ಬಿಗ್ ನ್ಯೂಸ್: ಉದ್ಯೋಗ ಹುಡುಕುತ್ತಿದ್ದವರಿಗೆ ಸುವರ್ಣಾವಕಾಶ, ಮತ್ತೊಮ್ಮೆ ಬಂಪರ್ ಪಡೆದುಕೊಂಡ ರಾಜ್ಯ.

ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಹೆಚ್ಚು ಬಂಡವಾಳ ಆಕರ್ಷಿಸುವ ಮೂಲಕ, ಹೆಚ್ಚು ಉದ್ಯೋಗವನ್ನು ಸೃಷ್ಟಿಸಲು ಕರ್ನಾಟಕ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರ ನೇತೃತ್ವದಲ್ಲಿ ನಡೆದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ 2367.99 ಕೋಟಿ ರೂ. ಮೊತ್ತದ 88 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಈ ಮೂಲಕ ರಾಜ್ಯವನ್ನು ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡಯ್ಯಬೇಕು ಎನ್ನುವ ನಿರಾಣಿಯವರ ಕನಸು ನನಸಾಗಲಿದೆ.

ಈಗಾಗಲೇ ವಿದೇಶಿ ನೇರ ಹೂಡಿಕೆ ಯಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಯಲ್ಲೂ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯವೇ ಮೊದಲ ಸ್ಥಾನ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಶ್ರೀಯುತ ನಿರಾಣಿಯವರು ಕಾರ್ಯಪ್ರವೃತ್ತರಾಗಿದ್ದಾರೆ. ಹಾಗಾಗಿ ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಹೋಡಿಕೆ ಹಾಗೂ ಉದ್ಯೋಗ ಎರಡೂ ಹೆಚ್ಚಾಗಲಿದೆ.

karnataka industry | ಬಿಗ್ ನ್ಯೂಸ್: ಉದ್ಯೋಗ ಹುಡುಕುತ್ತಿದ್ದವರಿಗೆ ಸುವರ್ಣಾವಕಾಶ, ಮತ್ತೊಮ್ಮೆ ಬಂಪರ್ ಪಡೆದುಕೊಂಡ ರಾಜ್ಯ.
ಬಿಗ್ ನ್ಯೂಸ್: ಉದ್ಯೋಗ ಹುಡುಕುತ್ತಿದ್ದವರಿಗೆ ಸುವರ್ಣಾವಕಾಶ, ಮತ್ತೊಮ್ಮೆ ಬಂಪರ್ ಪಡೆದುಕೊಂಡ ರಾಜ್ಯ. 2

ಮಂಗಳವಾರ ಸಂಜೆ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಭೆಯಲ್ಲಿ ಬಂಡವಾಳ ಹೂಡಿಕೆ ಹಾಗೂ ಈ ಮೂಲಕ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 88 ಯೋಜನೆಗಳಿಂದ 2367.99 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಈ ಮೂಲಕ ರಾಜ್ಯದಲ್ಲಿ 10904 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. 50 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿ 7 ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿ ಅನುಮೋದನೆ ನೀಡಿದೆ.ಇದರಲ್ಲಿ ಒಟ್ಟು 799.1 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 3237 ಉದ್ಯೋಗ ಸೃಷ್ಟಿಯಾಗಲಿದೆ.

ಇನ್ನು 15 ರಿಂದ 50 ಕೋಟಿ ರೂ. ಬಂಡವಾಳ ಹೂಡಿಕೆಯಲ್ಲಿ 78 ಯೋಜನೆಗಳಿಗೆ ಚಾಲನೆ ಸಿಕ್ಕಿದ್ದು, ಸುಮಾರು 1431.74 ಕೋಟಿ ರೂ. ಹೂಡಿಕೆ ಮಾಡಿ 7667 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದೆ. ಇನ್ನು ಹೆಚ್ಚುವರಿತಾಗಿ 3 ಯೋಜನೆಗಳಿಗೆ 137.15 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಏಕಗವಾಕ್ಷಿ ಸಮಿತಿ ನಿರ್ಧರಿಸಿದೆ.

ಈ ಯೋಜನೆಗಳಿಗೆ ಸಮಿತಿ ಅನುಮೋದನೆ ನೀಡಿದೆ: ಮೆ.ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ಪಾಕ್೯ ಲಿ-357 ಕೋಟಿ ರೂ., ಮೆ. ಸ್ಪಾನ್ ಸುಲ್ಸ್ ಫಾರ್ಮುಲೇಷನ್ -96 ಕೋಟಿ ರೂ., ಮೆ.ರಿನಾಕ್ ಇಂಡಿಯಾ ಲಿಮಿಟೆಡ್- 80 ಕೋಟಿ ರೂ, ಮೆ. ಸನ್ವಿಕ್ ಸ್ಟೀಲ್ ಲಿಮಿಟೆಡ್-64 ಕೋಟಿ ರೂ., ಮೆ. ಹೆಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ ಇಂಡಿಯಾ ಪ್ರೆ, ಲಿಮಿಟೆಡ್-59.31 ಕೋಟಿ ರೂ., ಮೆ.ಎ .ಒನ್ ಟೆಕ್ಸ್ ಟೆಕ್ ಪ್ರೆ.ಲಿಮಿಟೆಡ್ -46.50 ಕೋಟಿ ರೂ., ಮೆ.ಟೆಕ್ಸ್ ಪೋಟ್೯ ಇಂಡಸ್ಟ್ರೀಸ್ ಪ್ರೆ.ಲಿಮಿಟೆಡ್-44.80 ಕೋಟಿ ರೂ., ಮೆ. ಕೇನಾಸ್ಸ್ ಟೆಕ್ನಾಲಜಿ ಇಂಡಿಯಾ ಪ್ರೆ. ಲಿಮಿಟೆಡ್-35 ಕೋಟಿ ರೂ.

Comments are closed.