IRCTC Temple package: ಕಡಿಮೆ ದರದಲ್ಲಿ ದಕ್ಷಿಣ ಭಾರತ ದೇವಸ್ಥಾನಗಳನ್ನು ಸುತ್ತಿ ಬನ್ನಿ ಬಡವರಿಗೆ ಉಪಯೋಗ- ಯೋಜನೆಯ ಸಂಪೂರ್ಣ ಡೀಟೇಲ್ಸ್.

IRCTC Temple package - South Indian temple package by IRCTC explained in Kannada

IRCTC Temple package – Kannada news: ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ದೇಶ ಸುತ್ತುವ ಆಸೆ ಇರುತ್ತದೆ ಅದರಲ್ಲೂ ವಿಶೇಷವಾಗಿ ಹಿರಿಯರಿಗೆ ತಮ್ಮ ಇಳಿ ವಯಸ್ಸಿನಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಮಾಡುವಂತಹ ಆಸೆ ಖಂಡಿತವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಅಂಥವರಿಗೆ ಈಗ ಭಾರತೀಯ ರೈಲ್ವೆ ಇಲಾಖೆಯ IRCTC ದಕ್ಷಿಣ ಭಾರತದ ದರ್ಶನ್(Dakshin Bharath Darshan Tour Package) ಎನ್ನುವಂತಹ ಪ್ರವಾಸದ ಪ್ಯಾಕೇಜ್ ಅನ್ನು ಜಾರಿಗೆ ತಂದಿದ್ದು ಭಾರತ್ ಗೌರವ ಟೂರಿಸ್ಟ್ ಟ್ರೈನ್ ಮೂಲಕ ಈ ಟೂರ್ ಪ್ಯಾಕೇಜ್ ಅನ್ನು ನೀಡುವುದಕ್ಕೆ ಹೊರಟಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

IRCTC Temple package – South Indian temple package by IRCTC explained in Kannada

ದಕ್ಷಿಣ ಭಾರತ ದರ್ಶನ್ ಟೂರ್ ಪ್ಯಾಕೇಜ್ (IRCTC Temple package) ಬಗ್ಗೆ ಮಾತನಾಡುವುದಾದರೆ 12 ರಾತ್ರಿ ಹಾಗೂ 11 ದಿನಗಳನ್ನು ಇದು ಹೊಂದಿರುತ್ತದೆ. ಅಕ್ಟೋಬರ್ 25 ರಿಂದ ನವೆಂಬರ್ 5 ನೇ ತಾರೀಖಿನವರೆಗೆ ಇದು ಜಾರಿಯಲ್ಲಿರುತ್ತದೆ. ಇನ್ನು ಈ ಟೂರ್ ಪ್ಯಾಕೇಜ್ ನಲ್ಲಿ ಯಾವೆಲ್ಲ ದೇವಸ್ಥಾನಗಳಿಗೆ ಭೇಟಿ ನೀಡುವಂತಹ ಅವಕಾಶ ಸಿಗುತ್ತದೆ ಎಂಬುದನ್ನು ನೋಡುವುದಾದರೆ, ತಿರುಮನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ(Sri Padmanabha Swamy Temple), ಕನ್ಯಕುಮಾರಿಯ ಭಗವತಿ ಅಮ್ಮನ ದೇವಸ್ಥಾನ ಹಾಗೂ ಶ್ರೀ ಸ್ವಾಮಿ ವಿವೇಕಾನಂದರವರ ರಾಕ್, ಮಧುರೈ ಮೀನಾಕ್ಷಿ ಸುಂದರಂ ದೇವಸ್ಥಾನ, ತಿರುಪತಿ ಏಳುಮಲೆಯನ್ ದೇವಸ್ಥಾನ ಹಾಗೂ ರಾಮೇಶ್ವರಂ ನ ರಾಮನಾಥ ಸ್ವಾಮಿ ದೇವಸ್ಥಾನಕ್ಕೆ ನೀವು ಭೇಟಿ ನೀಡಬಹುದಾಗಿದೆ.

ದಕ್ಷಿಣ ಭಾರತದ ದರ್ಶನ್ ಟೂರ್(Dakshin Bharat Tour Package Price) ಗೆ ಹೊರಡುವುದಕ್ಕಿಂತ ಮುಂಚೆ ಎಷ್ಟು ಹಣ ಖರ್ಚಾಗುತ್ತದೆ ಎನ್ನುವಂತಹ ಪ್ಲಾನಿಂಗ್ ಕೂಡ ನಿಮ್ಮ ಬಳಿ ಇದ್ದೇ ಇರಬೇಕಾಗುತ್ತದೆ. ಬನ್ನಿ ಇದರ ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. Economy Class ಗೆ 21,300 ರೂಪಾಯಿ, Standard Classಗೆ 33,300 ರೂಪಾಯಿ, Comfort Class ಗಾಗಿ 36,400 ರೂಪಾಯಿಯನ್ನು ಕಟ್ಟಬೇಕಾಗುತ್ತದೆ. ಈ ಪ್ರವಾಸ ಇಷ್ಟೊಂದು ಕಡಿಮೆ ಬೆಲೆ ಸಿಗುತ್ತಿರುವುದಕ್ಕೆ ಕಾರಣ ಭಾರತೀಯ ರೈಲ್ವೆ ಇಲಾಖೆ ಪ್ರವಾಸೋದ್ಯಮ ಹೆಚ್ಚಾಗಲಿ ಎನ್ನುವ ಕಾರಣಕ್ಕಾಗಿ ನೀಡುತ್ತಿರುವಂತಹ ಪ್ರೋತ್ಸಾಹ ರಿಯಾಯಿತಿ ಆಫರ್ ಆಗಿದೆ.

ಹಾಗಿದ್ದರೆ ನೀಡುವಂತಹ ಈ ಹಣಕ್ಕೆ ಈ ಪ್ರವಾಸದ ಸಂದರ್ಭದಲ್ಲಿ ಏನೆಲ್ಲ ಸಿಗುತ್ತದೆ ಎಂಬುದನ್ನು ಕೂಡ ತಿಳಿಯೋಣ ಬನ್ನಿ. ರೈಲ್ವೆ ಪ್ರಯಾಣದ ಜೊತೆಗೆ ರಾತ್ರಿ ಉಳಿದುಕೊಳ್ಳುವುದಕ್ಕೆ ((IRCTC Temple package)) ರೂಮ್ ಪ್ರಯಾಣದ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಮೂರು ಹೊತ್ತಿನ ಆಹಾರವನ್ನು ಕೂಡ ಒದಗಿಸಲಾಗುತ್ತದೆ ಹಾಗೂ ನಿಮಗೆ ಟ್ರಾವೆಲ್ ಇನ್ಸೂರೆನ್ಸ್(Travel Insurance) ಅನ್ನು ಕೂಡ ನೀಡಲಾಗುತ್ತದೆ. ನೀವು ಸುತ್ತಾಡುವಂತಹ ಸ್ಥಳದ ಮಹತ್ವವನ್ನು ತಿಳಿಯಲು ನಿಮಗೆ ಗೈಡ್ ಅನ್ನು ಕೂಡ ನೀಡಲಾಗುತ್ತದೆ. ಪೂರ್ತಿ ಪ್ರಯಾಣದಲ್ಲಿ ಈ ಟೂರಿಸ್ಟ್ ಪ್ಯಾಕೇಜ್ ಅನ್ನು ಮ್ಯಾನೇಜ್ ಮಾಡುತ್ತಿರುವ ಮ್ಯಾನೇಜರ್ ಗಳಿಂದ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಸಹಾಯ ಹಾಗೂ ಮಾರ್ಗದರ್ಶನ ಖಂಡಿತವಾಗಿ ನಿಮಗೆ ದೊರಕುತ್ತದೆ.

ಇನ್ನು ಏನಿಲ್ಲ ಸಿಗೋದಿಲ್ಲ (IRCTC Temple package) ಅನ್ನೋದನ್ನ ನೋಡೋದಾದ್ರೆ ರೂಮ್ ಸರ್ವಿಸ್ ನ ಹೆಚ್ಚಿನ ಸೇವೆಗೆ ನೀವು ಖುದ್ದಾಗಿ ಹಣವನ್ನು ನೀಡಬೇಕಾಗುತ್ತದೆ. ದೇವಸ್ಥಾನದ ಸ್ಪೆಷಲ್ ದರ್ಶನದ ಟಿಕೆಟ್ ಹಾಗೂ ಸೈಡ್ ಸಿಂಗ್ ಮಾಡುವಾಗ ಕೆಲವೊಂದು ವಿಶೇಷ ಪ್ರದೇಶಗಳ ಪ್ರವೇಶಕ್ಕೆ ಹೆಚ್ಚಿನ ಶುಲ್ಕವನ್ನು ನೀವೇ ಕಟ್ಟಬೇಕಾಗುತ್ತದೆ. ಇನ್ನು ಪ್ರಮುಖವಾಗಿ ನೀವು ಈ ಟಿಕೆಟ್ ಅನ್ನು ಬುಕ್ ಮಾಡುವ ಸಂದರ್ಭದಲ್ಲಿ ಯಾವ ಬರ್ತ್ ಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿ ಟಿಕೆಟ್ ಬುಕ್ ಮಾಡುವುದು ಒಳ್ಳೆಯದು. ಯಾಕೆಂದರೆ ನೀವು ನಿಮಗೆ ಬೇಕಾಗಿರುವಂತಹ ಟಿಕೆಟ್ ಅನ್ನೆ ಕೊನೆಯ ಸಂದರ್ಭದಲ್ಲಿ ಪಡೆದುಕೊಳ್ಳುವುದು ಅಸಾಧ್ಯ. ಈ ಟೂರಿಸ್ಟ್ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ನೀವು IRCTC ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. Insurance Policy
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10
ಕರ್ನಾಟಕದ ಜನತೆಗೆ ಬಿಗ್ ಶಾಕ್- ದಿಡೀರ್ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್. ಕಾರಣ ಏನಂತೆ ಗೊತ್ತೇ? Ration card latest Updates

Comments are closed.