ಕೊನೆಗೂ ಸಿಕ್ತು ವಿಡಿಯೋ; ಚಿರತೆಯ ರೀತಿ ಓಡಿ, ಡೈವ್ ಹಾಕಿ ಜಡೇಜಾ ಕ್ಯಾಚ್ ಹಿಡಿದಿದ್ದು ಹೇಗೆ ಗೊತ್ತೇ?? ವಿಡಿಯೋ ನೀವೇ ನೋಡಿ.

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಹಾಗೂ ಏಕದಿನ ಸರಣಿಯನ್ನು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ವಿದೇಶಿ ನೆಲದಲ್ಲಿ ಅದರಲ್ಲೂ ಇಂಗ್ಲೆಂಡ್ ತಂಡ ದಂತಹ ಬಲಿಷ್ಠ ತಂಡದ ಎದುರು ಅವರ ತವರು ನೆಲದಲ್ಲಿಯೇ ಸರಣಿಯನ್ನು ಗೆದ್ದಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ ಸಂಗತಿ. ಅದರಲ್ಲಿಯೂ ನಾವು ಮಾತನಾಡಲು ಹೊರಟಿರುವುದು ಇಂಗ್ಲೆಂಡ್ ತಂಡದ ಎದುರು ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜಾ ರವರ ಅದ್ಭುತ ಕ್ಯಾಚ್ ಒಂದರ ಕುರಿತಂತೆ.

ಜುಲೈ 17ರಂದು ಇಂಗ್ಲೆಂಡ್ ತಂಡದ ವಿರುದ್ಧ ನಡೆದಿರುವ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮುನ್ನೂರರ ಗಡಿಯನ್ನು ದಾಟಿ ಸುವಂತಹ ಆಟವನ್ನು ಆಡಬಹುದು ಆಗಿತ್ತು ಆದರೆ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ಹಾಗೂ ಫೀಲಿಂಗ್ ಎನ್ನುವುದು ಇಂಗ್ಲೆಂಡ್ ತಂಡವನ್ನು ಕೇವಲ 45.5 ಓವರ್ಗಳಲ್ಲಿ ಕೇವಲ 260 ರನ್ನುಗಳ ಗುರಿಯನ್ನು ನೀಡುವಂತೆ ಮಾಡುವಂತೆ ಕಟ್ಟಿಹಾಕಿದೆ. ಅದರಲ್ಲೂ ಭಾರತೀಯ ಕ್ರಿಕೆಟ್ ತಂಡದ ಎದುರು ಜಾಸ್ ಬಟ್ಲರ್ ರವರು ಪರಿಣಾಮಕಾರಿಯಾಗಿ ಆಡಬಹುದು ಎಂಬುದಾಗಿ ಭಾವಿಸಲಾಗಿತ್ತು ಆದರೆ ಈ ಸಂದರ್ಭದಲ್ಲಿ ಬೌಲಿಂಗಿಗೆ ಇಳಿದ ಹಾರ್ದಿಕ್ ಪಾಂಡ್ಯ ರವರು ಜಾಸ್ ಬಟ್ಲರ್ ರವರಿಗೆ ಶಾರ್ಟ್ ಬೌನ್ಸರ್ ಮಾದರಿಯ ಬೌಲಿಂಗನ್ನು ಮಾಡುತ್ತಾರೆ.

jaduu | ಕೊನೆಗೂ ಸಿಕ್ತು ವಿಡಿಯೋ; ಚಿರತೆಯ ರೀತಿ ಓಡಿ, ಡೈವ್ ಹಾಕಿ ಜಡೇಜಾ ಕ್ಯಾಚ್ ಹಿಡಿದಿದ್ದು ಹೇಗೆ ಗೊತ್ತೇ?? ವಿಡಿಯೋ ನೀವೇ ನೋಡಿ.
ಕೊನೆಗೂ ಸಿಕ್ತು ವಿಡಿಯೋ; ಚಿರತೆಯ ರೀತಿ ಓಡಿ, ಡೈವ್ ಹಾಕಿ ಜಡೇಜಾ ಕ್ಯಾಚ್ ಹಿಡಿದಿದ್ದು ಹೇಗೆ ಗೊತ್ತೇ?? ವಿಡಿಯೋ ನೀವೇ ನೋಡಿ. 2

ಈ ಸಂದರ್ಭದಲ್ಲಿ ರವೀಂದ್ರ ಜಡೇಜಾ ರವರು ಮಾಡಿದ ಕೆಲಸ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರ ಪ್ರಶಂಸೆಗೆ ಒಳಗಾಗಿದೆ. ಹೌದು ಗೆಳೆಯರೇ ಈ ಸಂದರ್ಭದಲ್ಲಿ ಬೌನ್ಸರ್ ಬಾಲಿಗೆ ಬಟ್ಲರ್ ಅವರು ಹುಕ್ ಶಾಟ್ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ರವೀಂದ್ರ ಜಡೇಜಾ ರವರು ಚಿರತೆಯಂತೆ ಓಡಿ ಡೈವ್ ಮಾಡಿ ಬಟ್ಲರ್ ರವರ ಕ್ಯಾಚ್ ಅನ್ನು ಹಿಡಿದಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದ್ದು ರವೀಂದ್ರ ಜಡೇಜಾ ಅವರ ಫೀಲ್ಡಿಂಗ್ ಕುರಿತಂತೆ ಎಲ್ಲಾ ಕಡೆ ಪ್ರಶಂಸೆಯ ಚರ್ಚೆ ನಡೆದಿದೆ. ರವೀಂದ್ರ ಜಡೇಜಾ ಅವರ ಕ್ಯಾಚ್ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.