ಅಶ್ವಿನಿ ಮೇಡಂ, ಕೂರಲು ಬಂದಾಗ ಅಲ್ಲೇ ಇದ್ದ ಎನ್ಟಿಆರ್ ಅದೆಂತಹ ಕೆಲಸ ಮಾಡಿದ್ದಾರೆ ಗೊತ್ತೇ?? ಕುರ್ಚಿ ಮೇಲೆ ದೂಳು ಇದ್ದಾಗ ಮಾಡಿದ್ದೇನು ಗೊತ್ತೇ??

ನೆನ್ನೆ ಸಂಜೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಮೆಟ್ಟಿಲಿನ ಬಳಿ ನಡೆಯಿತು. ಕಾರ್ಯಕ್ರಮದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್, ಜೂನಿಯರ್ ಎನ್ಟಿಆರ್ ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್ ಅಶೋಕ್ ಸೇರಿದಂತೆ ರಾಜ್ಯದ ಪ್ರಮುಖ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷ ಅತಿಥಿಯಾಗಿ ಶ್ರೀಮತಿ ಸುಧಾ ಮೂರ್ತಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ ಪುನೀತ್ ರಾಜ್ ಅವರ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ಉಪಸ್ಥಿತವಿತ್ತು. ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, ಕುಮಾರಿ ವಂದಿತ, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ತನ್ನ ಸ್ನೇಹಿತನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದ ಜೂನಿಯರ್ ಎನ್ಟಿಆರ್ ಅವರು ಸಾಕಷ್ಟು ಕಾರಣಗಳಿಗೆ ಮೆಚ್ಚುಗೆಯಾದರು. ಅವರ ಸರಳತೆಯಿಂದ ಮತ್ತೆ ಪುನೀತ್ ಅವರನ್ನೇ ಜನರು ನೆನೆಯುವಂತೆ ಮಾಡಿದರು.

ನೆನ್ನೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಮತಿ ಸುಧಾಮೂರ್ತಿಯವರು ರಾಜ್ಯ ಸರ್ಕಾರದ ವತಿಯಿಂದ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನೀಡಿದರು. ಮಳೆಯ ನಡುವೆಯೂ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಬಸವರಾಜ ಬೊಮ್ಮಾಯಿ ಅವರು ಪುನೀತ ಎಂದೆಂದಿಗೂ ಅಮರ ಎಂದು ಹೇಳಿದರು. ರಜನಿಕಾಂತ್ ಅವರು ಎರಡೆರಡು ಬಾರಿ ಮಾತನಾಡಿ ಕಳೆದ ಒಂದು ವರ್ಷದಿಂದ ಆಡದೆ ಉಳಿದ ಅದೆಷ್ಟೋ ಪ್ರೀತಿಯ ಮಾತುಗಳನ್ನು ಹಾಡಿದರು. ಪುನೀತ್ ಅವರು ದೇವರ ಮಗು ಎಂದು ಕೊಂಡಾಡಿದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳಿಗೆ, ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಿದರು. ಇದೆ ವೇಳೆ ಜೂನಿಯರ್ ಎನ್ಟಿಆರ್ ಅವರ ನಡವಳಿಕೆ ಮೆಚ್ಚುಗೆಗೆ ಕಾರಣವಾಯಿತು. ಅವರ ಸರಳತೆ ಮತ್ತು ಹಿರಿಯರ ಮೇಲೆ ತೋರಿದ ಗೌರವ ಮತ್ತು ಅವರ ಕನ್ನಡದ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

jr ntr appu ashwini | ಅಶ್ವಿನಿ ಮೇಡಂ, ಕೂರಲು ಬಂದಾಗ ಅಲ್ಲೇ ಇದ್ದ ಎನ್ಟಿಆರ್ ಅದೆಂತಹ ಕೆಲಸ ಮಾಡಿದ್ದಾರೆ ಗೊತ್ತೇ?? ಕುರ್ಚಿ ಮೇಲೆ ದೂಳು ಇದ್ದಾಗ ಮಾಡಿದ್ದೇನು ಗೊತ್ತೇ??
ಅಶ್ವಿನಿ ಮೇಡಂ, ಕೂರಲು ಬಂದಾಗ ಅಲ್ಲೇ ಇದ್ದ ಎನ್ಟಿಆರ್ ಅದೆಂತಹ ಕೆಲಸ ಮಾಡಿದ್ದಾರೆ ಗೊತ್ತೇ?? ಕುರ್ಚಿ ಮೇಲೆ ದೂಳು ಇದ್ದಾಗ ಮಾಡಿದ್ದೇನು ಗೊತ್ತೇ?? 2

ವೇದಿಕೆಯ ಮೇಲೆ ಅಶ್ವಿನಿ ಪುನೀತ್ ಅವರು ಆಗಮಿಸಿದಾಗ ಅವರಿಗೆ ಕುರ್ಚಿ ಬಿಟ್ಟು ಕೊಟ್ಟಿದ್ದಲ್ಲದೆ ಅವರ ಕುರ್ಚಿಯನ್ನು ತಾವೇ ಸ್ವತಃ ಒರೆಸುವ ಮೂಲಕ ಅವರು ಸರಳತೆ ತೋರಿದರ. ಶ್ರೀಮತಿ ಸುಧಾ ಮೂರ್ತಿಯವರು ಆಗಮಿಸಿದಾಗಲೂ ಬಹಳ ಪ್ರೀತಿಯಿಂದ ಅವರನ್ನು ಸ್ವಾಗತಿಸಿಕೊಂಡು ಅವರಿಂದ ಆಶೀರ್ವಾದ ಪಡೆದು ಅವರಿಗೆ ನಮಿಸಿ ಅವರಿಗೂ ಕುರ್ಚಿಯನ್ನು ಬಿಟ್ಟು ಕೊಟ್ಟಿದ್ದಲ್ಲದೆ, ತಾವೇ ಸ್ವತಹ ಕುರ್ಚಿಯನ್ನು ಒರೆಸಿ ಅವರಿಗೆ ಕೂರಲು ಹೇಳಿ ಅತ್ಯಂತ ಪ್ರೀತಿಯಿಂದ ಅವರೊಂದಿಗೆ ಸಂಭಾವಿತರಾಗಿ ಮಾತನಾಡಿದರು. ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಸರಳತೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಇದರ ಜೊತೆಜೊತೆಗೆ ಜೂನಿಯರ್ ಎನ್ಟಿಆರ್ ಅವರು ಅತ್ಯಂತ ಅರ್ಥಪೂರ್ಣವಾಗಿ ಕನ್ನಡದಲ್ಲಿಯೇ ಮಾತನಾಡಿದರು. ಅದ್ಭುತವಾಗಿ ಕನ್ನಡದಲ್ಲಿ ಭಾಷಣ ಮಾಡಿದ ಅವರು ನಾನು ಒಬ್ಬ ಸ್ಟಾರ್ ನಟನಾಗಿ ಇಲ್ಲಿಗೆ ಬಂದಿಲ್ಲ, ಬದಲಾಗಿ ಪುನೀತ್ ಅವರ ಒಬ್ಬ ಒಳ್ಳೆಯ ಸ್ನೇಹಿತನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಕರ್ನಾಟಕ ರತ್ನ ಎನ್ನುವುದಕ್ಕೆ ಇರುವ ಅರ್ಥವೇ ಪುನೀತ್ ಎಂದು ಹೇಳಿದರು. ಇಡೀ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್ ಅವರು ನಡೆದುಕೊಂಡ ರೀತಿ ಅವರ ಕನ್ನಡದ ಭಾಷಣದ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.

Comments are closed.