ತನ್ನ ಗಂಡ ದುಡ್ಡು ಖರ್ಚು ಮಾಡಬಾರದು, ಮದುವೆಯಾಗುವ ಇಂಗಿತ ತೋರಿಸಿ ಗಂಡ ಹೇಗಿರಬೇಕು ಎಂದು ತಿಳಿಸಿದ ಕಂಗನಾ. ಹೇಗಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ನಟಿ ಕಂಗನಾ ರಣಾವತ್ ಸದ್ಯ ಬಾಲಿವುಡ್ ನ ಬಹು ಬೇಡಿಕೆಯ ನಟಿ ಕೂಡ ಹೌದು. ಇತ್ತೀಚಿಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನ ಸೂರೆಗೊಂಡಿದ್ದಾರೆ. ನಟಿ ಕಂಗನಾ ಸಿನಿಮಾಗಳಿಂದ ಸುದ್ದಿಯಾಗುವುದಕ್ಕಿಂತ ಸೂಶಿಯಲ್ ಮೀಡಿಯಾಗಳಲ್ಲಿ ಆವರು ಮಾಡುವ ಕಮೆಂಟ್ ಪೋಸ್ಟ್ ಗಳಿಂದಲೇ ಹೆಚ್ಚು ಚಾಲ್ತಿಯಲ್ಲಿರುತ್ತಾರೆ.

ಹೌದು ನಟಿ ಕಂಗನಾ ರಣಾವತ್ ಸದಾ ಯಾವುದಾದರೂ ವಿಷಯಕ್ಕೆ ಗಮನಸೆಳೆಯುತ್ತಲೇ ಇರುತ್ತಾರೆ. ಇನ್ನು ದೇಶದಲ್ಲಿ ನಡೆಯುವ ಎಲ್ಲಾ ವಿಷಯಗಳಿಗೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಇದು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರ ಆಕ್ರೋಶಕ್ಕೂ ಕಾರಣವಾಗುತ್ತದೆ. ಇತ್ತೀಚಿಗೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದರು ನಟಿ ಕಂಗನಾ. ಇದೀಗ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಕಂಗನಾ ಸುತ್ತ ಸುತ್ತುತ್ತಿದೆ. ಅದೇ ಅವರ ಮದುವೆ.

ನಟಿ ಕಂಗನಾ ತಮ್ಮ ನಟನಾ ವೃತ್ತಿಯಲ್ಲಿ ಬ್ಯುಸುಯಾಗಿದ್ದು ಅವರ ಮದುವೆ ವಿಷಯದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಇತ್ತೀಚಿಗೆ ತಲೈವಿ ಸಿನಿಮಾ ಪ್ರಮೋಶನ್ ಗಾಗಿ ಕಪಿ ಶರ್ಮಾ ಶೋ ಗೆ ಆಗಮಿಸಿದ್ದರು ಕಂಗನಾ. ಇಲ್ಲಿ ಭಾವಿ ಪತಿ ಹೇಗಿರಬೇಕು ಎಂದು ಸಣ್ಣ ಹಿಂಟ್ ಬಿಟ್ಟುಕೊಟ್ಟಿದ್ದಾರೆ ಕಂಗನಾ. ಹೌದು, ಕಪಿಲ್ ಶರ್ಮಾ ಅವರು ಕಂಗನಾ ಬಳಿ ನಿಮ್ಮ ಪತಿ ಹೇಗಿರಬೇಕು, ಕಂಜೂಸ್ ಆಗಿರಬೇಕಾ ಖರ್ಚು ಮಾಡುವವರಾ ಎಂದು ಕೇಳಿದ್ದಕ್ಕೆ ತಮಾಷೆಯಾಗಿ ಉತ್ತರಿಸಿದ್ದಾರೆ ಕಂಗನಾ. ನನ್ನ ಪತಿ ಕಂಜೂಸ್ ಆಗಿರಬೇಕು ಏಕೆಂದರೆ ನಾನೇ ಖರ್ಚು ಮಾಡುತ್ತೇನೆ ಎಂದು ಹಾಸ್ಯ ಚಟಾಗಿ ಹಾರಿಸಿದ್ದಾರೆ. ಇನ್ನುಕಂಗನಾ ಮದುವೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಂತೂ ಹಾಗೆಯೇ ಉಳಿದಿದೆ.

Comments are closed.