ಸೃಜನ್ ಲೋಕೇಶ್ ಅವರ ಪತ್ನಿ ಕೂಡ ಕನ್ನಡದ ಕಿರುತೆರೆಯ ಖ್ಯಾತ ನಟಿಯಂತೆ, ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರೂ ಕೂಡ ನಂತರದ ದಿನಗಳಲ್ಲಿ ಯಾವ ಅವಕಾಶಗಳು ಸಿಗದೆ ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಕನ್ನಡ ಚಿತ್ರರಂಗದ ಅದೆಷ್ಟೋ ನಟರು ಹಾಗೂ ನಟಿಯರು ಕಿರುತೆರೆಯ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಕನ್ನಡ ಕಿರುತೆರೆಯ ಹಾಸ್ಯ ರಿಯಾಲಿಟಿ ಶೋಗಳಲ್ಲಿ ‘ಮಜಾ ಟಾಕೀಸ್’ ಪ್ರಮುಖವಾದುದು.

ಹೌದು ಈ ರಿಯಾಲಿಟಿ ಶೋದಲ್ಲಿ ಹೊಸ ಸಿನಿಮಾಗಳ ಪ್ರಮೋಶನ್ ಗಾಗಿ ಸಾಕಷ್ಟು ಕಲಾವಿದರು ಪ್ರತಿವಾರ ಬರುತ್ತಾರೆ. ಅಷ್ಟೇ ಅಲ್ಲದೆ ಈ ರಿಯಾಲಿಟಿ ಶೋದಲ್ಲಿ ಅನೇಕ ಕಲಾವಿದರು ತಮ್ಮ ಹಾಸ್ಯ ಮಾತುಗಳ ಮೂಲಕ ಜನರನ್ನು ಮನರಂಜಿಸುತ್ತಾರೆ. ಹೀಗೆ ಇದೀಗ ಈ ರಿಯಾಲಿಟಿ ಶೋ ಕನ್ನಡ ಕಿರುತೆರೆಯ ಹೆಚ್ಚು ವೀಕ್ಷಕರನ್ನು ಹೊಂದಿರುವ ಶೋಗಳಲ್ಲಿ ಒಂದಾಗಿದೆ. ಇನ್ನು ಈ ಶೋವನ್ನು ನಿರೂಪಣೆ ಮಾಡುತ್ತಿರುವವರು ಕನ್ನಡದ ಖ್ಯಾತ ನಟ ಸೃಜನ್ ಲೋಕೇಶ್.

ಹೌದು ನಟ ಸೃಜನ್ ಲೋಕೇಶ್ ಅವರು ಇದೀಗ ಮಜಾ ಟಾಕೀಸ್ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ಆಸೆ ಬರೆದ ಮಾತುಗಳ ಮೂಲಕವೇ ಜನರ ಮನ ಗೆದ್ದಿದ್ದಾರೆ. ಇನ್ನು ಈ ರಿಯಾಲಿಟಿ ಶೋದ ನಿರ್ಮಾಣಕಾರ್ಯ ಕೂಡ ಅವರ ಹೆಗಲ ಮೇಲಿದೆ. ಇನ್ನು ಸೃಜನ್ ಲೋಕೇಶ್ ಅವರು ಇದಕ್ಕಿಂತ ಮುಂಚೆ ಹಲವರು ರಿಯಾಲಿಟಿ ಶೋಗಳನ್ನು ನಿರ್ಮಾಣ ಮಾಡಿದ್ದಷ್ಟೆ ಅಲ್ಲದೆ ನಿರೂಪಣೆಯನ್ನು ಕೂಡ ಮಾಡಿದ್ದಾರೆ. ಇನ್ನು ಚಿತ್ರರಂಗಕ್ಕೆ ಬಂದಾಗ ಇವರು ಬಾಲನಟರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.

ನಂತರ ದೊಡ್ಡವರಾದಮೇಲೆ ಸುಮಾರು ಹದಿನಾಲ್ಕು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ನಂತರದ ದಿನಗಳಲ್ಲಿ ಇವರಿಗೆ ಅವಕಾಶಗಳು ಕಡಿಮೆಯಾಗುತ್ತ ರಿಂದ ಇವರು ಕಿರುತೆರೆಯತ್ತ ಮುಖ ಮಾಡಿದರು. ಇನ್ನು ಇವರು ಪೊರ್ಕಿ, ಚಿಂಗಾರಿ, ಎದೆಗಾರಿಕೆ, ಸ್ನೇಹಿತರು, ನವಗ್ರಹ ಹೀಗೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಕಿರುತೆರೆಯಲ್ಲಿ ಚಾಲೆಂಜ್, ಛೋಟಾ ಚಾಂಪಿಯನ್, ಕಾಸಿಗೆ ಟಾಸ್, ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಹೀಗೆ ಹಲವಾರು ರಿಯಾಲಿಟಿ ಶೋಗಳನ್ನು ನಿರ್ಮಾಣ ಮಾಡಿದ್ದಲ್ಲದೆ ಇದರಲ್ಲಿ ಚಾಲೆಂಜ್ ರಿಯಾಲಿಟಿ ಶೋವನ್ನು ಬಿಟ್ಟು ಉಳಿದ ಎಲ್ಲಾ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ‘ಇವಳು ಸುಜಾತಾ’ ಎಂಬ ಧಾರಾವಾಹಿಯನ್ನು ಕೂಡ ಇವರೇ ನಿರ್ಮಾಣ ಮಾಡಿದ್ದಾರೆ. ಹೀಗೆ ನಿರೂಪಣೆ ಹಾಗೂ ನಿರ್ಮಾಣಕಾರ್ಯದಲ್ಲಿ ಇದೀಗ ಕನ್ನಡ ಕಿರುತೆರೆಯಲ್ಲಿ ತೊಡಗಿಕೊಂಡಿರುವ ಸೃಜನ್ ಲೋಕೇಶ್ ಅವರ ಪತ್ನಿ ಯಾರು ಗೊತ್ತಾ? ಹಾಗಾದರೆ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಸೃಜನ್ ಲೋಕೇಶ್ ಅವರು ಗ್ರೀಷ್ಮಾ ಎಂಬುವರನ್ನು ಪ್ರೀತಿಸಿ ಮದುವೆಯಾದರು. ಒಂದು ಕಾರ್ಯಕ್ರಮದಲ್ಲಿ ಗ್ರೀಷ್ಮಾ ಅವರನ್ನು ಭೇಟಿಯಾದ ಸೃಜನ್ ಲೋಕೇಶ್ ಅವರು ಮೊದಲ ನೋಟದಲ್ಲೇ ಮನಸೋತರು.

ಇನ್ನೂ ಭೇಟಿಯಾಗಿ ಎರಡುದಿನಗಳು ಕಳೆದಿರಲಿಲ್ಲ ಆಗಲೇ ಸೃಜನ್ ಲೋಕೇಶ್ ಅವರು ಗ್ರೀಷ್ಮಾ ಅವರ ಬಳಿ ಹೋಗಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಿದ್ದರು. ಇನ್ನು ಗ್ರೀಷ್ಮಾ ಅವರು ಕೂಡ ಇದಕ್ಕೆ ಒಪ್ಪಿಕೊಂಡರು. ಹೀಗೆ ಸೃಜನ್ ಲೋಕೇಶ್ ಹಾಗೂ ಗ್ರೀಷ್ಮಾ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇನ್ನು ಇವರ ಪತ್ನಿ ಕೂಡ ರಂಗಭೂಮಿ ಕಲಾವಿದರು ಹಾಗೂ ಕಿರುತೆರೆಯ ನಟಿಯಾಗಿದ್ದಾರೆ. ಇದೀಗ ಈ ಜೋಡಿ ತಮ್ಮ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.