ಜೊತೆ ಜೊತೆಯಲಿ ರಾಜನಂದಿನಿ ಪಾತ್ರಕ್ಕೆ ಕೊನೆಗೂ ನಟಿ ಫಿಕ್ಸ್ ಯಾರಂತೆ ಗೊತ್ತಾ? ಅದ್ಭುತ ಆಯ್ಕೆ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಝೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆಜೊತೆಯಲಿ ಧಾರಾವಾಗಿ ಉತ್ತಮ ರೆಸ್ಪಾನ್ಸ್ ನ್ನು ಹೊಂದಿರುವ ಧಾರಾವಾಹಿ. ಇದರ ಟಿ ಆರ್ ಪಿ ಯಲ್ಲಿ ಆಗಾಗ ಏರಿಳಿತಗಳು ಕಂಡಿದ್ದರೂ ಇದರ ವೀಕ್ಷಣೆಯಂತೂ ಕಡಿಮೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ಧಾರಾವಾಹಿಯಲ್ಲಿನ ಪಾತ್ರವರ್ಗ ಮತ್ತು ಕಥೆ.

ಜೊತೆಜೊತೆಯಲಿ ಧಾರಾವಾಗಿಯಲ್ಲಿ ಆರ್ಯವರ್ಧನ್ ಹಾಗೂ ಅನು ಜೋಡಿ ತುಂಬಾನೇ ಹೆಸರು ಮಾಡಿದ ಜೋಡಿ. ವಯಸ್ಸಿನ ಅಂತರವಿರುವ ಜೋಡಿಯ ಲವ್ ಸ್ಟೋರಿ ಇದು. ಈ ಧಾರಾವಾಗೆ ಸಾಕಷ್ಟು ಟ್ವಿಸ್ಟ್ ಗಳನ್ನು ಕೊಟ್ಟಿರುವ ತಂಡ, ಮುಂದಿನ ದಿನಗಳಲ್ಲಿ ಪ್ರಸಾರವಾಗುವ ರಾಜನಂದಿನಿ ಪಾತ್ರಕ್ಕೆ ಸೂಕ್ತ ನಟಿ ಹಿಂದಿಯ ಎರಿಕಾ ಫರ್ನಾಂಡಿಸ್ ಎಂದು ಆಯ್ಕೆ ಮಾಡಿತ್ತು. ಎರಿಕಾ ಈ ಧಾರಾವಹಿಯಲ್ಲಿ ನಟಿಸುವುದು ಪಕ್ಕಾ ಎಂದೇ ಎಲ್ಲರೂ ಭಾವಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಅನಿರುದ್ಧ ಹಾಗೂ ಎರಿಕಾ ಅವರ ಫೋಟೋ ಶೂಟ್ ಗಳು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.

ಆದರೆ ಕನ್ನಡದ ಧಾರವಾಹಿಗೆ, ಅದರಲ್ಲೂ ಒಂದು ಪ್ರಮುಖ ಪಾತ್ರಕ್ಕೆ ಕನ್ನಡ ನಟಿಯರನ್ನೇ ಹಾಕಿಕೊಳ್ಳುವ ಬದಲು ಹಿಂದಿಯಿಂದ ಕರೆಸಿಕೊಳ್ಳುವುದ್ಯಾಕೆ ಎಂಬುದು ಜನರ ಪ್ರಶ್ನೆಯಾಗಿತ್ತು. ಹಾಗಾಗಿ ಜನರ ಇಚ್ಛೆಯಂತೆ ಈ ಧಾರಾವಾಹಿ ತಂಡ ರಾಜನಂದಿನಿ ಪಾತ್ರಕ್ಕೆ ಕನ್ನಡತಿಯನ್ನೇ ಆಯ್ಕೆ ಮಾಡುವುದಾಗಿ ಕೇಳಿಬರುತ್ತಿದೆ. ಲಕ್ಷ್ಮೀ ಬಾರಮ್ಮದಲ್ಲಿ ಚಿನ್ನುವಾಗಿ ಮಿಂಚಿದ್ದ ಕವಿತಾ ಗೌಡ ಅಥವಾ ಇನ್ನೊಬ್ಬ ಖ್ಯಾತ ಕನ್ನಡ ಕಿರುತೆರೆ ನಟಿ ಕಾವ್ಯ ಗೌಡ ರಾಜನಂದಿನಿ ಪಾತ್ರಕ್ಕೆ ಸೂಟ್ ಆಗಬಹುದು ಎಂಬುದು ಎಲ್ಲರ ಅಭಿಪ್ರಾಯ. ಈ ಇಬ್ಬರಲ್ಲಿ ಯಾರಾದರೂ ರಾಜನಂದಿನಿಯಾಗಿ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವರೇ ಎಂದು ನೋಡಬೇಕು.

Comments are closed.