ವೇದಿಕೆ ಮೇಲೆ ಅಪ್ಪು ಹಾಡು ಬರುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್ ! ಅಪ್ಪು ಕಾರ್ಯಕ್ರಮಕ್ಕೆ ಬರಲಿಲ್ಲ ಯಾಕೆ ಗೊತ್ತಾ??

ಕೆಲವು ದಿನಗಳ ಹಿಂದೆ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಎಂದೇ ಹೇಳಲಾಗುತ್ತಿರುವ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಭವೋಪೇತವಾಗಿ ಜರುಗಿತು. ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಯ ಸಿನಿ ಜಗತ್ತಿನ ತಾರೆಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದೊಡ್ಮನೆಯ ಇಡೀ ಕುಟುಂಬ, ಸ್ಟಾರ್ ಸೆಲೆಬ್ರಿಟಿಗಳು, ನಟರು, ಕಲಾವಿದರು, ರಾಜಕಾರಣಿಗಳು, ನಿರ್ದೇಶಕರು ಹೀಗೆ ದೊಡ್ಡ ತಾರಾ ಬಳಗವೇ ಈ ಕಾರ್ಯಕ್ರಮಕ್ಕೆ ಜಮಾಯಿಸಿತ್ತು. ಪುನೀತ್ ಅವರ ಕನಸಿನ ಕೊನೆಯ ಸಿನಿಮಾವನ್ನು ಸಂಭ್ರಮಿಸುವ ಹಾಗೂ ಪುನೀತ್ ಅವರಿಗೆ ಗೌರವಿಸುವ ಒಂದು ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಆತ್ಮೀಯ ಸ್ನೇಹಿತರಾದ ದರ್ಶನ್ ಬಂದಿರಲಿಲ್ಲ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾರದೇ ಇದ್ದಿದ್ದು ನೆಟ್ಟಿಗರ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕಾರ್ಯಕ್ರಮ ನಡೆದು ಕೆಲವು ದಿನಗಳೆ ಕಳೆದರೂ ಇಂದಿಗೂ ಕೂಡ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಅವರು ಕಾರ್ಯಕ್ರಮಕ್ಕೆ ಬರದೇ ಇದ್ದುದರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ, ವಾದ ನಡೆಯುತ್ತಿದೆ. ಪುನೀತ್ ಅವರ ಮೇಲೆ ನಟ ದರ್ಶನ್ ಅವರಿಗೆ ಅಪಾರವಾದ ಪ್ರೀತಿ, ಗೌರವ ಇದೆ. ಪುನೀತವರು ನಮ್ಮನೆಲ್ಲ ಅಗಲಿದಾಗ ಸಾಕಷ್ಟು ನೊಂದುಕೊಂಡಿದ್ದರು. ಆತ್ಮೀಯ ಗೆಳೆಯನನ್ನು ಕಳೆದುಕೊಂಡು ದುಃಖಿಸಿದ್ದರು. ನಟ ದರ್ಶನ್ ಪುನೀತ್ ಅವರ ಜೊತೆಗೆ ಆತ್ಮೀಯವಾಗಿರುವ ಹಾಗೂ ಪುನೀತ್ ಅಪ್ಪಿಕೊಂಡಿರುವ ಅದೆಷ್ಟೋ ಫೋಟೋಗಳು ಇಂದಿಗೂ ಕೂಡ ಅಭಿಮಾನಿಗಳ ಮೆಚ್ಚುಗೆಗೆ ವ್ಯಕ್ತವಾಗುತ್ತದೆ. ಜೊತೆಗೆ ದೊಡ್ಡ ಮನೆಯ ಮೇಲೆ ದರ್ಶನ್ ಅವರಿಗೆ ಅಪಾರವಾದ ಗೌರವ ಅಭಿಮಾನವಿದೆ.

Appu darshan | ವೇದಿಕೆ ಮೇಲೆ ಅಪ್ಪು ಹಾಡು ಬರುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್ ! ಅಪ್ಪು ಕಾರ್ಯಕ್ರಮಕ್ಕೆ ಬರಲಿಲ್ಲ ಯಾಕೆ ಗೊತ್ತಾ??
ವೇದಿಕೆ ಮೇಲೆ ಅಪ್ಪು ಹಾಡು ಬರುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್ ! ಅಪ್ಪು ಕಾರ್ಯಕ್ರಮಕ್ಕೆ ಬರಲಿಲ್ಲ ಯಾಕೆ ಗೊತ್ತಾ?? 2

ಇತ್ತೀಚಿಗೆ ನಡೆದ ಬನಾರಸ್ ಚಿತ್ರದ ಪ್ರಮೋಷನ್ ನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದರು. ಅಲ್ಲಿ ಪುನೀತ್ ಅವರ ವಿಡಿಯೋ ಒಂದನ್ನು ಪ್ಲೇ ಮಾಡಲಾಯಿತು. ಆಗ ದರ್ಶನ್ ಅವರು ತಮಗೆ ಅರಿವಿಲ್ಲದಂತೆ ಅತ್ತರು. ಹೌದು ಬನಾರಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ದರ್ಶನ್ ರವರು ಪಾಲ್ಗೊಂಡಿದ್ದರು. ಆಗ ಕಾರ್ಯಕ್ರಮದ ನಡುವೆ ಬೊಂಬೆ ಹೇಳುತೈತೆ ಹಾಡನ್ನು ಪ್ಲೇ ಮಾಡಲಾಯಿತು. ಹಾಡು ಶುರುವಾದ ತಕ್ಷಣ ದರ್ಶನ್ ರವರು ಮೇಲೆ ಎದ್ದು ನಿಂತರು. ಅವರ ಜೊತೆಗೆ ವೇದಿಕೆ ಮುಂಭಾಗದಲ್ಲಿದ್ದ ಎಲ್ಲಾ ಅತಿಥಿಗಳು ಎದ್ದು ನಿಂತರು. ಹಾಡು ಪ್ಲೇ ಆಗುತ್ತಿದ್ದ ಹಾಗೆಯೇ ದರ್ಶನ್ ಅವರಿಗೆ ಅರಿವಿಲ್ಲದ ಹಾಗೆ ಅವರ ಕಣ್ಣಲ್ಲಿ ನೀರು ತುಂಬಿತ್ತು, ಅವರು ಕಣ್ಣೀರು ಹಾಕಿದರು. ಆಗ ಪಕ್ಕದಲ್ಲಿದ್ದು ಸ್ನೇಹಿತರು ಅವರಿಗೆ ಕರ್ಚಿಫ್ ನೀಡಿದರು. ಪುನೀತ್ ಅವರ ಮೇಲಿದ್ದ ಅಭಿಮಾನಕ್ಕೆ ಅವರಿಗೆ ಅರಿವೇ ಇಲ್ಲದ ಹಾಗೆ ಅವರು ಕಣ್ಣೀರು ಹಾಕಿದರು.

Comments are closed.