ಮುಂಜಾನೆ ಎದ್ದ ತಕ್ಷಣ ಹೀಗೆ ಮಾಡಿ ಬಿಸಿ ನೀರು ಕುಡಿದು ನೋಡಿ, ನಿಮ್ಮ ಎಷ್ಟೆಲ್ಲ ಸಮಸ್ಯೆಗಳು ಉಡೀಸ್ ಆಗುತ್ತವೆ.

ನಮಸ್ಕಾರ ಸ್ನೇಹಿತರೇ ಉಂಡು ನೂರಡಿ ನಡೆದು, ಕೆಂಡದೊಳು ಕೈಕಾಸಿ, ಗಂಡು ಮೇಲಾಗಿ ಮಲಗಿದರೇ, ವೈದ್ಯನಾಗಂಡನೆಂಬಂತೆ ನಾ ಸರ್ವಜ್ಞ ಎಂಬ ತ್ರಿಪದಿ ಕೇಳಿರುತ್ತಿರಿ. ಆದರೇ ಬೆಳಗೆದ್ದ ತಕ್ಷಣ ಬಹುತೇಖ ಎಲ್ಲರ ದಿನಚರಿ ಶುರುವಾಗುವುದು ನೀರು ಕುಡಿಯುವುದರಿಂದಲೇ. ಆದರೇ ಬೆಳಗ್ಗೆ ಒಂದು ಲೋಟ ಬಿಸಿ ನೀರನ್ನು ಕುಡಿಯುವದರಿಂದ ನಮ್ಮ ದೇಹದಲ್ಲಿ ಹಲವಾರು ಪ್ರಯೋಜನಗಳಿವೆ. ಅವುಗಳು ಯಾವುವು ಎಂಬುದನ್ನ ತಿಳಿಯೋಣ ಬನ್ನಿ.

ಮಲಬದ್ದತೆ ಹಲವಾರು ಜನರಿಗೆ ಇರುವ ಸಮಸ್ಯೆ. ಪ್ರತಿನಿತ್ಯ ಎದ್ದು ನಿಮ್ಮ ಬೆಳಿಗ್ಗೆಯನ್ನ ಎರಡು ಲೋಟ ಬಿಸಿ ನೀರಿನಿಂದ ಶುರು ಮಾಡಿದರೇ, ಮಲಬದ್ದತೆ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ. ಇನ್ನು ತೂಕ ಇಳಿಸಿಕೊಳ್ಳುವವರು, ತಮ್ಮ ರಕ್ತನಾಳಗಳಲ್ಲಿ ಶೇಖರವಾಗಿರುಶ ಬೇಡವಾದ ಕೊಬ್ಬನ್ನ ಹೊಗಲಾಡಿಸಲು, ಪ್ರತಿ ದಿನ ಬೆಳಿಗ್ಗೆ ಕಡ್ಡಾಯವಾಗಿ ಎರಡು ಲೋಟ ಬಿಸಿ ನೀರು ಕುಡಿಯಬೇಕು. ಬಿಸಿ ನೀರಿಗೆ ಎರಡು ಹನಿ ನಿಂಬೆರಸ ಮತ್ತು ಶುದ್ದ ಜೇನು ತುಪ್ಪವನ್ನ ಸೇರಿಸಿ ಕುಡಿದರೇ, ಫಲಿತಾಂಶವನ್ನ ಬೇಗ ನಿರೀಕ್ಷಿಸಬಹುದು.

ಗರ್ಭಿಣಿಯರಿಗೆ ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಅವರು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿರುತ್ತಾರೆ. ಅಂತಹವರು ಎರಡು ಲೋಟ ಬಿಸಿ ನೀರನ್ನು ಕುಡಿಯುವ ಮೂಲಕ ತಮ್ಮ ಕಿಬ್ಬೊಟ್ಟೆ ನೋವಿಗೆ ಶಾಶ್ವತ ಅಂತ್ಯ ಹಾಡಬಹುದು. ಚಿಕ್ಕ ಮಕ್ಕಳಿಗೆ ಬಿಸಿ ನೀರು ಕುಡಿಸಿದರೇ ಕೆಮ್ಮು, ಗಂಟಲ ನೋವು , ಥಂಡಿ, ಅಜೀರ್ಣದಂತಹ ಸಮಸ್ಯೆಗಳನ್ನು ಹೊಗಲಾಡಿಸಬಹುದು. ದೇಹದಲ್ಲಿ ರಕ್ತಪರೀಚಲನೆ ಸರಾಗವಾಗಿ ಸಾಗಬೇಕೆಂದರೇ ಬಿಸಿ ನೀರು ಬಹಳ ಅತ್ಯಗತ್ಯ. ಒಂದು ವೇಳೆ ರಕ್ತ ಪರೀಚಲನೆ ಅತ್ಯುತ್ತಮವಾಗಿ ಆಯಿಂತಂದರೇ ನಿಮ್ಮ ಚರ್ಮ ಹೊಳೆಯುತ್ತದೆ. ಹಾಗಾಗಿ ಮುಖದ ಸೌಂದರ್ಯಕ್ಕೂ ಬಿಸಿ ನೀರು ಸೇವನೆ ಅತ್ಯಗತ್ಯ.

ಸಕ್ಕರೆ ಖಾಯಿಲೆ ಇರುವವರು ಇನ್ಸುಲಿನ್ ತೆಗೆದುಕೊಳ್ಳುತ್ತಿರುತ್ತಾರೆ. ಆದರೇ ಅವರು ನಿಯಮಿತವಾಗಿ ಬಿಸಿ ನೀರನ್ನ ಕುಡಿಯುತ್ತಿದ್ದರೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಮಿತದಲ್ಲಿರುತ್ತದೆ. ಹೊಟ್ಟೆಯ ಸುತ್ತಲಿರುವ ಬೇಡವಾದ ಬೊಜ್ಜು ಕರಗಲು, ಕೀಲು, ಮಂಡಿ ನೋವಿಗೂ ಬಿಸಿನೀರು ಸೇವನೆ ಒಳ್ಳೆಯದು. ಇಷ್ಟೆಲ್ಲಾ ಉಪಯೋಗವಿರುವ ಕಾರಣ, ನಾಳೆಯಿಂದಲೇ ನಾವು ಪ್ರತಿದಿನ ಬೆಳಿಗ್ಗೆ ಎದ್ದ ನಂತರ ನಮ್ಮ ದಿನವನ್ನ ಎರಡು ಲೋಟ ಬಿಸಿ ನೀರು ಕುಡಿಯುವ ಮೂಲಕ ಶುರು ಮಾಡೋಣ. ನಿಮ್ಮ ಅಭಿಪ್ರಾಯ ತಿಳಿಸಿ.

Comments are closed.