ಎರಡು ಪಂದ್ಯಗಳು ಗೆದ್ದರೂ ಇನ್ನು ಸಿಕ್ಕಿಲ್ಲ ಸಮಾಧಾನ, ಅಕಾಡಲ್ಲಿ ದ್ರಾವಿಡ್ ಎಂಟ್ರಿ. ತಂಡದಲ್ಲಿ ಮಾಡಬಹುದಾದ ಬದಲಾವಣೆಗಳು ಏನು ಗೊತ್ತೇ??

ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ತಂಡವು ಈಗಾಗಲೇ ತನ್ನ ಮೊದಲ ಪಂದ್ಯವನ್ನು ತನ್ನ ಆತಿಥೇಯ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಿ ಭರ್ಜರಿ ಗೆಲುವು ದಾಖಲಿಸಿದೆ. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಗೆಲುವಿನ ನಾಗಾಲೋಟವನ್ನು ಆರಂಭಿಸಿದೆ. ನೆನ್ನೆ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. 56 ರನ್ ರೋಚಕ ವಿಜಯ ಸಾಧಿಸುವ ಮೂಲಕ ಭಾರತ ತಂಡವು ಪಾಯಿಂಟ್ ಟೇಬಲ್ ನಲ್ಲೂ ಕೂಡ ಅಗ್ರಸ್ಥಾನಕ್ಕೆ ಏರಿದೆ. ಭಾರತ ತಂಡವು ಪ್ರತಿ ಪಂದ್ಯದಲ್ಲೂ ಗೆಲುವನ್ನು ದಾಖಲಿಸುತ್ತಿದ್ದರು, ಕೆಲವು ಆಟಗಾರರು ಕಳಪೆ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದೀಗ ಕೆ ಎಲ್ ರಾಹುಲ್ ರವರ ಕಳಪೆ ಪ್ರದರ್ಶನದಿಂದಾಗಿ ಅವರು ತಂಡದಿಂದ ಹೊರ ಹೋಗಬಹುದಾದ ಸಾಧ್ಯತೆ ಹೆಚ್ಚಾಗಿದೆ.

ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಕೆ ಎಲ್ ರಾಹುಲ್ ರವರು ಕಳೆಪೆ ಪ್ರದರ್ಶನ ತೋರಿದರು. ಅಲ್ಲದೆ ನೆದರ್ಲ್ಯಾನ್ಡ್ ವಿರುದ್ಧ ನೆನ್ನೆ ನಡೆದ ಪಂದ್ಯದಲ್ಲಿ ಅವರದ್ದು ಹೇಳಿಕೊಳ್ಳುವಂತಹ ಆಟವೇನು ಆಗಿರಲಿಲ್ಲ. ಹೀಗಾಗಿ ಕೆ ಎಲ್ ರಾಹುಲ್ ರವರು ಫಾರ್ಮ್ ಕಳೆದುಕೊಂಡಿದ್ದಾರೆ. ಎರಡನೇ ಪಂದ್ಯದಲ್ಲಿಯೂ ವಿಫಲರಾಗಿರುವ ಕೆ ಎಲ್ ರಾಹುಲ್ ಜಾಗಕ್ಕೆ ಮತ್ತೊಬ್ಬ ಆಟಗಾರರನ್ನು ತಂಡವು ತಂದು ಕೂರಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೆ ಎಲ್ ರಾಹುಲ್ ತಂಡದಿಂದ ಹೊರ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕೆ ಎಲ್ ರಾಹುಲ್ ಜಾಗದಲ್ಲಿ ಆಯ್ಕೆಯಾಗುವ ಆಟಗಾರರ ಪೈಕಿ ಇಬ್ಬರು ಆಟಗಾರರ ನಡುವೆ ತೀವ್ರ ಪೈಪೋಟಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಹೌದು ದೀಪಕ್ ಹೂಡ ಅಥವಾ ರಿಷಬ್ ಪಂತ್ ಅವರನ್ನು ರಾಹುಲ್ ಜಾಗಕ್ಕೆ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

dravid rohit rahul | ಎರಡು ಪಂದ್ಯಗಳು ಗೆದ್ದರೂ ಇನ್ನು ಸಿಕ್ಕಿಲ್ಲ ಸಮಾಧಾನ, ಅಕಾಡಲ್ಲಿ ದ್ರಾವಿಡ್ ಎಂಟ್ರಿ. ತಂಡದಲ್ಲಿ ಮಾಡಬಹುದಾದ ಬದಲಾವಣೆಗಳು ಏನು ಗೊತ್ತೇ??
ಎರಡು ಪಂದ್ಯಗಳು ಗೆದ್ದರೂ ಇನ್ನು ಸಿಕ್ಕಿಲ್ಲ ಸಮಾಧಾನ, ಅಕಾಡಲ್ಲಿ ದ್ರಾವಿಡ್ ಎಂಟ್ರಿ. ತಂಡದಲ್ಲಿ ಮಾಡಬಹುದಾದ ಬದಲಾವಣೆಗಳು ಏನು ಗೊತ್ತೇ?? 2

ಅದರಲ್ಲೂ ದೀಪಕ್ ಹೂಡ ಅವರಿಗಿಂತ ಶೇಕಡ 90ರಷ್ಟು ರಿಷಬ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿಯೇ ಇದೆ. ರಿಷಬ್ ಪಂತ್ ಅವರು ಎಡಗೈ ಬ್ಯಾಟ್ಸ್ಮನ್ ಆಗಿರುವುದರಿಂದ ಪವರ್ ಪ್ಲೇನಲ್ಲಿ ಒಳ್ಳೆಯ ರನ್ಗಳನ್ನು ಕಲೆ ಹಾಕಲು ಅನುಕೂಲವಾಗಲಿದೆ. ಹೀಗಾಗಿ ರಿಷಭ್ ಗೆ ಎಡಗೈ ಬ್ಯಾಟ್ಸ್ಮನ್ ಎನ್ನುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಇದರ ನಡುವೆ ಅಶ್ವಿನ್ ರವರ ಬದಲಿಗೆ ಚಹಲ್ ರವರಿಗೆ ಸ್ಥಾನ ನೀಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಮೊದಲ ಪಂದ್ಯದಲ್ಲಿ ವಿಫಲವಾಗಿ ಎರಡನೇ ಪಂದ್ಯದಲ್ಲೂ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ತೋರದ ಕೆ ಎಲ್ ರಾಹುಲ್ ರವರು ತಂಡದಿಂದ ಹೊರ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು ಅವರ ಜಾಗಕ್ಕೆ ಯಾವ ಆಟಗಾರ ಅಂತಿಮಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Comments are closed.