ಒಂದು ಕಾಲದ ಟಾಪ್ ನಟ ಕಲ್ಯಾಣ್ ರವರ ಮಗ ಯಾರು ಗೊತ್ತೇ?? ಸೂಪರ್ ಸ್ಟಾರ್ ನಟ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಾವು ಮೊದಲಿನಿಂದಲೂ ಲೆಕ್ಕ ಹಾಕಿಕೊಂಡು ಬಂದರೆ ಹಲವಾರು ನಟರು ಮೊದಲೇ ಜನಿಸಿ ಕನ್ನಡ ಚಿತ್ರರಂಗವನ್ನು ಆಳಿ ನಂತರ ನಮ್ಮನ್ನೆಲ್ಲಾ ಬಿಟ್ಟುಹೋಗಿದ್ದಾರೆ ಅಂತವರಲ್ಲಿ ಕಲ್ಯಾಣಕುಮಾರ್ ಕೂಡ ಒಬ್ಬರು. 1954ರ ನಟಶೇಖರ ಎಂಬ ಕನ್ನಡ ಚಿತ್ರದ ಮೂಲಕ ಮೇರು ನಟ ಕಲ್ಯಾಣ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ನಂತರ ಇವರು ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳ ಆದಂತಹ ಓಹಿಲೇಶ್ವರ ಮುತ್ತೈದೆ ಭಾಗ್ಯ ಸದಾರಮೆ ಬೆಟ್ಟದ ಕಳ್ಳ ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ.

ಇನ್ನು ಕನ್ನಡ ಚಿತ್ರರಂಗದ ಮೊದಲ ಕಲರ್ ಚಿತ್ರ ಎಂದೇ ಜನಪ್ರಿಯ ಜನಪ್ರಿಯವಾಗಿರುವ ಅಮರಶಿಲ್ಪಿ ಜಕಣಾಚಾರಿ ಚಿತ್ರದಲ್ಲಿ ನಾಯಕನಟನಾಗಿ ನಟಿಸುವ ಮೂಲಕ ಕನ್ನಡಿಗರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು. ಇನ್ನು ಕನ್ನಡ ಚಿತ್ರರಂಗದ ಕುಮಾರ ತ್ರಯರಲ್ಲಿ ಕಲ್ಯಾಣ್ ಕುಮಾರ್ ರವರು ಮೊದಲನೆಯವರು. ಇನ್ನು ಇಬ್ಬರು ರಾಜಕುಮಾರ್ ಹಾಗೂ ಉದಯ್ ಕುಮಾರ್ ರವರು. ಏನು ಕಲ್ಯಾಣ್ ಕುಮಾರ್ ಅವರು ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಸೇರಿದಂತೆ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಮೇರು ನಟಿ ಯರಾದಂತಹ ಆರತಿ ಭಾರತಿ ಜಾನಕಿ ಹೀಗೆ ಹಲವಾರು ನಟಿಯರೊಂದಿಗೆ ನಾಯಕನಟರಾಗಿ ಕಲ್ಯಾಣ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಕಲ್ಯಾಣ್ ಕುಮಾರ್ ರವರ ಮಗ ಈಗಲೂ ಕೂಡ ಖ್ಯಾತ ನಟರಾಗಿದ್ದಾರೆ ಅವರು ಯಾರು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ಹೇಳುತ್ತೇವೆ. ಹೌದು ಸ್ನೇಹಿತರೆ ನಟ ಕಲ್ಯಾಣ್ ಕುಮಾರ್ ರವರು ನಟಿ ರೇವತಿ ಅವರನ್ನು ಮದುವೆಯಾಗಿ ಭರತ್ ಕಲ್ಯಾಣ್ ಹಾಗೂ ದೀಪಕ್ ಕಲ್ಯಾಣ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಇನ್ನು ಭರತ್ ಕಲ್ಯಾಣ್ ರವರು 2010 ರಲ್ಲಿ ಯಕ್ಷ ಎಂಬ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದರು. ಇವರು ಹಲವಾರು ಕನ್ನಡ ಹಾಗೂ ತಮಿಳು ಚಿತ್ರ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.