ಸೀರೆಯಲ್ಲಿ ಮಿಂಚಿದ ರಶ್ಮಿಕ ಮಂದಣ್ಣ, ಸೀರೆಯ ಬೆಲೆ ಕೇಳಿದರೆ ನೀವು ಕೂಡ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ. ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ನವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಈಗಾಗಲೇ ಭಾರತೀಯ ಚಿತ್ರರಂಗದ ಪ್ರಮುಖ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಇತ್ತೀಚಿಗೆ ಪುಷ್ಪ ಚಿತ್ರದ ಯಶಸ್ಸಿನಿಂದಾಗಿ ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಅಗ್ರಸ್ಥಾನ ಪಡೆಯುವತ್ತ ಮುನ್ನುಗ್ಗುತ್ತಿದ್ದಾರೆ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದಾಗಿದೆ. ಪುಷ್ಪ ಚಿತ್ರದ ಮೊದಲ ಭಾಗಕ್ಕಾಗಿ ರಶ್ಮಿಕ ಮಂದಣ್ಣ ನವರು ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

ಈಗ ಪುಷ್ಪ ಚಿತ್ರದ ಎರಡನೇ ಭಾಗಕ್ಕಾಗಿ ರಶ್ಮಿಕಾ ಮಂದಣ್ಣ ನವರು ಚಿತ್ರತಂಡದ ಬಳಿ ಮೂರು ಕೋಟಿ ರೂಪಾಯಿ ಸಂಭಾವನೆಗಾಗಿ ಬೇಡಿಕೆ ಇಟ್ಟಿದ್ದಾರೆ. ಅಂದರೆ ಶೇಕಡ 50% ಸಂಭಾವನೆಯಲ್ಲಿ ಹೆಚ್ಚಳದ ಬೇಡಿಕೆಯಿಟ್ಟಿದ್ದಾರೆ. ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಹಲವಾರು ಚಿತ್ರಗಳಿಗೆ ರಶ್ಮಿಕ ಮಂದಣ್ಣ ನವರು ಸಹಿಹಾಕಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಟಿ ರಶ್ಮಿಕಾ ಮಂದಣ್ಣ ನವರು ತಮ್ಮ ಕರಿಯರ್ ನ ಉತ್ತುಂಗದಲ್ಲಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸೀರೆಯುಟ್ಟುಕೊಂಡು ರಶ್ಮಿಕಾ ಮಂದಣ್ಣ ಫೋಟೋಸ್ ಪೋಸ್ಟ್ ಮಾಡಿದ್ದರು.

rashmika mandanna 4 | ಸೀರೆಯಲ್ಲಿ ಮಿಂಚಿದ ರಶ್ಮಿಕ ಮಂದಣ್ಣ, ಸೀರೆಯ ಬೆಲೆ ಕೇಳಿದರೆ ನೀವು ಕೂಡ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ. ಎಷ್ಟು ಗೊತ್ತೇ??
ಸೀರೆಯಲ್ಲಿ ಮಿಂಚಿದ ರಶ್ಮಿಕ ಮಂದಣ್ಣ, ಸೀರೆಯ ಬೆಲೆ ಕೇಳಿದರೆ ನೀವು ಕೂಡ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ. ಎಷ್ಟು ಗೊತ್ತೇ?? 2

ಈ ಫೋಟೋದಲ್ಲಿ ಉಟ್ಟುಕೊಂಡಿರುವ ಶ್ವೇತವರ್ಣದ ಸೀರೆಯ ಬೆಲೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಫೋಟೋದಲ್ಲಿ ರಶ್ಮಿಕ ಮಂದಣ್ಣ ನವರನ್ನು ನೋಡಿ ಸೀರೆ ಹಾಗೂ ಸೀರೆಯಲ್ಲಿ ರಶ್ಮಿಕ ಮಂದಣ್ಣ ಇಬ್ಬರು ಚೆನ್ನಾಗಿದ್ದಾರೆ ಎಂಬುದಾಗಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅಂದಹಾಗೆ ಈ ಸೀರೆಯ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ. ರಶ್ಮಿಕ ಮಂದಣ್ಣ ನವರು ಆಗಾಗ ಹೊಸ ಬ್ರಾಂಡ್ ಗಳಿಗೆ ಹಾಗೂ ಜಾಹೀರಾತುಗಳಿಗೆ ರಾಯಭಾರಿಯಾಗಿ ಕೂಡ ಆ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಅವರ ಗಳಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ ಎಂದರೆ ಎಲ್ಲರೂ ನಂಬಲೇಬೇಕು. ಇದು ಅವರ ಪರಿಶ್ರಮದ ಹಣ ಇದೇ ರೀತಿ ಯಶಸ್ಸನ್ನು ಸಾಧಿಸಲಿ ಎಂದು ಹಾರೈಸೋಣ.

Comments are closed.