ವಿಷ್ಣುವರ್ಧನ್ ರವರ ತೀರಿಕೊಂಡ ಅಸಲಿ ರಹಸ್ಯದ ಬಗ್ಗೆ ನಿಮಗೆ ತಿಳಿದಿದೆಯೇ? ನಿಜವಾಗಲೂ ಏನಾಗಿತ್ತು ಗೊತ್ತೇ??

ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಎಷ್ಟೇ ವರ್ಷಗಳು ಕಳೆದರೂ ಇಂದಿಗೂ ಎಲ್ಲರಿಗೂ ಅಪಾರವಾದ ಪ್ರೀತಿ ಗೌರವ. ಇಡೀ ಕುಟುಂಬವೇ ಅವರ ಚಿತ್ರಗಳನ್ನು ಒಟ್ಟಿಗೆ ಕುಳಿತು ಖುಷಿಯಿಂದ ನೋಡುತ್ತಾರೆ. ಅಂತಹ ಅದ್ಭುತ ಚಿತ್ರಗಳನ್ನು ಅವರು ನಮಗೆ ಕೊಟ್ಟು ಹೋಗಿದ್ದಾರೆ. ವಿಷ್ಣುವರ್ಧನ್ ಅವರು ನಮ್ಮನ್ನೆಲ್ಲ ಅಗಲಿದಾಗ ಅವರಿಗೆ ಕೇವಲ 59 ವರ್ಷ ವಯಸ್ಸಾಗಿತ್ತು ಅಷ್ಟೇ. ಆದರೆ ಅಷ್ಟು ಬೇಗ ಅವರು ಸಾವನ್ನಪ್ಪಲು ಬೇರೆ ಕಾರಣವಿತ್ತು, ಆ ಕಾರಣ ಏನು ಎನ್ನುವುದು ಇಲ್ಲಿದೆ ನೋಡಿ. ಡಾಕ್ಟರ್ ರಾಜಕುಮಾರ್ ಅವರು ತೀರಿಕೊಂಡ ನಂತರ ಅವರ ಸ್ಥಾನದಲ್ಲಿ ವಿಷ್ಣುವರ್ಧನ್ ಅವರನ್ನು ನೋಡಲಾಗುತ್ತಿತ್ತು. ಆದರೂ ಕೂಡ ಕೆಲವು ಜನರಿಗೆ ವಿಷ್ಣುವರ್ಧನ್ ರವರಿಗೆ ಸಿಗುತ್ತಿರುವ ಮರ್ಯಾದೆಯನ್ನು ಕಂಡು ಹೊಟ್ಟೆಕಿಚ್ಚಾಗುತ್ತಿತ್ತು. ಇದರ ಜೊತೆ ಜೊತೆಗೆ ವಿಷ್ಣುವರ್ಧನ್ ಅವರಿಗೆ ಒಳ್ಳೆಯ ಹೆಸರು, ಹಣ, ಕೀರ್ತಿ ಇದ್ದರೂ ನೆಮ್ಮದಿ ಎನ್ನುವುದು ಇರಲೇ ಇಲ್ಲ.

ಹೌದು ನಟ ವಿಷ್ಣುವರ್ಧನ್ ಅವರು ಆಪ್ತರಕ್ಷಕ ಮತ್ತು ಆ ಸಿನಿಮಾಗೂ ಮೊದಲು ನಟಿಸಿದ ಹಲವಾರು ಚಿತ್ರಗಳಲ್ಲಿ ದಪ್ಪವಾಗಿದ್ದರು. ಅವರ ದೇಹದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹಣೆ ಆಗಿ ನೋಡಲು ಆಕರ್ಷಕವಾಗಿ ಕಾಣುತ್ತಿರಲಿಲ್ಲ. ಇದನ್ನು ನೋಡಿದ್ದ ಸ್ನೇಹಿತರು ಅವರಿಗೆ ಒಂದು ಸಲಹೆ ನೀಡಿದ್ದರು. ಆ ಕಾಲದಲ್ಲಿ ವಿಷ್ಣುವರ್ಧನ್ ರವರಿಗೆ ಪೈಪೋಟಿ ನೀಡುವಂತೆ ಸಾಕಷ್ಟು ನಟರಿದ್ದರು. ಸಣ್ಣವಾಗಿ, ಆಕರ್ಷಿಕವಾಗಿ ಕಂಡರೆ ಮಾತ್ರ ನಟರಾಗಿ ಉಳಿದುಕೊಳ್ಳಲು ಸಾಧ್ಯ ಎನ್ನುವ ಮನಸ್ಥಿತಿ ಆಗಿನಿಂದಲೂ ಇತ್ತು. ಈ ಕಾರಣದಿಂದಾಗಿ ವಿಷ್ಣುವರ್ಧನ್ ಅವರು ತಮ್ಮ ಸ್ನೇಹಿತರ ಸಲಹೆಯಂತೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡರು. ಕೊಬ್ಬನ್ನು ಕರಗಿಸಿ ಆಕರ್ಷಿಕವಾಗಿ ಕಾಣುವ ಉದ್ದೇಶದಿಂದ ಅವರು ಬೇರೆ ಬೇರೆ ಚಿಕಿತ್ಸೆಗಳನ್ನು ಪಡೆದುಕೊಂಡು ಮತ್ತೆ ಮರಳಿದರು. ಅಲ್ಲಿಯವರೆಗೂ ಕೂಡ ವಿಷ್ಣುವರ್ಧನ್ ರವರು ಆರೋಗ್ಯವಾಗಿಯೇ ಇದ್ದರು. ಅವರಿಗೆ ಅದುವರೆಗೂ ಯಾವುದೇ ಅನಾರೋಗ್ಯ ಸಮಸ್ಯೆಯೂ ಕಾಡಿರಲಿಲ್ಲ. ಸಣ್ಣಗಾಗಲು ಪಡೆದುಕೊಂಡ ಚಿಕಿತ್ಸೆ ಅವರಿಗೆ ದೊಡ್ಡ ಮಟ್ಟದ ಪೆಟ್ಟು ನೀಡುತ್ತದೆ. ಹೌದು ಇಲ್ಲಿಯವರೆಗೂ ಆರೋಗ್ಯ ಸಮಸ್ಯೆಯನ್ನು ಎದುರಿಸದ ವಿಷ್ಣುವರ್ಧನ್ ರವರು ಚಿಕಿತ್ಸೆ ಪಡೆದ ನಂತರ ಸಾಕಷ್ಟು ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

vishnu daada death | ವಿಷ್ಣುವರ್ಧನ್ ರವರ ತೀರಿಕೊಂಡ ಅಸಲಿ ರಹಸ್ಯದ ಬಗ್ಗೆ ನಿಮಗೆ ತಿಳಿದಿದೆಯೇ? ನಿಜವಾಗಲೂ ಏನಾಗಿತ್ತು ಗೊತ್ತೇ??
ವಿಷ್ಣುವರ್ಧನ್ ರವರ ತೀರಿಕೊಂಡ ಅಸಲಿ ರಹಸ್ಯದ ಬಗ್ಗೆ ನಿಮಗೆ ತಿಳಿದಿದೆಯೇ? ನಿಜವಾಗಲೂ ಏನಾಗಿತ್ತು ಗೊತ್ತೇ?? 2

ಅವರಿಗೆ ಕ್ರಮೇಣವಾಗಿ ಶುಗರ್ ಕಾಯಿಲೆ ಶುರುವಾಗುತ್ತದೆ. ಪದೇಪದೇ ಬಿಪಿ ಏರುಪೇರು ಆಗ ತೊಡಗುತ್ತದೆ. ಕ್ರಮೇಣವಾಗಿ ಅವರಿಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಈ ವೇಳೆ ವಿಷ್ಣುವರ್ಧನ್ ರವರು ತಮ್ಮ ಪ್ರೀತಿಯ ಮೂವರು ತಂಗಿಯರನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದಲ್ಲದೆ ದೈಹಿಕವಾಗಿ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ವಿಷ್ಣುವರ್ಧನ್ ರವರು ವಿಧಿವಶರಾಗುವುದಕ್ಕೂ ಒಂದು ದಿನ ಮೊದಲು ಅವರು ಬಹಳ ಪ್ರೀತಿಸುವ ಇಷ್ಟಪಡುವ ಸಿ. ಅಶ್ವತ್ ರವರು ತೀರಿ ಹೋಗುತ್ತಾರೆ. ಈ ಸುದ್ದಿ ಅವರಿಗೆ ಬಹಳ ಆಘಾತ ನೀಡುತ್ತದೆ. ಇದರಿಂದ ಅವರು ಸಾಕಷ್ಟು ದುಃಖ ಅನುಭವಿಸುತ್ತಾರೆ. ಸಿ ಅಶ್ವಥ್ ತೀರಿ ಹೋದ ಮರುದಿನವೇ ವಿಷ್ಣುವರ್ಧನ್ ರವರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.

Comments are closed.