಸಿಕೊಂಡಿರುವ ಚಿತ್ರವಿದು. ಇದು ಕೇವಲ ಚಿತ್ರವಲ್ಲ ಬದಲಾಗಿ ನೋಡುವ ಪ್ರತಿ ಅಭಿಮಾನಿಗಳಿಗೂ ಇದೊಂದು ಅನುಭವ. ಅಪ್ಪು ಅವರು ತಮ್ಮ ಕಣ್ಣಿನ ಮೂಲಕ ಕರ್ನಾಟಕದ ಪ್ರಕೃತಿಯ ಸೊಬಗನ್ನು ಪ್ರತಿ ಪ್ರೇಕ್ಷಕನ ಮುಂದೆ ಅದ್ದೂರಿಯಾಗಿ ತೋರಿಸಿದ್ದಾರೆ. ಈ ಚಿತ್ರದ ಮೂಲಕ ಪುನೀತ್ ಸದಾ ನಮ್ಮೊಂದಿಗೆ ಉಳಿದು ಹೋಗುವಂತಹ ಅನುಭವವನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಬಹುದು. ಅಮೋಘವರ್ಷ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಪುನೀತ್ ಅವರು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕರ್ನಾಟಕದ ವಿವಿಧ ಪ್ರಾಕೃತಿಕ ಸ್ಥಳಗಳಲ್ಲಿ ಸುತ್ತಾಡಿ ಅಲ್ಲಿನ ಜನರೊಂದಿಗೆ ಬೆರೆತು, ತಮ್ಮ ಜೀವನದ ಅದೆಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ಅವರ ವಿಚಾರಗಳು, ಅವರ ಯೋಚನೆಗಳು ಈ ಚಿತ್ರದಲ್ಲಿ ಕಾಣ ಸಿಗುತ್ತದೆ. ಪುನೀತ್ ಎಂತಹ ಶ್ರೇಷ್ಠ ವ್ಯಕ್ತಿ ಎನ್ನುವುದು ಈ ಚಿತ್ರದ ಮೂಲಕ ನಮಗೆ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ.

gandhadagudi col | ಎಲ್ಲಾ ದಾಖಲೆಗಳನ್ನು ಚಿಂದಿ ಮಾಡುತ್ತದೆ ಎಂದುಕೊಂಡಿದ್ದ ಗಂಧದ ಗುಡಿ ಮೊದಲ ದಿನದ ಕಲೆಕ್ಷನ್ ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಗೊತ್ತೇ??
ಎಲ್ಲಾ ದಾಖಲೆಗಳನ್ನು ಚಿಂದಿ ಮಾಡುತ್ತದೆ ಎಂದುಕೊಂಡಿದ್ದ ಗಂಧದ ಗುಡಿ ಮೊದಲ ದಿನದ ಕಲೆಕ್ಷನ್ ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಗೊತ್ತೇ?? 2

ನೆನ್ನೆ ತೆರೆಕಂಡಿರುವ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ನೋಡಿದ ಪ್ರತಿ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡು ಭಾವುಕರಾಗುತ್ತಿದ್ದಾರೆ. ಅಪ್ಪು ವ್ಯಕ್ತಿತ್ವವನ್ನು ಹಾಡಿ ಹೊಗಳುತ್ತಿದ್ದಾರೆ. ಚಿತ್ರ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ದೊಡ್ಡ ದೊಡ್ಡ ಸ್ಟಾರ್ ನಟರು, ಪುನೀತ್ ಅಭಿಮಾನಿಗಳು, ಕರುನಾಡ ಪ್ರೇಕ್ಷಕ ವರ್ಗ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದೆ. ನೆನ್ನೆ ತೆರೆಕಂಡಿರುವ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ವಿಷಯ ಕುತೂಹಲ ಮೂಡಿಸುತ್ತಿದೆ. ಹೌದು ಅದ್ದೂರಿಯಾಗಿ ಮೊದಲ ದಿನವೇ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದೆ. ಕೇವಲ ಒಂದೇ ದಿನದಲ್ಲಿ ಚಿತ್ರವು 17 ಕೋಟಿ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಮಾಹಿತಿಯ ಪ್ರಕಾರ ಈ ಚಿತ್ರ ಈಗಾಗಲೇ 17 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದುಬಂದಿದೆ.

Comments are closed.