ಈ ಬಾರಿಯ ಬಿಗ್ ಬಾಸ್ ಮತ್ತೆ ಪುನಾರಂಭವಾಗುತ್ತಾ?? ಕಾರ್ಯ ಕ್ರಮಕ್ಕೆ ಸಿಕ್ತು ಅತಿ ದೊಡ್ಡ ಟ್ವಿಸ್ಟ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಇತಿಹಾಸದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಈಗಾಗಲೇ 8 ಸೀಸನ್ ಗಳನ್ನು ಕಂಡಿದೆ ಕನ್ನಡದ ಬಿಗ್ ಬಾಸ್. ಈ 8 ಸೀಸನ್ ಗಳನ್ನು ನಿರೂಪಣೆ ಮಾಡಿರುವುದು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಬ್ಬರೇ. ಅಂದಿನಿಂದ ಇಂದಿನವರೆಗೂ ತಮ್ಮ ನಿರೂಪಣಾ ಕಾರ್ಯವನ್ನು ಸಮರ್ಥವಾಗಿ ಹಾಗೂ ಪರ್ಫೆಕ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ ಕರುನಾಡ ಮಾಣಿಕ್ಯ. ಆದರೆ ಈ ಬಾರಿಯ ಬಿಗ್ ಬಾಸ್ ಮಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ಕಲರ್ಸ್ ಕನ್ನಡ ವಾಹಿನಿ ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟನ್ನು ಪ್ರಾರಂಭಿಸು ವಾಗಲೇ ಈ ಮಹಾಮಾರಿಯ ಸೂಚನೆ ಇತ್ತು. ಆದರೂ ಸಹ ದೃತಿಗೆಡದೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಪ್ರಾರಂಭಿಸಿ ಕಾರ್ಯಕ್ರಮಕ್ಕೆ ಚಾಲನೆ ಕೂಡ ಸಿಕ್ಕಿತು. ಆದರೆ ಬ ನಂತರ ಬಂದದ್ದು ಒಂದೊಂದೇ ಅಗ್ನಿಪರೀಕ್ಷೆ ಗಳು. ಮೊದಲ ಎರಡು ವಾರಂತ್ಯದಲ್ಲಿ ಕಿಚ್ಚ ಸುದೀಪ್ ರವರು ಅನಾರೋಗ್ಯದಿಂದ ಬಳಲಿದ್ದಾರೆ. ನಂತರ ಲಾಕ್ ಡೌನ್ ನಿಯಮಗಳಿಂದ ಬಿಗ್ ಬಾಸ್ ಸೀಸನ್ 8ನ್ನು 72ನೇ ದಿನಕ್ಕೆ ಮೊಟಕುಗೊಳಿಸಲಾಯಿತು.

ಬಿಗ್ ಬಾಸ್ ಪರದೆಗಳಲ್ಲಿ ಇಲ್ಲಿಯವರೆಗೆ ಹಾಕಿದ ಪರಿಶ್ರಮ ಎಲ್ಲಾ ವೇಸ್ಟ್ ಆಯ್ತು ಅಂತ ತಿಳ್ಕೊಂಡ್ರು. ಗ್ರಾಂಡ್ ಫಿನಾಲೆಗೆ ಕೇವಲ ಎರಡು ವಾರಗಳ ಅಷ್ಟೇ ಬಾಕಿ ಉಳಿದಿದ್ದು. ಬಿಗ್ ಬಾಸ್ ಸ್ಪರ್ಧಿಗಳಿಗೆ ಇದು ಬಹಳಷ್ಟು ನಿರಾಶೆ ಉಂಟು ಮಾಡಿದ್ದರು ನಿಯಮಗಳಿಗೆ ತಲೆಬಾಗಲೇ ಬೇಕಿತ್ತು. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಮಗೆ ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ರಘು, ದಿವ್ಯಾ ಸುರೇಶ್, ಮಂಜು ಪಾವಗಡ, ಶಮಂತ್, ನಿಧಿ ಸುಬ್ಬಯ್ಯ, ಅರವಿಂದ್ ಹಾಗೂ ವೈಷ್ಣವಿ, ಶುಭ ಪೂಂಜ ಇವರಲ್ಲಿ ಒಬ್ಬರು ವಿನ್ನರ್ ಆಗಿ ಕಾಣಿಸಿ ಕೊಳ್ಳುತ್ತಿದ್ದರು. ಆದರೆ ಬಿಗ್ ಬಾಸ್ ತಮ್ಮ ಸ್ಪರ್ಧಿಗಳಿಗೆ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದ್ದರು.

ಅದೇನೆಂದರೆ ಎಲ್ಲಾ ಕೊನೆಗೂ ಒಂದು ಪ್ರಾರಂಭ ಇದ್ದೆ ಇರುತ್ತದೆ. ಇದು ಕೇವಲ ನಿಮ್ಮ ಇನ್ನೊಂದು ಹೆಜ್ಜೆಯ ಪ್ರಾರಂಭ ಎಂದು ಹೇಳಬಹುದು. ಈ ಜಗತ್ತಿನಲ್ಲಿ ಯಾವುದಕ್ಕೂ ಕೊನೆ ಇಲ್ಲ ಯಾವುದಕ್ಕೂ ಪ್ರಾರಂಭ ವಿಲ್ಲ. ಪರಿಸ್ಥಿತಿ ನಿಮ್ಮನ್ನು ಒಂದಲ್ಲ ಒಂದು ಘಟನೆ ಯಲ್ಲಿ ವಿಚಾರದಲ್ಲಿ ವಿಜೇತ ನನ್ನಾಗಿ ಮಾಡೇ ಮಾಡುತ್ತದೆ ಎಂದು ಹೇಳಿದರು.

ಅಲ್ಲದೆ ಕೆಲ ಮೂಲಗಳ ಪ್ರಕಾರ ಇತ್ತೀಚೆಗೆ ಹರಿದಾಡುತ್ತಿರುವ ಸುದ್ದಿ ಸಂಚಲವನ್ನೆಬ್ಬಿಸಿದೆ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 8 ಎಲ್ಲಿ ಮುಗಿದಿತ್ತು ಅಲ್ಲಿಂದಲೇ ಮತ್ತೆ ಪ್ರಾರಂಭವಾಗಲಿದೆ ಎಂಬ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ನಿಮಗೆ ಏನು ಅನಿಸುತ್ತಿದೆ ಬಿಗ್ ಬಾಸ್ ಸೀಸನ್ 8 ಮತ್ತೆ ಪ್ರಾರಂಭವಾಗುತ್ತ ಇದರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮಿಸ್ ಮಾಡದೆ ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡೋ ಮೂಲಕ ನಮಗೆ ತಿಳಿಸಿ.

Comments are closed.