ಸೋನು ಗೌಡ ಬಗ್ಗೆ ಮತ್ತೊಮ್ಮೆ ಷಾಕಿಂಗ್ ಹೇಳಿಕೆ ಕೊಟ್ಟ ಗುರೂಜಿ: ಸೋನು ಹಾಲು ಇದ್ದಂತೆ ಆದರೆ… ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಈಗಾಗಲೇ 30 ದಿನಗಳಿಗೂ ಅಧಿಕ ಸಮಯವನ್ನು ಪೂರೈಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಹಂತಕ್ಕೆ ತಲುಪುವ ಕಡೆಗೆ ಮುನ್ನುಗುತ್ತಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಸಾಕಷ್ಟು ಬಾರಿ ಪದೇ ಪದೇ ಚರ್ಚೆಗೆ ಹಾಗೂ ಜನರ ದೃಷ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಸಂಖ್ಯಾ ಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಗುರೂಜಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಕೂಡ ಆಗಿದ್ದಾರೆ.

ಅದರಲ್ಲೂ ವಿಶೇಷವಾಗಿ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ಮನೆಯವರ ಎದುರಿಗೆ ತಮಗೆ ಬೇಕಾದದ್ದನ್ನು ನೇರವಾಗಿ ಹೇಳುವ ಮೂಲಕ ಹಲವಾರು ಜನರ ವಿರೋಧವನ್ನು ಕೂಡ ಕಟ್ಟಿಕೊಂಡಿದ್ದಾರೆ. ಈಗಾಗಲೇ ನಾಲ್ಕನೇ ವಾರವನ್ನು ಪೂರೈಸಿರುವ ಬಿಗ್ ಬಾಸ್ ಕನ್ನಡ ಓ ಟಿ ಟಿ 6ನೇ ವಾರಕ್ಕೆ ಮುಕ್ತಾಯಗೊಳ್ಳಲಿದೆ. ಮನೆಯವರು ಕಳಪೆ ಪ್ರದರ್ಶನ ಎಂಬುದಾಗಿ ಜೈಲಿಗೆ ಹಾಕಿದಾಗಲೂ ಕೂಡ ಮನೆಯವರ ವಿರುದ್ಧ ಸೋನು ಶ್ರೀನಿವಾಸಗೌಡ ಸಾಕಷ್ಟು ಕಿಡಿಕಿಡಿ ಕಾರಿದ್ದರು. ಈ ಸಂದರ್ಭದಲ್ಲಿ ಸೋನು ಶ್ರೀನಿವಾಸ ಗೌಡ ಅವರ ವ್ಯಕ್ತಿತ್ವವನ್ನು ಆರ್ಯವರ್ಧನ ಗುರೂಜಿ ಅವರಿಗೆ ಅರ್ಥವಾಗುವಂತೆ ವಿಭಿನ್ನವಾಗಿ ಹೇಳಿದ್ದಾರೆ.

aryavardhan sonu | ಸೋನು ಗೌಡ ಬಗ್ಗೆ ಮತ್ತೊಮ್ಮೆ ಷಾಕಿಂಗ್ ಹೇಳಿಕೆ ಕೊಟ್ಟ ಗುರೂಜಿ: ಸೋನು ಹಾಲು ಇದ್ದಂತೆ ಆದರೆ... ಹೇಳಿದ್ದೇನು ಗೊತ್ತೇ??
ಸೋನು ಗೌಡ ಬಗ್ಗೆ ಮತ್ತೊಮ್ಮೆ ಷಾಕಿಂಗ್ ಹೇಳಿಕೆ ಕೊಟ್ಟ ಗುರೂಜಿ: ಸೋನು ಹಾಲು ಇದ್ದಂತೆ ಆದರೆ... ಹೇಳಿದ್ದೇನು ಗೊತ್ತೇ?? 2

ನೀನು ಒಂತರಾ ಹಾಲಿದ್ದ ಹಾಗೆ ಕೋಪ ಬಂದರೆ ಉಕ್ಕುತ್ತೀಯಾ, ಪಾತ್ರೆ ಸರಿ ಇಲ್ಲ ಎಂದರೆ ಒಂದೇ ಸಲ ಒಡೆದು ಹೋಗ್ತೀಯಾ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಉತ್ತರಿಸುತ್ತಾ ಸೋನು ಗೌಡ ನಾನು ಮತ್ತೆ ಹಾಲಾಗಲು ಪ್ರಯತ್ನಿಸುವುದಿಲ್ಲ ಮೊದಲಿನ ಹಾಗೆ ಕಾಳಜಿ ಹೆಚ್ಚಾಗಿ ತೋರಿಸಲು ಹೋಗುವುದಿಲ್ಲ ಹಾಗೆ ಮಾಡಿದ್ದಕ್ಕಾಗಿ ನನಗೆ ಇಂದು ಈ ಪರಿಸ್ಥಿತಿ ಎಂಬುದಾಗಿ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಆರ್ಯವರ್ಧನ್ ಗುರೂಜಿ ಅವರ ಜೊತೆಗೆ ಹೇಳಿದ್ದಾರೆ. ದಿನಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಕುತೂಹಲ ಹೆಚ್ಚಾಗುತ್ತಿದ್ದು ಒಬ್ಬರಮೇಲೊಬ್ಬರು ದೂರು ತಕರಾರುಗಳನ್ನು ಎತ್ತಲು ಹಾಗೂ ಕ್ಯಾಮರಾ ಎದುರು ಹೆಚ್ಚು ಫೂಟೇಜ್ ಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

Comments are closed.