ಒಂದು ಕಡೆ ಧಾರಾವಾಹಿಯಿಂದ ಹೊರ ಹೋಗಿರುವ ಅನಿರುದ್ಧ್ ರವರು ಸಿಹಿ ಸುದ್ದಿ ಹಂಚಿಕೊಂಡು ಶುಭ ಹಾರೈಸಿ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ವಾಹಿನಿಯಲ್ಲಿ ಬರೋಬ್ಬರಿ 700ಕ್ಕೂ ಅಧಿಕ ಎಪಿಸೋಡ್ ಗಳನ್ನು ಪೂರೈಸಿರುವ ಸೂಪರ್ ಹಿಟ್ ಧಾರವಾಹಿ ಜೊತೆ ಜೊತೆಯಲಿ ಧಾರವಾಹಿ ತಂಡದಲ್ಲಿ ನಡೆದಿರುವ ಬಿರುಕು ಈಗ ಬಟ್ಟಾ ಬಯಲಾಗಿದೆ. ಈಗಾಗಲೇ ಧಾರವಾಹಿಯ ನಿರ್ದೇಶಕರು ಹಾಗೂ ನಿರ್ಮಾಪಕರು ಅನಿರುದ್ಧ ಅವರನ್ನು ಧಾರವಾಹಿಯಿಂದ ಹೊರಹಾಕಿದ್ದು ಕೂಡ ಈಗಾಗಲೇ ತಿಳಿದು ಬಂದಿದೆ. ಯಾಕೆಂದರೆ ಈಗಾಗಲೇ ಧಾರವಾಹಿಗೆ ಹರೀಶ್ ರಾಜ್ ಅವರನ್ನು ಕೂಡ ಹಾಕಿಕೊಂಡಾಗಿದೆ.

ಒಂದು ಕಡೆ ಅನಿರುದ್ಧ್ ರವರು ಮತ್ತೆ ಮಾತುಕತೆ ಮಾಡಿಕೊಂಡು ಸಿದ್ಧವಿದ್ದರೆ ನಾನು ಧಾರವಾಹಿಯಲ್ಲಿ ನಟಿಸಲು ಸಿದ್ಧ ಎಂಬುದಾಗಿ ಕೂಡ ಹೇಳಿದ್ದರು ಆದರೆ ಧಾರವಾಹಿ ತಂಡ ಮಾತ್ರ ಮತ್ತೆ ಅವರನ್ನು ಹಾಕಿಕೊಳ್ಳುವ ಯೋಚನೆಯಿನಲ್ಲೂ ಕೂಡ ಅದನ್ನು ಕಾಣುವ ಗೊಡವಿಗೆ ಹೋಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಧಾರವಾಹಿಯಲ್ಲಿ ಸಾಕಷ್ಟು ಕಿರುತೆರೆಯ ಸ್ಟಾರ್ ನಟರನ್ನು ತರಿಸಿ ಇನ್ನಷ್ಟು ಪ್ರೇಕ್ಷಕರನ್ನು ಕಳೆದುಕೊಳ್ಳುವ ಪ್ರಯತ್ನವನ್ನು ನಡೆಸಿದರು ಕೂಡ ಅನಿರುದ್ಧ್ ಅವರ ಆರ್ಯವರ್ಧನ್ ಪಾತ್ರದ ಅಭಿಮಾನಿಗಳು ಮಾತ್ರ ಅವರಿಲ್ಲದೆ ನಾವು ಧಾರವಾಹಿ ನೋಡುವುದಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಇನ್ನು ಈ ಕಡೆ ಶಿರಡಿ ಹಾಗೂ ಪುಣೆ ಸೇರಿದಂತೆ ಇನ್ನು ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಅನಿರುದ್ಧ್ ಅವರು ಭೇಟಿ ಮಾಡಿ ಬಂದಿದ್ದಾರೆ.

aniruddh shares a good news | ಒಂದು ಕಡೆ ಧಾರಾವಾಹಿಯಿಂದ ಹೊರ ಹೋಗಿರುವ ಅನಿರುದ್ಧ್ ರವರು ಸಿಹಿ ಸುದ್ದಿ ಹಂಚಿಕೊಂಡು ಶುಭ ಹಾರೈಸಿ ಎಂದದ್ದು ಯಾಕೆ ಗೊತ್ತೇ??
ಒಂದು ಕಡೆ ಧಾರಾವಾಹಿಯಿಂದ ಹೊರ ಹೋಗಿರುವ ಅನಿರುದ್ಧ್ ರವರು ಸಿಹಿ ಸುದ್ದಿ ಹಂಚಿಕೊಂಡು ಶುಭ ಹಾರೈಸಿ ಎಂದದ್ದು ಯಾಕೆ ಗೊತ್ತೇ?? 2

ಇನ್ನು ನಿಮ್ಮ ಶುಭಹಾರೈಕೆ ಇರಲಿ ಎಂಬುದಾಗಿ ಒಂದು ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ. ಹೌದು ನೀವು ಹೊಸ ಧಾರವಾಹಿಗೆ ಅನಿರುದ್ಧ್ ಅವರು ಆಯ್ಕೆಯಾಗಿದ್ದಾರೆ ಅದಕ್ಕಾಗಿಯೇ ಈ ಪೋಸ್ಟ್ ಮಾಡಿದ್ದಾರೆ ಎಂದು ಭಾವಿಸಬಹುದು ಸತ್ಯ ಬೇರೆನೇ ಇದೆ. ಅವರ ಪತ್ನಿಯಾಗಿರುವ ಕೀರ್ತಿ ವಿಷ್ಣುವರ್ಧನ್ ಅವರ ಜನ್ಮದಿನ ಆಗಿರುವ ಕಾರಣದಿಂದಾಗಿ ಫೋಟೋ ಪೋಸ್ಟ್ ಮಾಡಿ ನಿಮ್ಮ ಶುಭ ಹಾರೈಕೆ ನಮ್ಮ ಅರ್ಧಾಂಗಿಯ ಮೇಲಿರಲಿ ಎಂಬುದಾಗಿ ಅನಿರುದ್ಧ್ ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಕಿರುತೆರೆಯ ವಾಹಿನಿಗಳಿಂದ ಎರಡು ವರ್ಷದ ನಿಷೇಧದಲ್ಲಿರುವ ಅನಿರುದ್ಧ್ ತಮ್ಮದೇ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಸಿನಿಮಾದಲ್ಲಿ ನಟಿಸಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Comments are closed.