Kannada News: ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು

Kannada News: ನಟ ಅಭಿಷೇಕ್ ಅಂಬರೀಶ್ (Abhishek Ambrish) ಅವರ ನಿಶ್ಚಿತಾರ್ಥ ಮೊನ್ನೆ ಅಷ್ಟೇ ನೆರವೇರಿದೆ. ಸಾಕಷ್ಟು ವರ್ಷಗಳಿಂದ ಪರಿಚಯವಿದ್ದ, ತಾವು ಪ್ರೀತಿಸುತ್ತಿರುವ ಹುಡುಗಿಯ ಜೊತೆಗೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೊನ್ನೆ ಈ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಂದನವನದ ದೊಡ್ಡ ತಾರಾ ಬಳಗವೇ ಸೇರಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan), ಯಶ್ (Yash) ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸುಮಲತಾ ಅಂಬರೀಶ್ (Sumalatha Ambarish) ತಮ್ಮ ಪುತ್ರನ ನಿಶ್ಚಿತಾರ್ಥ ಸಮಾರಂಭವನ್ನು ಬಹಳ ವೈಭವದಿಂದ ನಡೆಸಿದ್ದಾರೆ. ಈಗಷ್ಟೇ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಅಭಿಷೇಕ್ ಅವರು ಇನ್ನು ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದಾರೆ. ಜೊತೆಗೆ ಅಭಿಷೇಕ್ ಅವರು ವಿವಾಹವಾಗುತ್ತಿರುವ ಹುಡುಗಿ ಅಭಿಷೇಕ್ಗಿಂತಲೂ ವಯಸ್ಸಿನಲ್ಲಿ ದೊಡ್ಡವರು ಎಂದು ತಿಳಿದುಬಂದಿದೆ. ಇಷ್ಟಕ್ಕೂ ಈ ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವುದು ನಿಮಗೆ ಗೊತ್ತೇ?

ಅಭಿಷೇಕ್ ಅಂಬರೀಶ್ ಅವರು ಮೊನ್ನೆ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ರಿಂಗ್ ತೊಡಿಸುವ ಮೂಲಕ ಮದುವೆಗೆ ಮೊದಲ ಮುನ್ನುಡಿ ಬರೆದಿದ್ದಾರೆ. ಅವಿವ ಎನ್ನುವ ಹುಡುಗಿಯ ಜೊತೆಗೆ ಅವರ ನಿಶ್ಚಿತಾರ್ಥ ನೆರವೇರಿದೆ. ಅವಿವ (Aviva Bidapa) ಬಹು ಬೇಡಿಕೆಯ ಫ್ಯಾಶನ್ ಡಿಸೈನರ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟಕ್ಕೂ ಈ ಜೋಡಿಗೆ ಐದಾರು ವರ್ಷಗಳಿಗಿಂತ ಮೊದಲೇ ಪರಿಚಯವಿದೆ. ವಿದೇಶದಲ್ಲಿ ಇವರಿಬ್ಬರ ಪರಿಚಯವಾಗಿದ್ದಂತೆ, ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಆನಂತರ ಇಬ್ಬರು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದೀಗ ಈ ಜೋಡಿ ಇಬ್ಬರು ಕುಟುಂಬದವರ ಒಪ್ಪಿಕೆಯ ಮೇರೆಗೆ ಎಲ್ಲರೂ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಬರುವ ಮುಂದಿನ ಜೂನ್ ಅಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅವಿವ ಅಭಿಷೇಕ್ ಅವರಿಗಿಂತಲೂ ವಯಸ್ಸಿನಲ್ಲಿ ದೊಡ್ಡವರು. ಇದನ್ನು ಓದಿ..Kannada News: ಎಂಗೇಜ್ಮೆಂಟ್ ನಲ್ಲಿ ಕರುನಾಡಿನ ಮಗ ಅಭಿಷೇಕ್, ಅವೀವಾ ರವರಿಗೆ ಕೊಟ್ಟ ಉಂಗುರದ ಬೆಲೆ ಕೇಳಿದರೆ, ಕರ್ನಾಟಕನೇ ಶೇಕ್ ಆಗುತ್ತೆ.

kannada news abhishek aviva 2 | Kannada News: ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು
Kannada News: ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು 2

ಅಭಿಷೇಕ್ ಮತ್ತು ಅವಿವಾ ಇಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಶೀಘ್ರವೇ ಇವರಿಬ್ಬರು ಹಸೆಮಣೆ ಏರಲಿದ್ದಾರೆ. ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಈ ಜೋಡಿ ಒಂದಾಗುತ್ತಿದೆ. ಅಭಿಷೇಕ್ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಜೋರಾಗಿಯೇ ಓಡಾಡಿತ್ತು. ಆದರೆ ಮದುವೆಯ ವಿಷಯವಾಗಿ ಮಾಧ್ಯಮದವರು ಅಭಿಷೇಕ ಅವರನ್ನು ಪ್ರಶ್ನಿಸಿದಾಗ ಅವರು ಏನನ್ನು ಹೇಳಿಕೊಂಡಿರಲಿಲ್ಲ. ಇದೆಲ್ಲ ಕೇವಲ ಊಹಾಪೋಹ ಅಷ್ಟೇ ಎಂದು ಹೇಳಿದ್ದರು. ಸುಮಲತಾ ಅವರನ್ನು ಸಹ ಮಗನ ಮದುವೆಯ ವಿಷಯವಾಗಿ ಕೇಳಿದಾಗ ಆ ರೀತಿ ಏನು ಇಲ್ಲ, ಇದ್ದರೆ ನಿಮಗೆ ತಿಳಿಸುತ್ತೇವೆ. ಇದು ಕೇವಲ ವದಂತಿ ಅಷ್ಟೇ ಎಂದು ಹೇಳಿದ್ದರು. ಆದರೆ ಇದೀಗ ಅದ್ದೂರಿಯಾಗಿ ಮಗನ ನಿಶ್ಚಿತಾರ್ಥ ಸಮಾರಂಭವನ್ನು ಅವರು ನಡೆಸಿದ್ದಾರೆ. ಅಂದಹಾಗೆ ಅಭಿಷೇಕ್ ಅಂಬರೀಶ್ ಅವರಿಗೆ ಈಗ 29 ವರ್ಷ ವಯಸ್ಸು. ಅವಿವಾ ಅವರಿಗೆ 32 ವರ್ಷ ವಯಸ್ಸು ಎಂದು ತಿಳಿದು ಬಂದಿದೆ. ಅಂದರೆ ಅಭಿಷೇಕ್ ಮತ್ತು ಅವಿವ ಅವರಿಗೆ ಮೂರು ವರ್ಷ ಅಂತರವಿದೆ. ಅವಿವ ಅಭಿಷೇಕ್ ಗಿಂತಲೂ ಮೂರು ವರ್ಷ ವಯಸ್ಸಿನಲ್ಲಿ ದೊಡ್ಡವರು. ಇದನ್ನು ಓದಿ.. Kannada News: ತೆಲುಗು ಚಿತ್ರರಂಗದಿಂದ ಕನ್ನಡತಿ ಪೂಜಾ ರವರನ್ನು ಹೊರದಬ್ಬಿದ ರಶ್ಮಿಕಾ: ಏನು ಮಾಡಿದ್ದಾರೆ ಗೊತ್ತೇ??

Comments are closed.