ಅತ್ಯಂತ ಕಳಪೆ ಬ್ಯಾಟಿಂಗ್ ಮಾಡುತ್ತಿರುವ ಕೆ ಎಲ್ ರಾಹುಲ್ ರವರ ಬಗ್ಗೆ, ಖುದ್ದು ದ್ರಾವಿಡ್ ಹೇಳಿದ್ದೇನು ಗೊತ್ತೇ??

2022ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸತತವಾಗಿ ಕೆ ಎಲ್ ರಾಹುಲ್ ರವರು ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಎಲ್ಲ ಪಂದ್ಯಗಳಲ್ಲಿಯೂ ಅವರು ವಿಫಲರಾಗುವ ಮೂಲಕ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೂ ರಾಹುಲ್ ದ್ರಾವಿಡ್ ಅವರು ಕೆ ಎಲ್ ರಾಹುಲ್ ರವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆ ಎಲ್ ರಾಹುಲ್ ರವರು ಈ ಬಾರಿಯ ಟೂರ್ನಿಗೂ ಮೊದಲು ಆಯೋಜಿಸಲಾಗಿದ್ದ ಎರಡು ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿಸಿ ಭರವಸೆ ಮೂಡಿಸಿದ್ದರು. ಆದರೆ ದುರಾದೃಷ್ಟವಶಾತ್ ಅವರು ಅಭ್ಯಾಸ ಪಂದ್ಯದ ನಂತರದ ಟೂರ್ನಿಯ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ನಿರಂತರವಾಗಿ ಅವರು ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಕೇವಲ 4 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.

ಅನಂತರ ನಡೆದ ನೆದರ್ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೂ ಅವರು ತಲಾ ಒಂಬತ್ತು ರನ್ ಮಾತ್ರ ಗಳಿಸಿ ಸೋಲನ್ನಪ್ಪಿದರು. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿ ಒಂದರಲ್ಲಿ ರಾಹುಲ್ ದ್ರಾವಿಡ್ ಅವರು ಮಾತನಾಡಿದ್ದಾರೆ. ಅವರು ಕೆ ಎಲ್ ರಾಹುಲ್ ಪರವಾಗಿ ಮಾತನಾಡಿದ್ದಾರೆ. ಕೆ ಎಲ್ ರಾಹುಲ್ ರವರು ಭಾರತ ತಂಡದ ಅತ್ಯುತ್ತಮ ಆಟಗಾರ. ಅವರು ಅದ್ಭುತ ಪ್ರದರ್ಶನ ತೋರುವುದರಲ್ಲಿ ಯಾವ ಅನುಮಾನವೂ ಇಲ್ಲ .ಅದ್ಭುತ ದಾಖಲೆ ಹೊಂದಿರುವ ಅವರು ಒಳ್ಳೆಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಟಿ ಟ್ವೆಂಟಿ ಕ್ರಿಕೆಟ್ ಆಗಿರುವುದರಿಂದ ಇಂತಹ ಏರಿಳಿತಗಳು ಸಾಮಾನ್ಯವಾಗಿರುತ್ತದೆ. ಅಲ್ಲದೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳಿಗೆ ಇಂಥ ವಿಷಯಗಳು ಸುಲಭದ್ದೇನು ಆಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

rahul dravid kl rahul | ಅತ್ಯಂತ ಕಳಪೆ ಬ್ಯಾಟಿಂಗ್ ಮಾಡುತ್ತಿರುವ ಕೆ ಎಲ್ ರಾಹುಲ್ ರವರ ಬಗ್ಗೆ, ಖುದ್ದು ದ್ರಾವಿಡ್ ಹೇಳಿದ್ದೇನು ಗೊತ್ತೇ??
ಅತ್ಯಂತ ಕಳಪೆ ಬ್ಯಾಟಿಂಗ್ ಮಾಡುತ್ತಿರುವ ಕೆ ಎಲ್ ರಾಹುಲ್ ರವರ ಬಗ್ಗೆ, ಖುದ್ದು ದ್ರಾವಿಡ್ ಹೇಳಿದ್ದೇನು ಗೊತ್ತೇ?? 2

ಟೀ ಟ್ವೆಂಟಿ ವಿಶ್ವಕಪ್ ಬಹಳ ಸವಾಲಿನಿಂದ ಕೂಡಿದೆ. ಟೂರ್ನಿಗೂ ಮೊದಲ ಅಭ್ಯಾಸ ಪಂದ್ಯಗಳಲ್ಲಿ ಅವರು ಅದ್ಭುತವಾದ ಪ್ರದರ್ಶನವನ್ನು ತೋರಿದ್ದಾರೆ. ಮುಂದೆಯು ಅವರ ಆಟ ಲಯಕೆ ಮರಳಲಿದೆ ಎನ್ನುವ ನಂಬಿಕೆ ನನಗಿದೆ ಎಂದರು. ರಾಹುಲ್ ರವರ ಸಾಮರ್ಥ್ಯದ ಬಗ್ಗೆ ನನಗೆ ಅರಿವಿದೆ. ಆಸ್ಟ್ರೇಲಿಯಾದಂತಹ ಮೈದಾನದಲ್ಲಿ ಅವರ ಆಟದ ರೀತಿ ಬಹುಶಹ ಸರಿಯಾಗಿದೆ ಎಂದು ನನಗೆ ಅನಿಸುತ್ತದೆ. ಕೆ ಎಲ್ ರಾಹುಲ್ ರವರು ತಮ್ಮ ಬ್ಯಾಟಿಂಗ್ನಲ್ಲಿ ಆಲ್ ರೌಂಡ್ ಆಟವನ್ನು ಹೊಂದಿದ್ದಾರೆ. ಅಲ್ಲದೆ ಅವರು ಬ್ಯಾಟಿಂಗ್ನಲ್ಲಿ ಬ್ಯಾಕ್ ಫುಟ್ ಶಕ್ತಿಯನ್ನು ಹೊಂದಿದ್ದಾರೆ. ಇಲ್ಲಿನ ಕಂಡೀಶನ್ಗೆ ಬ್ಯಾಕ್ ಫುಟ್ ಸೂಕ್ತ ಎಂದು ನನಗೆ ಅನಿಸುತ್ತದೆ. ಹೀಗಾಗಿ ರಾಹುಲ್ ಅವರ ಆಟದ ಮೇಲೆ ನನಗೆ ನಂಬಿಕೆ ಇದೆ. ಅವರು ಮುಂದಿನ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ತೋರಲಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

Comments are closed.