ಧಾರವಾಹಿ ಬಿಟ್ಟು ಹೋದ ಜೊತೆ ಜೊತೆಯಲಿ ಅನು ಸಿರಿಮನೆ ಪಾತ್ರಕ್ಕೆ ಟಾಪ್ ಹೀರೊಯಿನ್ ಎಂಟ್ರಿ, ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುವ ಜೊತೆ ಜೊತೆಯಲಿ ಧಾರಾವಾಹಿಯ ಕುರಿತು ಹಲವಾರು ಮಾಹಿತಿ ಗಳು ಕೇಳಿ ಬರುತ್ತಿವೆ. ಈ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಇಡೀ ಕರ್ನಾಟಕದೆಲ್ಲೆಡೆ ಮನೆ ಮಾತಾಗಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ರವರು ಧಾರವಾಹಿ ಬಿಟ್ಟು ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇದೇ ಸಮಯದಲ್ಲಿ ಈ ವಿಷಯದ ಕುರಿತು ಮೇಘ ಶೆಟ್ಟಿ ರವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಎಷ್ಟೇ ಸಂಪರ್ಕ ಮಾಡಲು ಪ್ರಯತ್ನ ಮಾಡಿದರೂ ಕೂಡ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ಕನಿಷ್ಠ ಪಕ್ಷ ಇಲ್ಲ ಧಾರಾವಾಹಿಯಲ್ಲಿಯೇ ಇರುತ್ತೇನೆ ಎಂದು ಕೂಡ ಹೇಳಿಲ್ಲ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೇಘ ಶೆಟ್ಟಿ, ಅನಿರುದ್ ಸರ್ ಸೇರಿದಂತೆ ಇನ್ನಿತರರು ಕೂಡ ಈ ಕುರಿತು ಯಾವುದೇ ಪೋಸ್ಟ್ ಹಾಕಿಲ್ಲ. ಆದ ಕಾರಣ ಮೇಘ ಶೆಟ್ಟಿ ರವರು ಧಾರವಾಹಿ ಬಿಟ್ಟು ಹೋಗುವುದು ಖಚಿತ ಎನ್ನಲಾಗುತ್ತಿದೆ.

ಇದೇ ಸಮಯದಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ಬಹಳ ಪ್ರಸಿದ್ದಿ ಪಡೆದು ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಕಾರಣ ಮೇಘ ಶೆಟ್ಟಿ ರವರಂತೆ ಅದ್ಭುತವಾಗಿ ನಟನೆ ಮಾಡಿ, ಅವರ ಸ್ಥಾನವನ್ನು ತುಂಬಬಲ್ಲ ನಟಿಯಾಗಿ ಧಾರವಾಹಿ ತಂಡ ಹುಡುಕಾಟದಲ್ಲಿ ತೊಡಗಿ ಕೊಂಡಿದೆ ಎಂಬುದು ತಿಳಿದು ಬಂದಿದೆ. ಇನ್ನು ಇವರ ಸ್ಥಾನಕ್ಕೆ ಟಾಪ್ ನಟಿಯನ್ನು ಆಯ್ಕೆ ಮಾಡಿದರೇ ಉತ್ತಮ ಎಂಬುದು ತಂಡದ ಲೆಕ್ಕಾಚಾರ ಎಂಬುದು ತಿಳಿದು ಬಂದಿದೆ. ಯಾಕೆಂದರೆ ಈ ಮೊದಲೇ ಜನಪ್ರಿಯತೆ ಪಡೆದುಕೊಂಡು ನಟನೆಯ ಮೂಲಕ ಸದ್ದು ಮಾಡಿದ್ದರೇ, ಮೇಘ ಶೆಟ್ಟಿ ರವರ ಸ್ಥಾನವನ್ನು ತುಂಬಬಹುದು ಎಂಬುದು ಎಲ್ಲರ ಲೆಕ್ಕಾಚಾರ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.