ಅಯ್ಯಯ್ಯೋ, ಮನೆಯಲ್ಲಿ ಇಷ್ಟೆಲ್ಲ ದಿನ ಇದ್ದು ಬಂದ ರಘು ರವರಿಗೆ ನೀಡಿದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈ ವಾರ ಅಂದರೆ ನಿನ್ನೆ ಸುದೀಪ್ ರವರು ಮನೆಯ ಎಲಿಮಿನೇಷನ್ ಮೂಲಕ ಒಬ್ಬರು ಸ್ಪರ್ದಿಯನ್ನು ಮನೆಯಿಂದ ಹೊರ ಕರೆದರು. ಪ್ರೇಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ರಘು ಗೌಡ ರವರನ್ನು ಮನೆಯಿಂದ ಹೊರ ಕರೆಯಲಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಅಷ್ಟೇನು ಸದ್ದು ಮಾಡದೆ ಇದ್ದರೂ ಕೂಡ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮವಾದ ಆಟವನ್ನು ಹಾಡುತ್ತಿದ್ದರು, ಆದರೆ ಅದ್ಯಾಕೋ ತಿಳಿದಿಲ್ಲ ಇನ್ನು ಕೊಂಚ ಹೆಚ್ಚಿನದನ್ನು ಪ್ರೇಕ್ಷಕರು ಇವರ ಕಡೆಯಿಂದ ನಿರೀಕ್ಷೆ ಮಾಡಿದ್ದರು ಎನಿಸುತ್ತಿದೆ.

ಪ್ರತಿ ಸದಸ್ಯರ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡ್ಡಿದ್ದ ರಘು ರವರು, ಹೆಚ್ಚೆಚ್ಚು ಸದ್ದು ಮಾಡದೇ ಇದ್ದರೂ ಪ್ರತಿ ಯೊಂದು ವಿಚಾರದಲ್ಲಿ ಕೂಡ ಇವರನ್ನು ಇವರು ತೊಡಗಿಸಿಕೊಂಡು ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಇನ್ನು ಹೀಗೆ ಒಟ್ಟಿನಲ್ಲಿ ಇವರ ಬಿಗ್ ಬಾಸ್ ಮನೆಯ ಜರ್ನಿ ಇದೀಗ ಕೊನೆಗೊಂಡಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ ಎರಡನೇ ಸ್ಪರ್ದಿಯಾಗಿ ಮನೆಯಿಂದ ಹೊರ ಬಂದಿದ್ದಾರೆ.

ಇನ್ನು ಈ ಸಮಯದಲ್ಲಿ ಬಿಗ್ ಬಾಸ್ ನಲ್ಲಿ ಮೊದಲನೇ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸ್ ಎರಡಲ್ಲೂ ಕೂಡ ರಘು ರವರು ವಾಹಿನಿ ಕಡೆಯಿಂದ ಪಡೆದುಕೊಂಡ ಸಂಭಾವನೆ ಕುರಿತು ವಿವರವಾಗಿ ಹೇಳುತ್ತೇವೆ ಕೇಳಿ. ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಆರಂಭದ ಮೊದಲೇ ನಡೆದ ಮಾತುಕಥೆಯಂತೆ ವಾಹಿನಿ ಕಡೆಯಿಂದ ರಘು ರವರಿಗೆ ಪ್ರತಿ ವಾರ 25 ಸಾವಿರ ಸಂಭಾವನೆಯನ್ನು ನೀಡಲಾಗುತ್ತಿತ್ತು. ಅದರಂತೆ ಇಂದಿನ ಲೆಕ್ಕಾಚಾರದ ಪ್ರಕಾರ ಒಟ್ಟಾರೆಯಾಗಿ 13 ವಾರಗಳಿಗೆ 3 ಲಕ್ಷದ 25 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆದಿದ್ದಾರೆ.

Comments are closed.