Kannada News: 2011 ರಲ್ಲಿ ಶೋ ಮೂಲಕ ಎಂಟ್ರಿ ಕೊಟ್ಟ ಅಮೂಲ್ಯ ಗೌಡ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??

ನಟಿ ಅಮೂಲ್ಯ ಗೌಡ ಅವರು ಕಮಲಿ ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡವರು. ಅವರ ನಿಜವಾದ ಹೆಸರೇ ಮರೆತು ಹೋಗುವಷ್ಟು ಅವರ ಧಾರವಾಹಿಯ ಪಾತ್ರ ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು. ಈ ಮೊದಲು ಕೂಡ ಅವರು ಸಾಕಷ್ಟು ಟಿವಿ ಶೋ ಮತ್ತು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು ಸಹ ಅವರಿಗೆ ಕಮಲಿ ದೊಡ್ಡಮಟ್ಟದ ಪ್ರಸಿದ್ಧಿ ತಂದುಕೊಟ್ಟಿತು. ಅದೇ ಪ್ರಸಿದ್ಧಿ ಅವರನ್ನು ಇದೀಗ ಬಿಗ್ ಬಾಸ್ ಸೀಸನ್ 9ರ ಮನೆಗೂ ಕರೆಸಿಕೊಂಡಿದೆ ಎಂದೇ ಹೇಳಬಹುದು. ಕಮಲಿಯವರು ಬಿಗ್ ಬಾಸ್ ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅತ್ಯಂತ ಸುಂದರವಾಗಿರುವ ಅವರು ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣುತ್ತಾರೆ. ಅಷ್ಟಕ್ಕೂ ನಟಿ ಅಮೂಲ್ಯ ಅವರ ನಿಜವಾದ ವಯಸ್ಸು ಕೇಳಿದರೆ ನೀವು ಅಚ್ಚರಿಪಡ್ತೀರಿ. ಅವರು ಅಷ್ಟೊಂದು ವಯಸ್ಸಾದಂತೆ ಕಾಣುವುದಿಲ್ಲ. ಇನ್ನು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರಾದರು ಅವರಿಗೆ ಕಡಿಮೆ ಏನು ವಯಸ್ಸಾಗಿಲ್ಲ.

ನಟಿ ಅಮೂಲ್ಯ ಗೌಡ ಅವರು 2011ರಲ್ಲಿ ಜೀ ಕನ್ನಡದ ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಆನಂತರ ಅವರು ಜಿ ಕನ್ನಡ ವಾಹಿನಿಯ ಪುನರ್ ವಿವಾಹ ಧಾರವಾಹಿಯಲ್ಲೂ ಅಭಿನಯಿಸಿದರು. ಇದಾದ ಮೇಲೆ ಅವರು ಉದಯವಾಹಿನಿಯ ಅರಮನೆ ಧಾರವಾಹಿಯಲ್ಲಿ ಕಾಣಿಸಿಕೊಂಡರು. ಕ್ರಮೇಣ ಒಳ್ಳೆ ಒಳ್ಳೆ ಅವಕಾಶಗಳನ್ನು ಪಡೆಯುತ್ತಾ ಹೋದರು. ಕಿರುತೆರೆಯಲ್ಲಿ ದೊಡ್ಡಮಟ್ಟದ ಹೆಸರು ಗಳಿಸುತ್ತಾ ಹೋದರು. ಅರಮನೆ ದಾರವಾಹಿಯಲ್ಲಿ ಅವರು ನೆಗೆಟಿವ್ ರೋಲ್ ಮಾಡಿದ್ದರು. ಆನಂತರ ಅಮೂಲ್ಯ ಅವರು ಕಮಲಿ ಧಾರವಾಹಿಯ ಕಮಲಿ ಪಾತ್ರದ ಮೂಲಕ ಕಾಣಿಸಿಕೊಂಡರು. ಈ ಧಾರಾವಾಹಿ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಆನಂತರ ಅಮೂಲ್ಯ ಅವರು ತೆಲುಗಿನ ನಂಬರ್ ಒನ್ ಧಾರವಾಹಿ ಕಾರ್ತಿಕ ದೀಪಂ ಅಲ್ಲಿಯೂ ಕೂಡ ಪಾತ್ರವಹಿಸಿ ತೆಲುಗು ಇಂಡಸ್ಟ್ರಿಯಲ್ಲೂ ಹೆಸರು ಮಾಡಿದರು. ಕಮಲಿ ಧಾರಾವಾಹಿ ಆರಂಭದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಲ್ಲದೆ ಅತಿ ಹೆಚ್ಚು ಟಿಆರ್ಪಿ ಕೂಡ ಪಡೆದುಕೊಳ್ಳುತ್ತಿತ್ತು.

amulya ag | Kannada News: 2011 ರಲ್ಲಿ ಶೋ ಮೂಲಕ ಎಂಟ್ರಿ ಕೊಟ್ಟ ಅಮೂಲ್ಯ ಗೌಡ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ??
Kannada News: 2011 ರಲ್ಲಿ ಶೋ ಮೂಲಕ ಎಂಟ್ರಿ ಕೊಟ್ಟ ಅಮೂಲ್ಯ ಗೌಡ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? 2

ಇತ್ತೀಚಿಗಷ್ಟೇ ಈ ದಾರಾವಾಹಿ ಮುಗೀತು, ಕೊನೆಯವರೆಗೂ ಈ ದಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ಗಳಿದ್ದಲ್ಲದೆ ಕಮಲಿ ಧಾರವಾಹಿಯಲ್ಲಿ ಕಮಲಿ ಪಾತ್ರ ಮಾಡಿದ ಅಮೂಲ್ಯ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದೇ ಹೆಸರು ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಸಹಕರಿಸಿತು ಎಂದು ಹೇಳಬಹುದು. ಇದೀಗ ಸೀಸನ್ ಒಂಬತ್ತರ ಬಿಗ್ ಬಾಸ್ ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಮಾತು, ಆಟ, ನಗು, ಸೌಂದರ್ಯದ ಮೂಲಕ ಎಲ್ಲರಿಗೂ ಕೂಡ ಇಷ್ಟವಾಗುತ್ತಿದ್ದಾರೆ. ಅಮೂಲ್ಯ ಅವರ ನಿಜವಾದ ವಯಸ್ಸು ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ. ಹೌದು ಅವರಿಗೆ ಈಗಾಗಲೇ 29 ವರ್ಷ ವಯಸ್ಸು. ಸಾಮಾನ್ಯವಾಗಿ ಅವರನ್ನು ನೋಡಿದರೆ ಇಷ್ಟು ವಯಸ್ಸಾದವರಂತೆ ಕಾಣಿಸುವುದಿಲ್ಲ, ಅಷ್ಟು ಸುಂದರವಾಗಿದ್ದಾರೆ. ಅಮೂಲ್ಯ ಅವರು ಹುಟ್ಟಿದ್ದು ಜನವರಿ 8 1993ರಲ್ಲಿ. ಮುಂದಿನ ಜನವರಿಗೆ ಅವರಿಗೆ ಬರೋಬರಿ 30 ವರ್ಷಗಳು ತುಂಬುತ್ತದೆ.

Comments are closed.