ಭಾರತ ತಂಡ ಮೂರನೇ ಪಂದ್ಯದಲ್ಲಿ ಸೋಲಲು ಕಾರಣ ಯಾರಂತೆ ಗೊತ್ತೇ?? ಆತನಿಂದಲೇ ಭಾರತ ತಂಡ ಸೋಲಿತೇ??

ನಮಸ್ಕಾರ ಸ್ನೇಹಿತರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ ನಿಜ ಆದರೆ ಮೂರನೇ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಸೋತಿತ್ತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ರವರು ತಂಡದ ಗೆಲುವಿಗಾಗಿ ಕೊನೆಯವರೆಗೂ ಕೂಡ ಶತಕವನ್ನು ಬಾರಿಸಿ ಬಂಡೆಗಲ್ಲಿನಂತೆ ನಿಂತಂತಹ ಪರಿ ನಿಜಕ್ಕೂ ಕೂಡ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯನ್ನು ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿತ್ತು.

ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ ಯಾದವ್ ಶತಕವನ್ನು ಸಿಡಿಸಿರುವ ಕುರಿತಂತೆ ಹೊಗಳುತ್ತಿರುವ ಕ್ರಿಕೆಟ್ ಅಭಿಮಾನಿಗಳು ಒಂದುಕಡೆಯಾದರೆ ಮೂರನೇ ಟಿ20 ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ಸೋಲಲು ಆ ಆಟಗಾರನೇ ಕಾರಣ ಎಂಬುದಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ನೊಬ್ಬನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳ ತಂಡ ಇನ್ನೊಂದು ಕಡೆ ಇದೆ. ಹೌದು ಗೆಳೆಯರ ಭಾರತ ಕ್ರಿಕೆಟ್ ತಂಡದ ಮೂರನೇ ಟಿ 20 ಪಂದ್ಯದ ಸೋಲಿಗೆ ಕಾರಣ ದಿನೇಶ್ ಕಾರ್ತಿಕ್ ಎನ್ನುವುದಾಗಿ ಅಭಿಮಾನಿಗಳು ಮುನಿಸನ್ನು ವ್ಯಕ್ತಪಡಿಸುತ್ತಿದ್ದಾರೆ.

India 2 | ಭಾರತ ತಂಡ ಮೂರನೇ ಪಂದ್ಯದಲ್ಲಿ ಸೋಲಲು ಕಾರಣ ಯಾರಂತೆ ಗೊತ್ತೇ?? ಆತನಿಂದಲೇ ಭಾರತ ತಂಡ ಸೋಲಿತೇ??
ಭಾರತ ತಂಡ ಮೂರನೇ ಪಂದ್ಯದಲ್ಲಿ ಸೋಲಲು ಕಾರಣ ಯಾರಂತೆ ಗೊತ್ತೇ?? ಆತನಿಂದಲೇ ಭಾರತ ತಂಡ ಸೋಲಿತೇ?? 2

ನೀವು ಗಮನಿಸಿರಬಹುದು ದಿನೇಶ್ ಕಾರ್ತಿಕ್ ರವರು ಮೊದಲ ಪಂದ್ಯದಲ್ಲಿ ಕೇವಲ ಹನ್ನೊಂದು ಎರಡನೇ ಪಂದ್ಯದಲ್ಲಿ 17 ಹಾಗೂ ಕೊನೆಯ ಪಂದ್ಯದಲ್ಲಿ ಕೇವಲ 6 ರನ್ನುಗಳನ್ನು ಗಳಿಸಿದ್ದಾರೆ. ಇದರಿಂದಲೇ ಸ್ಪಷ್ಟವಾಗಿ ಸಾಬೀತಾಗುತ್ತಿದೆ ದಿನೇಶ್ ಕಾರ್ತಿಕ್ ರವರು ರನ್ ಗಳಿಸಲು ಪರದಾಡುತ್ತಿದ್ದಾರೆ ಎಂಬುದಾಗಿ. ಒಂದು ಕಡೆ ಸೂರ್ಯ ಕುಮಾರ್ ಯಾದವ್ ಅವರು ಬಿರುಸಿನ ಶತಕವನ್ನು ಬಾರಿಸಲು ಉತ್ಸುಕರಾಗಿದ್ದರೆ ಇನ್ನೊಂದು ಕಡೆ ದಿನೇಶ್ ಕಾರ್ತಿಕ್ ರವರು ರನ್ ಗಳಿಸಲು ಪರದಾಡುತ್ತಿದ್ದರು ಎಂದು ಕ್ರಿಕೆಟ್ ಅಭಿಮಾನಿಗಳು ತಂಡದ ಸೋಲಿಗೆ ದಿನೇಶ್ ಕಾರ್ತಿಕ್ ರವರನ್ನು ನೇರ ಹೊಣೆ ಎಂಬುದಾಗಿ ಬಿಂಬಿಸಿದ್ದಾರೆ.

Comments are closed.