News from ಕನ್ನಡಿಗರು

ಮಹಿಳೆಯರಿಗೆ ಹಲ್ಲಿನ ಸಮಸ್ಯೆ ಯಾಕೆ ಬರುತ್ತದೆ ಗೊತ್ತೇ?? ಅದನ್ನು ಮನೆಯಲ್ಲಿಯೇ ತಡೆಗಟ್ಟುವುದು ಹೇಗೆ ಗೊತ್ತೇ??

0 245

ನಮಸ್ಕಾರ ಸ್ನೇಹಿತರೇ ಹಾರ್ಮೋನ್ ಗಳ ಬದಲಾವಣೆಯಿಂದಾಗಿ ದೇಹದಲ್ಲಿ ಸಾಕಷ್ಟು ಪರಿಣಾಮಗಳು ಉಂಟಾಗುತ್ತವೆ. ಮಹಿಳೆಯರಿಗಂತೂ ಋತುಚಕ್ರ, ದೇಹ ತೂಹ, ಮಾನಸಿಕ ಸ್ಥಿತಿ, ಮೊಡವೆ ಮತ್ತಿತರ ಚರ್ಮ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳಿಗೆ ಹಾರ್ಮೋನ್ ಬದಲಾವಣೆ ಒಂದು ಕಾರಣವಾಗುತ್ತೆ. ಆದರೆ ಹಲ್ಲಿನ ಮೇಲೂ ಪರಿಣಾಮ ಬೀರುತ್ತೆ ಅನ್ನೊದು ನಿಮಗೆ ಗೊತ್ತೆ?

ಹೌದು ನಮ್ಮ ದೇಹದಲ್ಲಾಗಿರುವ ಹಾರ್ಮೋನ್ ಬದಲಾವಣೆಯಿಂದಾಗಿ ಹಲ್ಲು, ವಸಡುಗಳ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ಗಳು ಬದಲಾವಣೆಯಾಗುವಾಗ ಬಾಯಿಕೆಂಪಾಗುವಿಕೆ, ಊದಿಕೊಂಡ ವಸಡು, ವಸಡಿನಲ್ಲಿ ರಕ್ತಸ್ರಾವ, ಬಾಯಿ ಹುಣ್ಣು ಉಂಟಾಗಬಹುದು. ಇದೆಲ್ಲ ಉಂಟಾಗುವುದಕ್ಕಿಂತ ಮೊದಲೇ ತಡೆಯಬೇಕು. ಅದಕ್ಕಾಗಿ ದಿನದಲ್ಲಿ ೨ ಬಾರಿ ಹಲ್ಲುಜ್ಜುವುದು, ವರ್ಷಕ್ಕೆ ಒಮ್ಮೆಯಾದರೂ ಸಂಪೂರ್ಣ ಬಾಯಿ ಸ್ವಚ್ಛಗೊಳಿಸಿಕೊಳ್ಳುವುದು ಅಥವಾ ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡುವುದು ಇಂಥ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಸಾಮಾನ್ಯವಾಗಿ ಹಲ್ಲಿನಲ್ಲಿ ನೋವು ಮತ್ತಿತ್ತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದು ಸಾಮಾನ್ಯವಾಗಿ ಮುಟ್ಟು ನಿಂತ ನಂತರ ಹೋಗುತ್ತದೆ ಆದಾಗ್ಯೂ ಹಲ್ಲಿನಲ್ಲಿ ಬಾಧೆ ಮುಂದುವರೆದರೆ ತಪ್ಪದೇ ದಂತ ವೈದ್ಯರನ್ನು ಬೇಟಿ ಮಾಡಿ. ಇನ್ನು ಗರ್ಭಾವಸ್ಥೆಯಲ್ಲಿದ್ದಾಗಲೂ ಹಲ್ಲಿನ ಸಮಸ್ಯೆ ಕಾಣಿಸುತ್ತದೆ. ಸೌಮ್ಯವಾದ ನೋವು ಕಾಣಿಸುತ್ತದೆ. ಈ ಸಮಯದಲ್ಲಿ ದಂತ ವೈದ್ಯರನ್ನು ಭೇಟಿಯಾಗುವುದಕ್ಕಿತಲೂ ನೈಸರ್ಗಿಕ ತೈಲಗಳನ್ನು ಬಳಸುವುದು ಒಳ್ಳೆಯದು. ಹಾಗೂ ನೋವು ಅತಿಯಾಗಿದ್ದರೆ ವೈದ್ಯರನ್ನು ಭೇಟಿ ಮಾಡಿ.

ಇನ್ನು ಮುಟ್ಟುನಿಂತ ಮೇಲೆ, ನಿಲ್ಲುವ ಸಮಯದಲ್ಲಿ ಕೂಡ ಹಾರ್ಮೋನ್ ಬದಲಾವಣೆ ಸಾಮಾನ್ಯ. ಈ ಸಮಯದಲ್ಲೂ ಹಲ್ಲಿನಲ್ಲಿ ನೋವು, ಕೀವು, ವಾಸನೆ, ಹಲ್ಲುದುರುವುದು ಇಂಥ ಸಮಸ್ಯೆಗಳು ಕಾಡಬಹುದು. ಇಂಥ ಸಂದರ್ಭದಲ್ಲಿ ವೈದ್ಯರನ್ನು ಬೇಟಿ ಮಾಡಿ. ಜೊತೆಗೆ ಮುಟ್ಟು ನಿಂತ ಮೇಲೆ ಈಸ್ಟ್ರೊಜೆನ್ ಕಡಿಮೆಯಾಗುವುದರಿಂದ ಮೂಳೆ ಸಾಂದ್ರತೆ ಕೂಡ ಕುಂಠಿತವಾಗುತ್ತದೆ. ಇದು ಹಲ್ಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ವಿಟಮಿನ್ ಗಳು ಮತ್ತು ಖನಿಜಾಂಶಗಳ ಅಗತ್ಯವಿದೆ. ಇದಕ್ಕಾಗಿ ವೈದ್ಯರ ಬಳಿ ಸಹಾಯ ಕೇಳಿ.

Leave A Reply

Your email address will not be published.