ಬಾರಿ ವಿವಾದ ಸೃಷ್ಟಿ ಮಾಡಿರುವ ಹೆಡ್ ಬುಷ್ ಚಿತ್ರದ ಬಗ್ಗೆ ರಿಷಬ್ ಯಾಕೆ ಮಾತನಾಡುತ್ತಿಲ್ಲ?? ಶೆಟ್ರೇ ಭಯಾನ?? ರಿಷಬ್ ಗೆ ತರಾಟೆ

ಒಂದು ಕಡೆ ಕಾಂತಾರ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದೆಡೆ ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ ಹೆಡ್ ಬುಷ್ ಚಿತ್ರ ವಿವಾದ ಒಂದಕ್ಕೆ ಕಾರಣವಾಗಿದೆ. ಹೌದು ಇತ್ತೀಚಿಗಷ್ಟೇ ಬಿಡುಗಡೆಗೊಂಡ ಹೆಡ್ ಬುಷ್ ಚಿತ್ರವು ವಿವಾದ ಒಂದನ್ನು ಮೈಮೇಲೆ ಎಳಿದುಕೊಂಡಿದೆ. ಚಿತ್ರದಲ್ಲಿ ಕೆಲವು ಆಚರಣೆಗಳಿಗೆ ಅಪಮಾನವಾಗುವಂತೆ ದೃಶ್ಯಗಳನ್ನ ತೋರಿಸಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ. ವೀರಗಾಸೆ ಮತ್ತು ಕರಗಾದಂತಹ ನೃತ್ಯಗಳಿಗೆ ನಮ್ಮ ಸಂಸ್ಕೃತಿಗೆ ಅಪಮಾನ ಮಾಡುವಂತಹ ದೃಶ್ಯಗಳು ಚಿತ್ರದಲ್ಲಿ ಇವೆ ಎಂದು ಹೇಳಲಾಗುತ್ತಿದೆ. ವೀರಗಾಸೆ ಕಲಾವಿದರ ಮೇಲೆ ಚಪ್ಪಲಿ ಕಾಲಿನಿಂದ ಒದೆಯುತ್ತಿರುವಂತಹ ದೃಶ್ಯವನ್ನು ಎಣಿಯಲಾಗಿದೆ. ಈ ಮೂಲಕ ವೀರಗಾಸೆಯಂತಹ ಆಚರಣೆಗಳಿಗೆ ಅಪಮಾನ ಮಾಡಲಾಗಿದೆ ಎಂದು ವಿವಾದ ಎದ್ದಿದೆ. ಅಲ್ಲದೆ ಕರಗ ನೃತ್ಯಕ್ಕೆ ಅಪಮಾನ ಮಾಡಲಾಗಿದ್ದು ಆ ಭಾಷೆ, ಪದಗಳ ಬಳಕೆಯಿಂದಾಗಿ ನಮ್ಮ ನಂಬಿಕೆಗೆ ಹಾಗೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವು ಜನರು ಆರೋಪ ಹೊರಿಸಿದ್ದಾರೆ.

ಇದೆಲ್ಲದರ ನಡುವೆ ಧನಂಜಯವರ ಪರವಾಗಿ ಸಾಕಷ್ಟು ಜನರು ನಿಂತಿದ್ದಾರೆ. ಹೌದು ಹೆಡ್‌ಬುಷ್ ಚಿತ್ರವು ಬಿಡುಗಡೆಯಾಗುವ ಮೊದಲೇ ಚಿತ್ರದ ಪ್ರೀ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾಲಿ ಧನಂಜಯ ಅವರು ಬಡವರ ಮಕ್ಕಳು ಬೆಳಿಬೇಕು ಕಂಡ್ರಯ್ಯ ಎಂಬ ಮಾತನ್ನು ಹೇಳಿದ್ದರು. ಇದೀಗ ಡಾಲಿ ಧನಂಜಯ್ ಅವರ ಸಿನಿಮಾಗೆ ಎದುರಾಗಿರುವ ಸಂಕಷ್ಟಕ್ಕೆ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಅವರ ಪರವಾಗಿ ಬೆಂಬಲಕ್ಕೆ ನಿಂತಿರುವುದಲ್ಲದೆ, ಧನಂಜಯ್ ಅವರ ಪರವಾಗಿ ಬಡವರ ಮಕ್ಕಳು ಬೆಳಿಬೇಕು ಕಂಡ್ರಯ್ಯ ಎಂಬ ಮಾತನ್ನು ಬಳಸಿಕೊಂಡು ಡಾಲಿ ಧನಂಜಯ್ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ. ಅಂದ ಹಾಗೆ ಹೆಡ್‌ಬುಷ್ ಭೂಗತ ಲೋಕದ ಡಾನ್ ಜಯರಾಜ್ ಕುರಿತಾದ ಜೀವನ ಕಥೆಯಾಗಿದ್ದು, ಇತ್ತೀಚಿಗಷ್ಟೇ ಚಿತ್ರ ರಿಲೀಸ್ ಆಗಿದ್ದು ಬಿಡುಗಡೆಗೊಂಡ ಕೆಲವೇ ಹೊತ್ತಿನಲ್ಲಿ ದೊಡ್ಡಮಟ್ಟದ ವಿವಾದಕ್ಕೆ ಎಡೆ ಮಾಡಿಕೊಂಡಿದೆ. ಈ ವಿವಾದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ನಟ ನಟಿಯರು ಕಲಾವಿದರು ಧನಂಜಯ್ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ನಡುವೆ ದೊಡ್ಡ ಮಟ್ಟದ ಯಶಸ್ಸು ಗಳಿಸಿರುವ ನಟ ನಿರ್ದೇಶಕ ರಿಶಬ್ ಶೆಟ್ಟಿಯವರು ಯಾಕೆ ಧನಂಜಯ್ ಪರ ಒಂದು ಮಾತು ಆಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

rishab head bush | ಬಾರಿ ವಿವಾದ ಸೃಷ್ಟಿ ಮಾಡಿರುವ ಹೆಡ್ ಬುಷ್ ಚಿತ್ರದ ಬಗ್ಗೆ ರಿಷಬ್ ಯಾಕೆ ಮಾತನಾಡುತ್ತಿಲ್ಲ?? ಶೆಟ್ರೇ ಭಯಾನ?? ರಿಷಬ್ ಗೆ ತರಾಟೆ
ಬಾರಿ ವಿವಾದ ಸೃಷ್ಟಿ ಮಾಡಿರುವ ಹೆಡ್ ಬುಷ್ ಚಿತ್ರದ ಬಗ್ಗೆ ರಿಷಬ್ ಯಾಕೆ ಮಾತನಾಡುತ್ತಿಲ್ಲ?? ಶೆಟ್ರೇ ಭಯಾನ?? ರಿಷಬ್ ಗೆ ತರಾಟೆ 2

ಡಾಲಿ ಧನಂಜಯ್ ಅವರು ತಮ್ಮ ಚಿತ್ರದ ಬಿಡುಗಡೆಯ ಒತ್ತಡದ ನಡುವೆಯೂ ಕೂಡ ಕಾಂತಾರ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಈ ಚಿತ್ರದಿಂದ ನಾನು ನಿಮ್ಮ ಅಭಿಮಾನಿ ಆದೇ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಈ ಸಮಯದಲ್ಲಿ ಧನಂಜಯ ಅವರು ಸಂಕಷ್ಟದಲ್ಲಿದ್ದಾಗ ರಿಷಬ್ ಅವರು ಮಾತನಾಡಬೇಕಿತ್ತು ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಕೇಳಿ ಬರುತ್ತಿವೆ. ಈ ವಿವಾದ ಕುರಿತು ನೀವು ಯಾಕೆ ಮಾತನಾಡುತ್ತಿಲ್ಲ, ರಿಷಭ್ ಅವರಿಗೆ ಬಹುಶ ಭಯವಿರಬಹುದು. ಕಡೆ ಪಕ್ಷ ಸಾಮಾಜಿಕ ಜಾಲತಾಣದಲ್ಲಾದರೂ ಅವರ ಪರವಾಗಿ ಪೋಸ್ಟ್ ಹಾಕಬಾರದೇ ಎಂದು ಅಭಿಮಾನಿಗಳು, ನೆಟ್ಟಿಗರು ಕೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂತಾರ ಚಿತ್ರದ ಲೀಲಾ ನಟಿ ಸಪ್ತಮಿ ಗೌಡ ಅವರು ಧನಂಜಯ ಅವರೇ ನಿಮ್ಮ ಪರವಾಗಿ ನಾವಿದ್ದೇವೆ ಎಂದು ಧನಂಜಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಆದರೆ ಇದುವರೆಗೂ ರಿಷಬ್ ಶೆಟ್ಟಿ ಅವರು ಹೆಡ್ ಬುಷ್ ಚಿತ್ರದ ವಿವಾದದ ಕುರಿತು ತುಟಿ ಬಿಚ್ಚಿಲ್ಲ. ಯಾವ ಹೇಳಿಕೆಯನ್ನು ನೀಡಿಲ್ಲ. ಮುಂದೆಯಾದರೂ ಧನಂಜಯ್ ಪರವಾಗಿ ರಿಷಬ್ ಮಾತನಾಡುತ್ತಾರ ಕಾದು ನೋಡಬೇಕಿದೆ.

Comments are closed.