ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಆಸಕ್ತರು ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮಹಾಮಾರಿ ಕಾರಣದಿಂದಾಗಿ ಎಲ್ಲರಿಗೂ ಉದ್ಯೋಗದ ಕೊರತೆ ಎನ್ನುವುದು ಕಾಣುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಇದು ಬೇಸರದ ಸಂಗತಿಯಾದರೂ ಕೂಡ ಸದ್ಯದ ಪರಿಸ್ಥಿತಿಗೆ ಇದು ಕಟು ಸತ್ಯ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹಾಗೆಂದು ಬೇಸರಪಡುವ ಅಗತ್ಯವಿಲ್ಲ. ಇಂದು ನಾವು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲವೊಂದು ಹುದ್ದೆಗಳಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಇದರ ಕುರಿತಂತೆ ನಿಮಗೆ ತಿಳಿಸಲು ಹೊರಟಿದ್ದೇವೆ.

ಕೆಲಸ ಇಲ್ಲ ಎಂದು ಚಿಂತೆ ಪಡುತ್ತಿರುವ ವರಿಗೆ ಖಂಡಿತವಾಗಿಯೂ ಈ ಸುದ್ದಿಯನ್ನುವುದು ಆಶಾದಾಯಕ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಖಂಡಿತವಾಗಿ ಹೇಳಬಹುದಾಗಿದೆ. ಆಸಕ್ತರು ಹಾಗೂ ಅರ್ಹ ವ್ಯಕ್ತಿಗಳು ಈ ಕೆಲಸಕ್ಕಾಗಿ ಅರ್ಜಿ ಹಾಕಬಹುದಾಗಿದೆ ಅರ್ಹ ಅಭ್ಯರ್ಥಿಗಳಿಗೆ ಈ ಕೆಲಸವು ಕೂಡ ಸಿಗಲಿದೆ. ಹಾಗಿದ್ದರೆ ಮೊದಲಿಗೆ ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬುದಾಗಿ ತಿಳಿಯೋಣ ಬನ್ನಿ.

indian oil | ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಆಸಕ್ತರು ಅರ್ಜಿ ಸಲ್ಲಿಸಿ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಆಸಕ್ತರು ಅರ್ಜಿ ಸಲ್ಲಿಸಿ. 2

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಉತ್ತರ ವಲಯದ ಇಲೆಕ್ಟ್ರಾನಿಕ್ಸ್‌, ಇನ್‌ಸ್ಟ್ರುಮೆಂಟ್‌, ಮೆಕ್ಯಾನಿಕ್‌, ಡಾಟಾ ಎಂಟ್ರಿ ಆಪರೇಟರ್‌, ಸಿವಿಲ್, ಫಿಟ್ಟರ್, ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ಸ್‌ ವಿಭಾಗ ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. 626 ಅಭ್ಯರ್ಥಿಗಳಿಗೆ ಅವಕಾಶವಿದೆ. ಸಂಬಂಧಿತ ವಿಷಯದಲ್ಲಿ ಐಟಿಐ ಪಾಸಾಗಿರಬೇಕು. ಹಾಗೂ ಡಿಪ್ಲೋಮಾ ಕೂಡ ಟೆಕ್ನಿಷಿಯನ್ ವಿಭಾಗದಲ್ಲಿ ಆಗಿರಬೇಕು. ಜನವರಿ 31ರ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕು. ಹಾಗಿದ್ದರೆ ಆಯ್ಕೆಯಾಗುವುದು ಹೇಗೆ ಎಂಬ ನಿಮ್ಮ ಗೊಂದಲಕ್ಕೆ ಕೂಡ ನಾವು ಉತ್ತರವನ್ನು ನೀಡುತ್ತೇನೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 100 ಅಂಕದ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಸಂದರ್ಶನ ನಡೆಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನೀವು ಕೂಡ ಈ ಕೆಲಸದಲ್ಲಿ ಆಸಕ್ತರಾಗಿದ್ದರೆ ತಪ್ಪದೇ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ.

Comments are closed.