ರಚಿತಾ ರಾಮ್ ರವರು ನಟನೆ ಇಂದಲ್ಲ, ಅದೊಂದೇ ಕಾರಣಕ್ಕೆ ಇನ್ನು ಚಿತ್ರರಂಗದಲ್ಲಿ ಇದ್ದಾರೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ದುನಿಯಾ ವಿಜಯ್. ಕಾರಣ ಏನಂತೆ ಗೊತ್ತೇ??
ನಟಿ ರಚಿತರಾಮ್ ಅವರು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕಿರುತೆರೆ ಲೋಕದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಇದುವರೆಗೆ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ರಚಿತಾರಾಮ್ ಅವರು ಅಭಿನಯಿಸಿದ್ದಾರೆ. ಇನ್ನು ಮುಂದೆಯೂ ಕೂಡ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ರಚಿತಾ ರಾಮ್ ಕೂಡ ಒಬ್ಬರು. ಅವರ ಇತ್ತೀಚಿನ ಚಿತ್ರವಾದ ಮಾನ್ಸೂನ್ ರಾಗ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡು ಒಳ್ಳೆಯ ಪ್ರದರ್ಶನ ಕಂಡಿದೆ. ಈ ಚಿತ್ರದ ಬಿಡುಗಡೆಗು ಮೊದಲು ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಇಡೀ ಚಿತ್ರತಂಡ ಭಾಗಿಯಾಗಿದ್ದಲ್ಲದೆ ಅತಿಥಿಯಾಗಿ ದುನಿಯಾ ವಿಜಯ್ ಅವರನ್ನು ಕರೆಸಲಾಗಿತ್ತು. ದುನಿಯಾ ವಿಜಯ್ ರಚಿತಾ ಕುರಿತಾಗಿ ಅಚ್ಚರಿಯಾಗುವಂತಹ ಮಾತುಗಳನ್ನಾಡಿದ್ದಾರೆ.
ಈ ಹಿಂದೆ ರಚಿತಾ ಮೊದಲು ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ರಚಿತಾ ರಾಮ್ ಅವರು ಬುಲ್ ಬುಲ್ ಚಿತ್ರದ ಅಡಿಶನ್ ನಲ್ಲಿ ಪಾಲ್ಗೊಂಡಿದ್ದರು. 200ಕ್ಕೂ ಹೆಚ್ಚು ಜನರ ನಡುವೆ ತಮ್ಮ ಕ್ಯೂಟ್ನೆಸ್, ಅದ್ಭುತ ಡೈಲಾಗ್ ಡೆಲಿವರಿ ಮೂಲಕ ರಚಿತಾ ರಾಮ್ ಚಿತ್ರಕ್ಕೆ ಆಯ್ಕೆಯಾಗಿದ್ದರು. ಬುಲ್ ಬುಲ್ ಚಿತ್ರದ ಯಶಸ್ಸಿನ ನಂತರ ಅವರು ಹಿಂದೆ ತಿರುಗಿ ನೋಡಿದ್ದೆ ಇಲ್ಲ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ನಟಿಸಿದಲ್ಲದೆ ಜನಪ್ರಿಯ ಚಿತ್ರಗಳನ್ನು ಕೊಟ್ಟಿದ್ದಾರೆ. ಇದೀಗ ಅವರ ಮಾನ್ಸೂನ್ ರಾಗ ಪ್ರೀ ರಿಲೀಸ್ ಈವೆಂಟ್ ಅಲ್ಲಿ ಅತಿಥಿಯಾಗಿ ದುನಿಯಾ ವಿಜಯ್ ಅವರು ಪಾಲ್ಗೊಂಡಿದ್ದರು. ಅವರು ರಚಿತಾ ರಾಮ್ ಅವರನ್ನು ಹಾಡಿ ಹೊಗಳಿದ್ದಾರೆ, ಇದಕ್ಕೂ ಮೊದಲು ನಟ ದನಂಜಯ ಅವರು ರಚಿತಾ ರಾಮ್ ಅವರೊಂದಿಗೆ ನಟಿಸುತ್ತಿರುವುದು ನನಗೆ ಅತ್ಯಂತ ಖುಷಿಯ ವಿಚಾರ. ಚಿತ್ರರಂಗಕ್ಕೂ ಬರುವ ಮೊದಲು ರಚಿತಾ ರಾಮ್ ಅವರನ್ನು ಕಾಣುವುದಕ್ಕಾಗಿ ಬೆಂಗಳೂರಿನ ಅವರ ಮನೆ ಮುಂದೆ ಸಾಕಷ್ಟು ಸಲ ಓಡಾಡಿದ್ದೇನೆ, ಅವರ ಡಿಂಪಲ್ ಕಾಣುತ್ತಾ ಎಂದು ಅವರ ಮನೆ ಮುಂದೆ ಅಡ್ಡಾಡಿದ್ದೇನೆ ಎಂದು ಹೇಳಿ ನಕ್ಕಿದ್ದಾರೆ.
ಜೊತೆಗೆ ದುನಿಯಾ ವಿಜಯ್ ಅವರು ಸುಹಾಸಿನಿ ಅವರ ಬಗ್ಗೆ ಮಾತನಾಡಿದ್ದಾರೆ. ನನಗೆ ಮುಂದೊಂದು ಜನ್ಮ ಅಂತ ಇದ್ದರೆ ನಾನು ಸುಹಾಸಿನಿ ಅವರ ಜೊತೆ ಮತ್ತೆ ಬಂದನ ಚಿತ್ರದಲ್ಲಿ ವಿಷ್ಣು ವರ್ಧನ್ ಅವರ ಪಾತ್ರ ಮಾಡಲು ಬಯಸುತ್ತೇನೆ. ಸುಹಾಸಿನಿ ಅವರೊಂದಿಗೆ ನಾನೊಂದು ಫೋಟೋ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದರ ಜೊತೆಗೆ ಅಚ್ಚರಿ ಎಂಬಂತೆ ದುನಿಯಾ ವಿಜಯ್ ಅವರು ರಚಿತಾ ರಾಮ್ ಕುರಿತು ಮಾತನಾಡಿದ್ದಾರೆ. ರಚಿತಾ ರಾಮ್ ಅವರ ಎದೆಯಲ್ಲಿ ಮೋಸ ಇಲ್ಲ, ಹಾಗಾಗಿಯೇ ಇಷ್ಟು ವರ್ಷಗಳಾದರೂ ಅವರು ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ರಚಿತಾರಾಮ್ ಅವರು ಎದ್ದು ನಿಂತು ದುನಿಯಾ ವಿಜಯ್ ಅವರಿಗೆ ನಮಸ್ಕರಿಸಿದ್ದಾರೆ.
Comments are closed.