ಛೇ ಹಿರಿಯ ನಟಿ ಜಯರವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡ ದಿನವೇ ಮತ್ತೆ ಏನಾಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ 2020ರಿಂದ ಪ್ರಾರಂಭವಾಗಿ ಈಗ 2000 21 ನಡೆಯುತ್ತಿದ್ದರು ಈ ಮಹಾಮಾರಿಯ ಕಾಟ ಇನ್ನು ಕೂಡ ಕಡಿಮೆಯಾಗಿಲ್ಲ. ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅದೆಷ್ಟು ಗಣ್ಯರನ್ನು ನಾವು ಕಳೆದುಕೊಂಡಿದ್ದೇವೆ. ಅದೆಷ್ಟೋ ಜನರು ಇಹಲೋಕ ತ್ಯಜಿಸಿದ್ದಾರೆ. ಈಗ ಈ ಲಿಸ್ಟ್ ಗೆ ಇನ್ನಷ್ಟು ಜನ ನಟ-ನಟಿಯರು ಸೇರುತ್ತಿದ್ದಾರೆ. ಹೌದು ನೆನ್ನೆಯಷ್ಟೇ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಒಬ್ಬರು ಈ ಲೋಕದ ಪಯಣ ಮುಗಿಸಿ ಪರಲೋಕಕ್ಕೆ ನಡೆದಿದ್ದಾರೆ.

ಹೌದು ಆರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದ ನಟಿ ಜಯ ಅವರು ನೆನ್ನೆಯಷ್ಟೇ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದಲ್ಲಿ ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಮೂರು ಜನರೇಶನ್ ಅಲ್ಲಿ ಕೂಡ ಇವರು ಸಕ್ರಿಯರಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಹಲವಾರು ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು ನಟಿ ಜಯ.

ನಟನಾಗಿ ನಿಂತರೆ ಪರಕಾಯಪ್ರವೇಶ ಮಾಡುತ್ತಿದ್ದ ಈ ನಟಿ ಎಲ್ಲರ ಅಚ್ಚುಮೆಚ್ಚಿನ ಪೋಷಕ ನಟಿಯಾಗಿದ್ದರು. ಜಯ ರವರ ಅಗಲಿಕೆಗೆ ಚಿತ್ರರಂಗದ ಎಲ್ಲ ಗಣ್ಯರು ಕಂಬನಿ ಮಿಡಿದಿದ್ದು ವೀಕ್ಷಕರು ಕೂಡ ಇವರ ಅಗಲಿಕೆಯ ದುಃಖದಲ್ಲಿದ್ದಾರೆ. ಚಿತ್ರರಂಗದ ಎಲ್ಲಾ ಸೂಪರ್ ಸ್ಟಾರ್ ನಟರ ಚಿತ್ರಗಳಲ್ಲಿ ಕೂಡ ಪೋಷಕ ನಟಿಯಾಗಿ ಕಾಣಿಸಿಕೊಂಡು ಹೆಗ್ಗಳಿಕೆ ನಟಿ ಜಯ ರವರಿಗೆ ಇದೆ. ಎಲ್ಲ ನಟರಿಂದ ಶಹಬ್ಬಾಸ್ ಎನಿಸಿಕೊಂಡ ಪೋಷಕ ನಟಿ ಜಯ.

ಇವರು ನಿನ್ನೆ ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ದೈವಾಧೀನರಾಗಿರೋದು ಅವರ ಆಪ್ತ ಬಳಗದಲ್ಲಿ ಬಹಳ ದುಃಖವನ್ನುಂಟು ಮಾಡಿದೆ. ಚಿತ್ರರಂಗದಲ್ಲಿ ನಟಿ ಜಯ ರವರು ಎಷ್ಟು ಪ್ರಖ್ಯಾತರಾಗಿದ್ದಾರೆ ಎಂದರೆ ಎಲ್ಲರೂ ಅವರನ್ನು ಪ್ರೀತಿಯಿಂದ ಕುಳ್ಳಿ ಜಯ ಎಂದೇ ಕರೆಯುತ್ತಿದ್ದರು. ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗ ನಿರ್ಮಾಪಕ ಕೋಟಿ ರಾಮು ಮಂಜುನಾಥ್ ನಿರ್ದೇಶಕ ಶಂಕರ್ ಅಭಿರಾಮ್ ನಿರ್ಮಾಪಕ ರಾಜಶೇಖರ್ ಹಾಗು ಹಿರಿಯ ನಟರಾದ ಶಂಖನಾದ ಅರವಿಂದ ಹಾಗೂ ಕೃಷ್ಣೇಗೌಡ ರನ್ನು ಕಳೆದುಕೊಂಡ ದುಃಖದಲ್ಲಿ ಮರುಗುತ್ತಿತ್ತು.

ಈಗ ಈ ಲಿಸ್ಟ್ಗೆ ಹಿರಿಯ ನಟಿ ಜಯರಾಮರ ಸೇರ್ಪಡೆ ಮತ್ತಷ್ಟು ದುಃಖವನ್ನು ಇಮ್ಮಡಿಗೊಳಿಸಿದೆ. ಇನ್ನೊಂದು ವಿಷಯವೆಂದರೆ ಜಯಾ ರವರನ್ನು ಕಳೆದುಕೊಂಡ ದಿನವೇ ಕನ್ನಡಚಿತ್ರರಂಗ ಇನ್ನೊಬ್ಬ ಖ್ಯಾತ ಹಿರಿಯ ನಟರನ್ನು ಕೂಡ ಕಳೆದುಕೊಂಡಿದೆ ಅವರು ಯಾರು ಗೊತ್ತೇ. ಹೌದು ನಿನ್ನೆ ನಟಿ ಜಯಾ ರವರ ದೈವಾಧೀನರಾದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಜೂನಿಯರ್ ಡಾಕ್ಟರ್ ರಾಜಕುಮಾರ್ ಎಂದೇ ಖ್ಯಾತಿಯಾಗಿದ್ದ, ಜಯಣ್ಣ ರವರು ಕೂಡ ಇಹಲೋಕ ಕೆಜಿಸಿ ಕನ್ನಡ ಚಿತ್ರರಂಗವನ್ನು ದುಃಖಕ್ಕೆ ತಳ್ಳಿದ್ದಾರೆ.

ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರಂತೆ ಹಾವಭಾವಗಳಲ್ಲಿ ನಟಿಸುತ್ತಿದ್ದ ರಂಗಕರ್ಮಿ ಜಯಣ್ಣ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಶೈಲಿಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿ ಕನ್ನಡ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದರು. ಇಂತಹ ಅಮೂಲ್ಯ ರತ್ನವನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿದೆ. ಇಬ್ಬರು ಅಮೂಲ್ಯ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಈ ನಟರಿಗಾಗಿ ಕಂಬನಿ ಮಿಡಿದಿದೆ. ಇಬ್ಬರು ಹಿರಿಯ ಪೋಷಕ ನಟರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.