Kannada News: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್; ಸಂಭಾವನೆ ದಾಖಲೆಗಲ್ಲಿ ಪುಡಿ ಪುಡಿ ಮಾಡಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

Kannada News: ನಟ ಅನಿರುದ್ (Anirudh) ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಕಾರಣಾಂತರದಿಂದ ಅವರು ಜೊತೆ ಜೊತೆಯಲಿ ದಾರವಾಹಿಯಿಂದ ಹೊರ ನಡೆದಾಗ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರಾಶೆ ಆಗಿತ್ತು. ಇದೀಗ ಅನಿರುದ್ಧ ಅವರೆಲ್ಲರಿಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ತಾವು ಮತ್ತೆ ಧಾರವಾಹಿಗೆ ಮರಳುತ್ತಿರುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಜೊತೆ ಜೊತೆಯಲ್ಲಿ (Jothe Jotheyali) ಧಾರವಾಹಿ ತಂಡಕ್ಕೆ ಮತ್ತೆ ಸೇರಿಕೊಳ್ಳುತ್ತಿಲ್ಲ. ಬದಲಾಗಿ ಅವರು ಹೊಸದೊಂದು ಧಾರವಾಹಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಕುರಿತು ಅವರೇ ಸ್ವತಃ ತಮ್ಮ instagram ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಇದೀಗ ಅವರು ಅಭಿನಯಿಸುತ್ತಿರುವ ಹೊಸ ಧಾರವಾಹಿಗೆ ಪಡೆಯುತ್ತಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಹಿಂದೆ ಪಡೆಯುತ್ತಿದ್ದ ಸಂಭಾವನೆಯನ್ನು ಮೀರಿಸಿ ದಾಖಲೆ ಮಟ್ಟದಲ್ಲಿ ಅವರು ಈ ಹೊಸ ಧಾರವಾಹಿಗೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ನಟ ಅನಿರುದ್ ಸಿನಿಮಾ ಮತ್ತು ಸೀರಿಯಲ್ ಎರಡರಲ್ಲೂ ದೊಡ್ಡ ಮಟ್ಟದ ಹೆಸರು ಮಾಡಿದವರು. ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಅವರು ಇತ್ತೀಚಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅವರ ಅಭಿನಯದ ಜೊತೆ ಜೊತೆಯಲಿ ಧಾರವಾಹಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿತ್ತು. ಟಿ ಆರ್ ಪಿ ಯಲ್ಲಿ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿತ್ತು. ಆನಂತರ ಕೆಲವು ಕಾರಣಗಳಿಂದಾಗಿ ಅವರು ಜೊತೆಜೊತೆಯಲ್ಲಿ ಧಾರವಾಹಿಯ ತಂಡದಿಂದ ಹೊರ ನಡೆಯಬೇಕಾಗಿತ್ತು. ಬಹುಶಃ ಇಂಥದೊಂದು ಬೆಳವಣಿಗೆ ಕಿರುತೆರೆಯಲ್ಲಿ ಹಿಂದೆ ನಡೆದಿರಲಿಲ್ಲ. ಆನಂತರ ಅವರನ್ನು ಬೇರೆ ಯಾವ ಸೀರಿಯಲ್ ಗಳಲ್ಲಿಯೂ ನಟಿಸದ ಹಾಗೆ ಕಿರುತೆರೆಯಿಂದಲೇ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಕಲಾವಿದರನ್ನು, ಕಲೆಯನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ ಎಂಬಂತೆ ಅವರು ಹೊಸ ಧಾರವಾಹಿಯ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

kannada news anirudh | Kannada News: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್; ಸಂಭಾವನೆ ದಾಖಲೆಗಲ್ಲಿ ಪುಡಿ ಪುಡಿ ಮಾಡಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?
Kannada News: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್; ಸಂಭಾವನೆ ದಾಖಲೆಗಲ್ಲಿ ಪುಡಿ ಪುಡಿ ಮಾಡಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? 2

ಎಸ್. ನಾರಾಯಣ್ (S Narayan) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂರ್ಯವಂಶ (Suryavamsha) ಎನ್ನುವ ಹೊಸ ಧಾರವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಈ ಧಾರವಾಹಿಯು ಉದಯವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಇದರ ಕುರಿತು ಅನಿರುದ್ಧ್ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. “ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ, ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ” ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಧಾರಾವಾಹಿಯಲ್ಲಿ ನಟಿಸುವುದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆಯನ್ನು ಸಹ ಪಡೆಯುತ್ತಿದ್ದಾರೆ. ಪ್ರತಿ ಒಂದು ಎಪಿಸೋಡ್ಗಾಗಿ ಅವರು ಬರೋಬರಿ 1.5 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಅವರು ಪ್ರತಿ ಕಂತಿಗಾಗಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Comments are closed.