Instant Personal Loan: ಹತ್ತು ನಿಮಿಷದಲ್ಲಿ 5 ಲಕ್ಷ ಲೋನ್ ಕೊಡ್ತಾರೆ- ಆನ್ಲೈನ್ ನಲ್ಲಿ ಅರ್ಜಿ ಹಾಕಿ.

Explore the eligibility criteria and documents required for an instant personal loan application

How to Get Instant Personal Loan: ನಮಸ್ಕಾರ ಸ್ನೇಹಿತರೇ ಲೋನ್ ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲಿ ವಿಶೇಷವಾಗಿ ಲೋನ್ ಪಡೆದುಕೊಳ್ಳುವುದಕ್ಕೆ ಸಾಕಷ್ಟು ದಿನಗಳು ಕೂಡ ಬೇಕಾಗಿರುವಂತಹ ಸಾಧ್ಯತೆಗಳು ಇರುತ್ತವೆ. IDBI ಬ್ಯಾಂಕ್ ಮೂಲಕ ಇವತ್ತಿನ ಲೇಖನಿಯಲ್ಲಿ ನಾವು ಯಾವ ರೀತಿ 10 ನಿಮಿಷಗಳಲ್ಲಿ ಲೋನ್ ಪಡೆದುಕೊಳ್ಳುವುದು ಎನ್ನುವುದರ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ. ಒಂದು ವೇಳೆ ನಿಮಗೆ ಅರ್ಜೆಂಟ್ ರೂಪದಲ್ಲಿ ಹಣ ಬೇಕಿದ್ರೆ IDBI ಬ್ಯಾಂಕಿನ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.

ಒಳ್ಳೆ ಸಿಬಿಲ್ ಸ್ಕೋರ್ ಇದ್ರೆ ನೀವು ಇಲ್ಲಿ ಐದು ಲಕ್ಷ ರೂಪಾಯಿಗಳ ವರೆಗೆ ಕೂಡ ಯಾವುದೇ ಸಮಸ್ಯೆ ಇಲ್ಲದೆ ಪಡೆದುಕೊಳ್ಳಬಹುದು. IDBI ಬ್ಯಾಂಕ್ ಮೂಲಕ ಲೋನ್ (Instant Personal Loan) ಪಡೆದುಕೊಳ್ಳುವುದಕ್ಕೆ ನೀವು ಯಾವೆಲ್ಲ ಡಾಕ್ಯೂಮೆಂಟ್ ಗಳನ್ನು ಹೊಂದಿರಬೇಕು ಹಾಗೂ ಅರ್ಹತೆಗಳು ಏನು ಎನ್ನುವುದನ್ನು ಇವತ್ತಿನ ಲೇಕ್ಯಲ್ಲಿ ನೀವು ತಿಳಿದುಕೊಳ್ಳಲಿದ್ದೀರಿ.

Explore the eligibility criteria and documents required for an instant personal loan application
Explore the eligibility criteria and documents required for an instant personal loan application

ತಮ್ಮ ವೈಯಕ್ತಿಕ ಹಾಗೂ ಬೇರೆ ಬೇರೆ ಖರ್ಚುಗಳಿಗೆ ಸಾಲದ ಅಗತ್ಯ ಇರುವಂತಹ ಜನರಿಗೆ IDBI ಬ್ಯಾಂಕ್ ಅತ್ಯಂತ ಶೀಘ್ರದಲ್ಲಿ ಲೋನ್ ನೀಡುವುದಕ್ಕೆ ಹೆಸರುವಾಸಿಯಾಗಿದೆ. ಆದರೆ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರ ಏನೆಂದರೆ IDBI ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಅನ್ನು ಕೇವಲ ನೀವು ಸಿಬಿಲ್ ಸ್ಕೋರ್ ಹೆಚ್ಚಿದರೆ ಮಾತ್ರ ಪಡೆದುಕೊಳ್ಳಬಹುದಾಗಿದೆ.

Discover the benefits of an IDBI Bank personal loan

25000ಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೂ ಕೂಡ ನೀವು ಪರ್ಸನಲ್ ಲೋನ್ ಅನ್ನು IDBI ಬ್ಯಾಂಕ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನಿಮ್ಮ ಮನೆಯ ನವೀಕರಣ, ಮದುವೆ, ಮೆಡಿಕಲ್ ಖರ್ಚು, ಕಾಲೇಜ್ ಖರ್ಚು ಇತ್ಯಾದಿ ಯಾವುದೇ ಕೂಡ ಆಗಿರಬಹುದು. ಇನ್ನು ನೀವು ಇಲ್ಲಿ ಪಡೆದುಕೊಳ್ಳುವ ಲೋನಿನ ಮೇಲೆ ಹೆಚ್ಚೆಂದರೆ 2500 ಅಥವಾ ಒಂದು ಪ್ರತಿಶತ ಪ್ರೊಸೆಸಿಂಗ್ ಫೀಸ್ ಅನ್ನು ವಿಧಿಸಲಾಗುತ್ತದೆ.

IDBI ಬ್ಯಾಂಕಿನಿಂದ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility To Get Instant Personal Loan

  1. ಸಾಲಕ್ಕಾಗಿ ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ವ್ಯಕ್ತಿ ಕೂಡ ಮೊದಲಿಗೆ ಭಾರತೀಯನಾಗಿರಬೇಕು ಹಾಗೂ ಆತನ ಆದಾಯ ತಿಂಗಳಿಗೆ ಕನಿಷ್ಠಪಕ್ಷ ಹದಿನೈದು ಸಾವಿರ ಅಥವಾ ಅದಕ್ಕೆ ಮೇಲ್ಪಟ್ಟಂತೆ ಇರಬೇಕು.
  2. ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಅಂತಹ ಉದ್ಯೋಗಸ್ಥ ವ್ಯಕ್ತಿ ತನ್ನ ಕೆಲಸದಲ್ಲಿ ಒಂದರಿಂದ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.
  3. ಈ ಮೊದಲ ತಿಳಿಸಿರುವಂತೆ ಸಿಬಿಲ್ ಸ್ಕೋರ್ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿರುವಂತೆ ಕನಿಷ್ಠ ಪಕ್ಷ 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು.

IDBI ಬ್ಯಾಂಕಿನಲ್ಲಿ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಗಳು- Documents required to Get Instant Personal Loan

  1. ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್.
  2. ಐಡೆಂಟಿಟಿ ಪ್ರೂಫ್.
  3. ಎರಡು ವರ್ಷಗಳ ಐಟಿಆರ್.
  4. ಹಿಂದಿನ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ಒದಗಿಸಬೇಕಾಗುತ್ತದೆ.
  5. ಫಾರ್ಮ್ 16 ಅನ್ನು ಒದಗಿಸಬೇಕು.
  6. ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಕಡ್ಡಾಯವಾಗಿ ನೀಡಬೇಕು.
  7. ಒಂದು ವೇಳೆ ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಕೆಲಸದ ಐಡಿ ಕಾರ್ಡ್ ಅಥವಾ ಸರ್ಟಿಫಿಕೇಟ್ ಅನ್ನು ಒದಗಿಸಬೇಕು.

IDBI ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವ ವಿಧಾನ- How to Apply for Instant Personal Loan

  1. ಎಲ್ಲಕ್ಕಿಂತ ಮೊದಲು ನೀವು IDBI ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. ಹೋಂ ಪೇಜ್ ನಲ್ಲಿ ನಿಮಗೆ ಪರ್ಸನಲ್ ಲೋನ್ ಆಪ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿದ ನಂತರ ನಿಮ್ಮ ಪರ್ಸನಲ್ ಲೋನ್ ಗೆ ಸಂಬಂಧಪಟ್ಟಂತ ಪ್ರತಿಯೊಂದು ಮಾಹಿತಿಗಳು ಕೂಡ ಓಪನ್ ಆಗುತ್ತವೆ.
  3. ಪ್ರಮುಖವಾಗಿ ಸಾಲಕ್ಕೆ ಸಂಬಂಧಪಟ್ಟಂತಹ ಪ್ರತಿಯೊಂದು ಮಾಹಿತಿಗಳನ್ನು ಇಲ್ಲಿ ಓದಿದ ನಂತರವಷ್ಟೇ ನೀವು Apply Now ಬಟನ್ ಮೇಲೆ ಕ್ಲಿಕ್ ಮಾಡಬಹುದಾಗಿದೆ.
  4. ನೀವು ಬ್ಯಾಂಕಿನ ಗ್ರಾಹಕರಾಗಿದ್ದರೆ ಹೌದು ಎನ್ನುವ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ ಇಲ್ಲವಾದಲ್ಲಿ ಇಲ್ಲ ಎನ್ನುವ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  5. ನಂತರದ ಸ್ಟೆಪ್ ನಲ್ಲಿ ಲೋನ್ ಗೆ ಅರ್ಜಿ ಸಲ್ಲಿಸುವಂತಹ ಫಾರ್ಮ್ ಓಪನ್ ಆಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಲ್ಲಿ ಜನರೇಟ್ ಆಗಿರುವಂತಹ ಓಟಿಪಿಯನ್ನು ಸಬ್ಮಿಟ್ ಮಾಡಬೇಕು.
  6. ಫಾರ್ಮಲ್ಲಿ ಈಗಾಗಲೇ ಕೇಳಿರುವಂತಹ ನಿಮ್ಮ ಕೆಲಸ ಹಾಗೂ ಸಂಬಳದ ಕುರಿತಂತೆ ಇರುವಂತಹ ಪ್ರಶ್ನೆ ಅಥವಾ ಅಲ್ಲಿ ನೀವು ನೀಡಬೇಕಾಗಿರುವ ಮಾಹಿತಿಗಳನ್ನು ಸರಿಯಾದ ರೂಪದಲ್ಲಿ ತುಂಬಬೇಕಾಗಿರುತ್ತದೆ. ಇವೆಲ್ಲವನ್ನು ಪೂರೈಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  7. ಇದನ್ನು ಸಬ್ಮಿಟ್ ಮಾಡಿದ ಮೇಲೆ ಬ್ಯಾಂಕಿನ ಸಿಬ್ಬಂದಿಗಳು ನಿಮ್ಮ ದಾಖಲೆ ಹಾಗೂ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಿದ ನಂತರ ಕೆಲವೇ ಸಮಯದಲ್ಲಿ ನಿಮ್ಮ ಖಾತೆಗೆ ಹಣವನ್ನು ನೇರವಾಗಿ ಟ್ರಾನ್ಸ್ಫರ್ ಮಾಡಲಾಗುತ್ತದೆ.
  8. IDBI ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಪ್ರಕ್ರಿಯೆ ಈ ರೀತಿಯಲ್ಲಿ ಪೂರ್ಣಗೊಳ್ಳುತ್ತದೆ.

Uncover the Volvo EM90’s impressive features and specifications

Comments are closed.